Petrol Diesel Price: ಏರಿಕೆ ಕಂಡ ಕಚ್ಚಾ ತೈಲದ ಬೆಲೆ- ಪರಿಣಾಮ ಮಾತ್ರ ರೂಪಾಯಿ ಮೌಲ್ಯದ ಮೇಲೆ!
National news rising crude oil prices impact on India rupees
Petrol Diesel Price Hike : ಕಚ್ಚಾ ತೈಲದ ಬೆಲೆ(Petrol Diesel Price) ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ(Rupees) ಡಾಲರ್(Dollar)ಎದುರು ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ಭಾರತೀಯ ರೂಪಾಯಿ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 83.2675ಕ್ಕೆ ಕುಸಿತ ಕಂಡಿದೆ.
ಸೌದಿ ಅರೇಬಿಯಾ ಮತ್ತು ರಷ್ಯಾ ತಮ್ಮ ಕಚ್ಚಾ ತೈಲ ಪೂರೈಕೆಯ ಪ್ರಮಾಣದಲ್ಲಿ ಕಡಿತ ಮಾಡಿರುವುದನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆ ಬಳಿಕ ತೈಲ ಬೆಲೆಗಳು ಕಳೆದ ಮೂರು ವಾರಗಳಿಂದ ಸತತವಾಗಿ ಏರಿಕೆ ಕಾಣುತ್ತಿವೆ. ನವೆಂಬರ್ ನಂತರದ ಗರಿಷ್ಠ ಮಟ್ಟವನ್ನು ತಲುಪಿದ್ದು, ಮುಂದಿನ ದಿನಗಳಲ್ಲಿ ಕಚ್ಚಾತೈಲ ಪೂರೈಕೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಆತಂಕದ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಾಗುತ್ತಿದ್ದು, ಇದರಿಂದ ಕೂಡ ಬೆಲೆಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ.
ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಈ ವರ್ಷ 100 ಡಾಲರ್ ದಾಟಬಹುದು ಎಂದು ಸಿಟಿ ಬ್ಯಾಂಕ್ ಸೋಮವಾರ ಮಾಹಿತಿ ನೀಡಿದೆ. ವಿಶ್ವದ ಹಲವಾರು ಆರ್ಥಿಕ ಸಮೀಕ್ಷಾ ಕಂಪನಿಗಳು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಜಾಗತಿಕ ಮಾರುಕಟ್ಟೆಗಳಲ್ಲಿನ ತೈಲ ಬೆಲೆಗಳು ಈಗ ಬ್ಯಾರೆಲ್ಗೆ 95 ಡಾಲರ್ ಗಡಿಯನ್ನು ದಾಟಿದೆ.ಇದರ ನಡುವೆ, ರೂಪಾಯಿ ಮೌಲ್ಯವನ್ನು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್ಬಿಐ ಮಾರುಕಟ್ಟೆಯಲ್ಲಿ ಡಾಲರ್ಗಳನ್ನು ಬಿಡುಗಡೆ ಮಾಡುತ್ತಿದ್ದರು ಕೂಡ. ದೇಶಕ್ಕೆ ಅವಶ್ಯಕವಾದ ಕಚ್ಚಾ ತೈಲ ಶೇಕಡಾ 85 ರಷ್ಟು ಆಮದು ಮಾಡಿಕೊಳ್ಳುವ ಪರಿಣಾಮ ಭಾರತೀಯ ಕರೆನ್ಸಿಯ ಕುಸಿತವನ್ನು ತಡೆಗಟ್ಟಲು ಯಾವುದೇ ಮಾರ್ಗಗಳು ಕಂಡುಬರುತ್ತಿಲ್ಲ ಎನ್ನಲಾಗಿದೆ. ಸದ್ಯ ಭಾರತೀಯ ಷೇರು ಮಾರುಕಟ್ಟೆಗಳಲ್ಲಿನ ವಿದೇಶಿ ಹೂಡಿಕೆಗಳು ರೂಪಾಯಿಯ ಇಳಿಕೆಯನ್ನು ನಿಯಂತ್ರಿಸಲು ಸಹಕರಿಸುತ್ತಿವೆ. ಹೀಗಿದ್ದರೂ ಕೂಡ ಇದು ಚಂಚಲ ಪ್ರವೃತ್ತಿಯ ಹಣವಾಗಿರುವ ಪರಿಣಾಮ ಯಾವಾಗ ಬೇಕಾದರೂ ಹಣದ ಮೌಲ್ಯ ಇಳಿಕೆ ಕಾಣಬಹುದು ಎಂಬುದು ಬಲ್ಲವರ ಅಭಿಪ್ರಾಯ.
ಇದನ್ನೂ ಓದಿ: Chaitra Kundapura Fraud Case: ಚೈತ್ರಾ ಕುಂದಾಪುರ ಪ್ರಕರಣ- ತನಿಖೆ ಕುರಿತು ಸ್ಪೋಟಕ ಹೇಳಿಕೆ ನೀಡಿದ ಕಾಂಗ್ರೆಸ್