Jaya mrutyunjayala swamyji: ಯಡಿಯೂರಪ್ಪ, ಬೊಮ್ಮಾಯಿ ಅವರಿಂದಲೇ ಭಾರೀ ಮೋಸ – ಬಿಜೆಪಿ ಸೋಲಿನ ಸ್ಪೋಟಕ ಕಾರಣ ತೆರೆದಿಟ್ಟ ಜಯಮೃತ್ಯುಂಜಯ ಸ್ವಾಮಿಜಿ

Karnataka news Basava Jayamrutyunjaya swamiji talks over panchamasali 2A reservation

Basava Jayamrutyunjaya swamiji: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ(BJP)ಯು ಹೀನಾಯವಾಗಿ ಸೋತು ಸುಣ್ಣವಾಗಿ ಹೋಗಿದೆ. ಈ ನಂತರ ಬಿಜೆಪಿಯ ಸೋಲಿನ ಪರಾಮರ್ಶೆಗಳು ನಡೆಯುತ್ತಲೇ ಬಂದಿದೆ. ಒಬ್ಬೊಬ್ಬರು ಒಂದೊಂದು ಕಾರಣ ನೀಡಿ ಹಲವಾರು ಚರ್ಚೆಗಳಿಗೂ ಕೂಡ ಎಡೆ ಮಾಡಿಕೊಟ್ಟಿದ್ದಾರೆ. ಆದರೆ ಈ ನಡುವೆ ಬಸವ ಜಯಮೃತ್ಯುಂಜಯ(Jaya mruthyunjaya swamyji) ಸ್ವಾಮಿಜಿಗಳವರು ಬಿಜೆಪಿಯು ಹೀನಾಯವಾಗಿ ಸೋಲಲು ಕಾರಣವೇನೆಂದು ಸ್ಫೋಟ ಹೇಳಿಕೆಯನ್ನು ನೀಡಿದ್ದಾರೆ.

 

ಹೌದು, ಮಾಜಿ ಸಿಎಂ ಯಡಿಯೂರಪ್ಪ(B S yadiyirappa) ಮತ್ತು ಬೊಮ್ಮಾಯಿಯವರು(Basavaraj bommai) 2ಎ ಮೀಸಲಾತಿ ನೀಡುವುದಾಗಿ ಹೇಳಿ ಅನ್ಯಾಯ ಮಾಡಿದ ಪರಿಣಾಮವಾಗಿಯೇ ಇಂದು ಬಿಜೆಪಿಗೆ ಹಿನ್ನಡೆಯಾಗಿದೆ. ನಮ್ಮ ಪಂಚಮಸಾಲಿ ಸಮಾಜವು ಪ್ರತಿಯೊಂದನ್ನೂ ಹೋರಾಟ ಮಾಡಿ ಪಡೆದುಕೊಳ್ಳುವ ಸ್ಥಿತಿಯಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ( Basava Jayamrutyunjaya swamiji) ಹೇಳಿದ್ದಾರೆ.

ಅಂದಹಾಗೆ ತಮ್ಮ ಸಮುದಾಯಕ್ಕೆ 2A ಮೀಸಲಾತಿ ಸಿಗಬೇಕೆಂದು ನಿರಂತರವಾಗಿ ಹೋರಾಡುತ್ತಿರುವಂತಹ ಜಯಮೃತ್ಯುಂಜಯ ಸ್ವಾಮಿಗಳವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವಾರು ಹೋರಾಟಗಳನ್ನು ಮಾಡಿದ್ದರು. ಅಲ್ಲದೆ ಈ ವೇಳೆ ಎರಡು ಮುಖ್ಯಮಂತ್ರಿಗಳಾಗಿದಂತಹ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಮನವೊಲಿಸಿ ತಮ್ಮ ಸಮುದಾಯಕ್ಕೆ ಮೀಸಲಾತಿ ಗಿಟ್ಟಿಸಿಕೊಳ್ಳುವಲ್ಲಿ ಬಹಳಷ್ಟು ಪ್ರಯತ್ನ ಪಟ್ಟರು. ಆದರೆ ಈ ವೇಳೆ ಎರಡು ಈ ಮುಖ್ಯಮಂತ್ರಿಗಳು ಕೇವಲ ಭರವಸೆಯನ್ನು ನೀಡಿದರೆ ಹೊರತು ಆ ಕುರಿತು ಯಾವುದೇ ರೀತಿಯ ಕಾರ್ಯಗಳನ್ನು ಕೈಗೊಳ್ಳಲಿಲ್ಲ. ಹೀಗಾಗಿ ಸ್ವಾಮೀಜಿ ಅವರು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ ಪರಿಣಾಮವಾಗಿಯೇ ಇಂದು ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಸ್ಫೋಟ ಹೇಳಿಕೆ ನೀಡಿದ್ದಾರೆ.

2 ಎ ಮೀಸಲಾತಿ ದೊರಕದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಅವಧಿಯಲ್ಲಿ ಈ ಸಮುದಾಯ ಮತ್ತೆ ಹೋರಾಟ ನಡೆಸಲು ಮುಂದಾಗಿದೆ. ಜಯಮೃತ್ಯುಂಜತ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಯುವುದು ಸ್ಪಷ್ಟವಾಗಿದೆ. ಹೀಗಾಗಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು 2ಎ ಮೀಸಲಾತಿ ನೀಡುವುದಾಗಿ ಹೇಳಿ ಅನ್ಯಾಯ ಮಾಡಿದ ಪರಿಣಾಮವಾಗಿಯೇ ಇಂದು ಬಿಜೆಪಿಗೆ ಹಿನ್ನಡೆಯಾಗಿದೆ. ನಮ್ಮ ಪಂಚಮಸಾಲಿ ಸಮಾಜವು ಪ್ರತಿಯೊಂದನ್ನೂ ಹೋರಾಟ ಮಾಡಿ ಪಡೆದುಕೊಳ್ಳುವ ಸ್ಥಿತಿಯಿದೆ ಎಂದರು.

ಇದನ್ನೂ ಓದಿ : Hyderabad: ಕಣ್ಣು ಮಿಟುಕಿಸುಷ್ಟರಲ್ಲಿ ಗಣೇಶನೆದುರಿದ್ದ 11 ಕೆಜಿ ಲಾಡು ಮಾಯ – ಸಿಸಿಟಿವಿಯಲ್ಲಿ ಅಚ್ಚರಿ ನೆರಳಿನ ಆಕೃತಿಯ ದೃಶ್ಯ ಸೆರೆ !! ವೈರಲ್ ಆಯ್ತು ವಿಡಿಯೋ

Leave A Reply

Your email address will not be published.