Koppala: ಅಯ್ಯೋ ದೇವ್ರೇ.. ಊರಿಗೆ ಬಾರ್ ಬೇಕೆ ಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಕುಡುಕರು- ನಂತರ ಆದದ್ದೇ ವಿಚಿತ್ರ

Karnataka district Koppala news alcohol lover protest in Koppal District office for MSIL bar

Koppala: ರಾಜ್ಯದಲ್ಲಿ ಕೆಲವು ಸಮಯಗಳಿಂದ ಮದ್ಯ ದರದಲ್ಲಿ ಹೆಚ್ಚಳ ಹಾಗೂ ಕಡಿತ ವಿಚಾರ ಭಾರೀ ಸದ್ಧುಮಾಡಿದೆ. ಈ ನಡುವೆ ಮದ್ಯ ಖರೀದಿದಾರರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಆಗಿರುವುದು ಸಂಚಲನ. ಹೀಗಾಗಿ ಮದ್ಯಪ್ರಿಯರು ಎಣ್ಣೆ ದರ ಇಳಿಸಿ, ನಮಗೂ ಗ್ಯಾರಂಟಿ ಕೊಡಿ ಎಂದು ವಿಭಿನ್ನವಾಗಿ ಹೋರಾಟಗಳನ್ನೆಲ್ಲ ಮಾಡಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದಾರೆ ಆದರೆ ಏನೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮದ್ಯ ಹಾಗೂ ಕುಡುಕರ ವಿಚಾರ ಕರ್ನಾಟಕದಲ್ಲಿ(Karnataka) ಕೆಲ ಸಮಯದಿಂದ ಭಾರೀ ಟ್ರೆಂಡ್ ಆಗಿದೆ. ಈ ನಡುವೆ ಕುಡುಕರ ತಂಡವೊಂದು ಬಾರ್(Bar) ಬೇಕೆಂದು ಜಿಲ್ಲಾಧಿಕಾರಿಗಳ(DC) ಕಚೇರಿಗೆಯೇ ಮುತ್ತಿಗೆ ಹಾಕಿವೆ.

 

ಹೌದು, ನಮ್ಮೂರಿಗೆ ಬಾರ್‌ ಬೇಡವೇಬೇಡ ಎಂದು ಮಹಿಳೆಯರು ಹಾಗೂ ಗ್ರಾಮಸ್ಥರು ಹೋರಾಟ, ಪ್ರತಿಭಟನೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ, ಕೊಪ್ಪಳ(Koppala) ಜಿಲ್ಲೆಯ ಕುದುರಿಮೋತಿ ಎಂಬ ಗ್ರಾಮದಲ್ಲಿನ ಕುಡುಕರ ತಂಡವೊಂದು ನಮ್ಮ ಊರಲ್ಲಿ ಎಂಎಸ್‌ಐಎಲ್‌(MSIL) ಬಾರ್‌ ಆಗಲೇ ಬೇಕು, ಕೂಡಲೇ ಇದನ್ನು ಆರಂಭಿಸಬೇಕು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಅಂದಹಾಗೆ ಈ ಗ್ರಾಮದಲ್ಲಿ ಸದ್ಯ ಶ್ರೀ ಲಿಕ್ಕರ್ಸ್ ಎನ್ನುವ ಮದ್ಯದ ಅಂಗಡಿ ನಿರ್ಮಾಣವಾಗುತ್ತಿದೆ. ಆದರೆ ಅನಧಿಕೃತವಾಗಿ ಎಣ್ಣೆ ಮಾರಾಟ ಮಾಡುವವರು ಇದನ್ನು ವಿರೋಧ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಅನಧಿಕೃತವಾಗಿ ತಂದು ದುಬಾರಿ ಬೆಲೆಗೆ ಮಾರಾಟ ಮಾಡುವುದರಿಂದ ಹಣ ವ್ಯರ್ಥವಾಗುತ್ತಿದೆ. ಹೀಗಾಗಿ ಸರ್ಕಾರದಿಂದಲೇ ಪರವಾನಗಿ ಇರುವ ಬಾರ್‌ ಅನ್ನು ನಮ್ಮ ಊಡಿನಲ್ಲಿ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: CM Siddaramaiah: ಲಾಯರ್ ಓದುವಾಗ ಸಿಎಂ ಸಿದ್ದರಾಮಯ್ಯಗೆ ಇದ್ರಾ ಲವರ್ ? ಹಾಗಿದ್ರೆ ಯಾರವರು? ನಾಚಿ ನೀರಾದ ಸಿದ್ದು ಹೇಳಿದ್ದೇನು?

Leave A Reply

Your email address will not be published.