Unique Traffic Signal: ಬೈಕ್ ಸವಾರರು ಇನ್ನು ಹೆಲ್ಮೆಟ್ ಧರಿಸದ ಹೊರತು, ಸಿಗ್ನಲ್ ಹಸಿರು ಬಣ್ಣ ತೋರಿಸಲ್ಲ!!!
No helmet no green light viral video traffic light does not turn green until riders not wear helmet
Unique Traffic Signal: ಭಾರತದಲ್ಲಿ ಪ್ರತಿ ವರ್ಷವೊಂದಕ್ಕೆ 15 ಲಕ್ಷ ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತವೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳುತ್ತವೆ. ಈ ಕಾರಣದಿಂದ ಕಾಲಕಾಲಕ್ಕೆ ಸಂಚಾರ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಕೆಲವರು ಅತಿವೇಗದಲ್ಲಿ ವಾಹನ ಚಲಾಯಿಸಿದರೆ, ಇನ್ನು ಕೆಲವರು ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಾರೆ.
ಹಾಗಾಗಿ ಆಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಹೆಲ್ಮೆಟ್ ಧರಿಸುವುದು ಅನಿವಾರ್ಯವಾಗಿದೆ. ಈತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಟ್ರಾಫಿಕ್ ಸಿಗ್ನಲ್‌ನ (Unique Traffic Signal) ವೀಡಿಯೋ ವೈರಲ್ ಆಗಿದ್ದು, ಜನರು ಹೇಳುತ್ತಿರುವುದು ಇಂತಹ ಒಂದು ಕಾನೂನು ಬರಬೇಕು ಎಂದು ಸ್ಪೆಷಲಿ ಭಾರತದಲ್ಲಿ.
ವೈರಲ್ ಆಗಿರುವ ಕ್ಲಿಪ್‌ನಲ್ಲಿ ವಿಶಿಷ್ಟ ಟ್ರಾಫಿಕ್ ಸಿಗ್ನಲ್ ಅನ್ನು ಕಾಣಬಹುದು. ರಸ್ತೆಯಲ್ಲಿ ನಿಂತಿರುವ ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಇರುವವರೆಗೂ ಟ್ರಾಫಿಕ್ ಲೈಟ್ ಕೆಂಪಾಗಿಯೇ ಇರುತ್ತದೆ ಎಂಬುದು ಇದರ ವಿಶೇಷ. ಸಿಗ್ನಲ್‌ನಲ್ಲಿ ದೊಡ್ಡ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದ್ದು, ಅದರಲ್ಲಿ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ಮುಖವನ್ನು ಕೇಂದ್ರೀಕರಿಸಿ ಸಿಗ್ನಲ್ ಹಸಿರು ಇಲ್ಲದಿರುವುದು ಅವರಿಂದಲೇ ಎಂದು ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಬೈಕ್ ಓಡಿಸುವ ಹುಡುಗಿ ಪರದೆಯತ್ತ ನೋಡಿದ ತಕ್ಷಣ ನಾಚಿಕೆಯಿಂದ ಹೆಲ್ಮೆಟ್ ಧರಿಸುವುದನ್ನು ನೀವು ನೋಡಬಹುದು.
ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಸೈಟ್‌ನಿಂದ ಹಂಚಿಕೊಳ್ಳಲಾಗಿದೆ. ಕೆಲವರು ಇದನ್ನು ಸ್ಪೇನ್ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಅರ್ಜೆಂಟೀನಾ ದಲ್ಲಿ ನಡೆದಿರುವುದು ಎಂದು ಬರೆದಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ. ʼಎಂತಹ ಅದ್ಭುತ ತಂತ್ರಜ್ಞಾನ. ಇದು ವಿಶೇಷವಾಗಿ ಭಾರತದಲ್ಲಿ ಖಂಡಿತಾ ಆಗಬೇಕುʼ, ʼ ಅಂತಹ ಸಂಗತಿಗಳು ಪ್ರತಿ ನಗರದಲ್ಲಿ ನಡೆಯಬೇಕುʼ ಎಂದು ಹೇಳಿದ್ದಾರೆ.
https://twitter.com/i/status/1703751660437221631
ಇದನ್ನೂ ಓದಿ: 14ವರ್ಷದ ಬಾಲಕನಿಂದ 5ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಆರೋಪ!!! ಕೃತ್ಯ ತಿಳಿದು ಬಂದಿದ್ದು ಹೇಗೆ?