Viral news: ಹೆಂಡತಿಯ ಹೆರಿಗೆಯನ್ನು ಕಂಡ ಪತಿ – ಅಸ್ವಸ್ಥನಾಗಿ ಪರಿಹಾರಕ್ಕೆ ಇಟ್ಟ ಬರೋಬ್ಬರಿ 72 ಲಕ್ಷ ಬೇಡಿಕೆ !! ಕಾರಣ ಕೇಳಿದ್ರೆ ನೀವೇ ಶಾಕ್

Viral news man gets scared after seeing wife c section baby delivery psychotic illness triggered sues hospital

Viral news: ಕೆಲವೊಂದು ಘಟನೆಯನ್ನು ಕೆಲವರು ಸಹಜ ಕ್ರಿಯೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಒಂದು ಮಹಿಳೆ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ತನ್ನ ಜೀವವನ್ನೇ ಪಣಕ್ಕಿಡುತ್ತಾಳೆ. ಈ ಹೆರಿಗೆ ದೃಶ್ಯ ವು ಕೆಲ ಗಂಡಸರಿಗೆ ಸಹಜವಾಗಿ ಕಂಡರೆ ಇನ್ನು ಕೆಲವರಿಗೆ ಅಸಹಜವಾಗಿರಬಹುದು(Viral news).

ಹಾಗೆಯೇ ಇಲ್ಲೊಂದು ವಿಚಿತ್ ಘಟನೆ ನಡೆದಿದೆ. ಸಾಮಾನ್ಯವಾಗಿ ರಕ್ತ (Blood), ಕತ್ತರಿ, ಸೂಜಿ, ವ್ಯಕ್ತಿ ಗಳ ಖಾಸಗಿ ಭಾಗಗಳನ್ನು ಸದಾ ನೋಡುವ ವೈದ್ಯರಿಗೆ ಅದು ವಿಶೇಷವೆನ್ನಿಸುವುದಿಲ್ಲ. ಅದರಲ್ಲೂ ಹೆರಿಗೆ, ಅತಿಯಾದ ಬ್ಲೀಡಿಂಗ್ ನೋಡಿದ್ರೆ ಕೆಲವರು ಮೂರ್ಛೆ ಹೋಗ್ತಾರೆ. ಇಲ್ಲೊಬ್ಬ ವ್ಯಕ್ತಿ ಪತ್ನಿಯ ಹೆರಿಗೆ ನೋಡಿ ದೊಡ್ಡ ಸಮಸ್ಯೆ ಆಗಿದೆ. ಅಲ್ಲದೆ ಆತನ ದಾಂಪತ್ಯ ಕೂಡ ಮುರಿದು ಬಿದ್ದಿದೆ. ಆ ವ್ಯಕ್ತಿ ಈಗ ಆಸ್ಪತ್ರೆ (Hospital) ವಿರುದ್ಧ ದೂರು ದಾಖಲಿಸಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಸಿ-ಸೆಕ್ಷನ್ ಡೆಲಿವರಿ ನೋಡಿ ತೀವ್ರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿರುವ ಅನಿಲ್ ಕೊಪ್ಪುಳ ಆಸ್ಪತ್ರೆಯ ವಿರುದ್ಧ ದೂರು ಮಾಡಿದ್ದು ಅಲ್ಲದೆ, ಪತ್ನಿಯ ಹೆರಿಗೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ 72 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾನೆ.

