Diamond Ganesh Idol: ವಿಶ್ವದಲ್ಲೇ ಅತ್ಯಂತ ದುಬಾರಿ ಈ ‘ವಜ್ರದ ಗಣೇಶ’ – ಉದ್ಯಮಿ ಪ್ರತಿಷ್ಠಾಪಿಸಿದ ಈ ಗಣಪತಿಯ ಬೆಲೆ ಕೇಳಿದ್ರೆ ನೀವೇ ಹೌಹಾರುತ್ತೀರಾ!!

nation news diamond ganesh idol worth crores installed at gujarat

Diamond Ganesh Idol: ಭಾರತೀಯ ಸಂಸ್ಕೃತಿಯಲ್ಲಿ (Indian Tradition) ಪ್ರತಿ ಪೂಜೆಯೂ (Puja) ಕೂಡ ವಿಶೇಷವಾಗಿದ್ದು, ಅದರಲ್ಲೂ ವಿಘ್ನ ವಿನಾಶಕ ಗಣೇಶನಿಗೆ ಮೊದಲ ಪೂಜೆ ಸಲ್ಲುತ್ತದೆ. ಗಣೇಶ ಚತುರ್ಥಿ ಯಂದು ಗಣಪತಿಯನ್ನು ಸಿಂಗರಿಸಿ ಹೂವಿಟ್ಟು ಗಂಧ ಹಚ್ಚಿ ಪೂಜಿಸುವುದರಲ್ಲಿಯೇ ಭಕ್ತರು ಪರಮಾನಂದ ಕಾಣುತ್ತಾರೆ. ಅದರಲ್ಲಿಯೂ ಗಣೇಶ ಹಬ್ಬದಂದು ಗಣಪನಿಗೆ ವಿಶೇಷ ಪೂಜೆಗಳು (Ganapathi Pooja) ವಿಶೇಷ ಅಲಂಕಾರಗಳಂತು ಇದ್ದೇ ಇರುತ್ತವೆ. ಆದ್ರೆ ಗಣಪನ ಪೂಜೆಗೆ ಒಬ್ಬ ವ್ಯಾಪಾರಿ ವಿಶ್ವದ ಅತ್ಯಂತ ದುಬಾರಿ ವಜ್ರದ ಗಣೇಶ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಹೌದು, 182.3 ಕ್ಯಾರೆಟ್ ವಜ್ರದ ಈ ಗಣಪತಿ ಮೂರ್ತಿಯ ಬೆಲೆ ಕೇಳಿದರೆ ನೀವೊಮ್ಮೆ ಶಾಕ್ ಆಗ್ತೀರಾ!

 

ಮಾಹಿತಿ ಪ್ರಕಾರ, 15 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಕನುಭಾಯಿ ಎಂಬ ವಜ್ರ ವ್ಯಾಪಾರಿ ಬೆಲ್ಜಿಯಂ ನಿಂದ ಕಚ್ಚಾ ವಜ್ರಗಳನ್ನು ಖರೀದಿಸಿ ಭಾರತಕ್ಕೆ ತಂದಿದ್ದರು. ಒಂದು ದಿನ ಕನುಭಾಯಿ ಅವರ ತಂದೆಗೆ ತನ್ನ ಮಗ ತಂದ ಕಚ್ಛಾ ವಜ್ರಗಳಲ್ಲಿ ಒಂದು ವಜ್ರ ಗಣಪತಿಯ ಆಕಾರದಲ್ಲಿದೆ ಎಂದು ಕನಸು ಬಿತ್ತಂತೆ. ಮರುದಿನ ಅದನ್ನು ಪರಿಶೀಲಿಸಿದಾಗ ಗಣೇಶನ ಆಕಾರದ ವಜ್ರವೊಂದು ಕಂಡಿತು.

ಮೂಲತಃ ಸೂರತ್​ನ ವಜ್ರದ ವ್ಯಾಪಾರಿ ಕನುಭಾಯಿ ರಾಮ್‌ಜಿಭಾಯಿ ಅಸೋದರಿಯಾ ಇವರು ಇದರ ಒಡೆಯನಾಗಿದ್ದು, ಇವರು ಕರಮ್ ಎಕ್ಸ್‌ಪೋರ್ಟ್ ಡೈಮಂಡ್ ಎಂಬ ಕಂಪನಿಯನ್ನು ಹೊಂದಿದ್ದು, ಈ ವಜ್ರದ ಗಣೇಶ ಮೂರ್ತಿಯ ಮೌಲ್ಯ ಬರೋಬ್ಬರಿ 600 ಕೋಟಿ ರೂಪಾಯಿ ಎಂದಿದ್ದಾರೆ.

ಇದು ವಿಶಿಷ್ಟ ವಜ್ರವಾಗಿರುವ ಕಾರಣ ಇದು ಲಂಡನ್‌ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಅಲ್ಲದೇ ಈ ಗಣಪತಿ ಮೂರ್ತಿ ಕೊಹಿನೂರ್ ವಜ್ರಕ್ಕಿಂತ ದೊಡ್ಡದಾಗಿದೆ ಮತ್ತು ಆಫ್ರಿಕನ್ ಗಣಿಗಳಿಂದ ಹೊರತೆಗೆಯಲಾಗಿದೆ ಎಂದು ಕನುಭಾಯಿ ಹೇಳಿದ್ದಾರೆ.

ಮುಖ್ಯವಾಗಿ ಪ್ರತಿವರ್ಷ ಗಣೇಶ ಹಬ್ಬದ ವೇಳೆ ಈ ಮೂರ್ತಿಗೆ ವಿಶೇಷ ಪೂಜೆ ಮಾಡಿ ನಿಮಜ್ಜದ ಕಾರ್ಯಕ್ರಮದ ಅಂಗವಾಗಿ ಮೂರ್ತಿಯ ಮೇಲೆ ನದಿ ನೀರನ್ನು ಸಿಂಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.