2018ರ ಜನವರಿಯಲ್ಲಿ ಅನಿಲ್ ಕೊಪ್ಪುಳ ಎಂಬವನ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಐದು ವರ್ಷಗಳ ನಂತರ ಅನಿಲ್ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾನೆ. ಹೌದು, ರಾಯಲ್ ವುಮೆನ್ಸ್ ಆಸ್ಪತ್ರೆಯವರು ಪತ್ನಿಯ ಸಿ-ಸೆಕ್ಷನ್ ಹೆರಿಗೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದರು. ಅದನ್ನು ನಾನು ವೀಕ್ಷಣೆ ಮಾಡಿದ್ದೆ. ಆದ್ರೆ ಅದೇ ನನ್ನ ಆರೋಗ್ಯವನ್ನು ಹಾಳು ಮಾಡಿದೆ. ಆಸ್ಪತ್ರೆ ಮಾಡಿದ ಕೆಲಸ ಸರಿಯಲ್ಲ. ನನಗೆ ಹೆರಿಗೆ ನೋಡಲು ಅವಕಾಶ ಮಾಡಿಕೊಟ್ಟ ಕಾರಣ ಆಸ್ಪತ್ರೆ ಸಿಬ್ಬಂದಿ ಕರ್ತವ್ಯವನ್ನು ಉಲ್ಲಂಘಿಸಿದ್ದಾರೆ ಎಂದು ಅನಿಲ್ ದೂರಿದ್ದಾರೆ.

ದೂರಿನಲ್ಲಿ,ಡೆಲಿವರಿ ನೋಡಿದ ನಂತರ ನನ್ನ ಮನಸ್ಸು ಆಘಾತಕ್ಕೊಳಗಾಯಿತು, ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ. ಮಾನಸಿಕ ಒತ್ತಡದಿಂದ ದಾಂಪತ್ಯ ಮುರಿದು ಬಿತ್ತು ಎಂದು ಅನಿಲ್ ಆರೋಪ ಮಾಡಿದ್ದಾನೆ.

ಅಲ್ಲದೆ ಹೆರಿಗೆಯ ಸಮಯದಲ್ಲಿ ತನ್ನ ಹೆಂಡತಿಯ ಆಂತರಿಕ ಅಂಗಗಳನ್ನು ನೋಡಿದ್ದ. ಆತನ ದೇಹದಿಂದ ಸಾಕಷ್ಟು ರಕ್ತ ಹೊರಬರುತ್ತಿರುವುದನ್ನು ಕೂಡ ಆತ ನೋಡಿದ್ದ. ಇದರಿಂದ ಆತನ ಮಾನಸಿಕ ಸ್ಥಿತಿ ಕ್ಷೀಣಿಸಲು ಪ್ರಾರಂಭಿಸಿತು. ಆಸ್ಪತ್ರೆ ಈತನ ಆರೋಪವನ್ನು ನಿರಾಕರಿಸಿದೆ. ಇನ್ನು ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣವನ್ನು ನ್ಯಾಯಾಧೀಶರು ವಿಚಾರಣೆ ನಡೆಸಿದ್ದು, ಅನಿಲ್ ಗೆ ಪರಿಹಾರ ನೀಡಲು ಕೋರ್ಟ್ ನಿರಾಕರಿಸಿದ್ದು,ಅರ್ಜಿ ವಜಾ ಮಾಡಿದೆ.

ಅದಲ್ಲದೆ ಕೋರ್ಟ್ ವಿಚಾರಣೆ ವೇಳೆ ವ್ಯಕ್ತಿಯನ್ನು ತಪಾಸಣೆಗೊಳಪಡಿಸಲಾಗಿದೆ. ಈ ವೇಳೆ ವ್ಯಕ್ತಿ ಮಾನಸಿಕ ಒತ್ತಡವನ್ನು ಅನುಭವಿಸಿಲ್ಲ ಎಂಬುದು ತಿಳಿದು ಬಂದಿದೆ. ಪರಿಹಾರಕ್ಕೆ ಬೇಡಿಕೆ ಇಡುವತಂಹ ಹಾಗೂ ಚಿಕಿತ್ಸೆಗೆ ಹೆಚ್ಚು ಖರ್ಚಾಗುವಂತಹ ಯಾವುದೇ ಖಾಯಿಲೆ ವ್ಯಕ್ತಿಗೆ ಬಂದಿಲ್ಲವೆಂದು ಕೋರ್ಟ್ ಹೇಳಿದೆ. ಹಾಗಾಗಿ ವ್ಯಕ್ತಿಗೆ ಪರಿಹಾರ ನೀಡಬಾರದು ಎಂದು ಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವೈರಲ್ ಆಯ್ತು ಅಚ್ಚರಿಯ ವಿಡಿಯೋ

Leave A Reply

Your email address will not be published.