Urfi javed: ಯಪ್ಪಾ.. ಯಾವಾಗ್ಲೂ ಅರೆ ಬರೆ ಬಟ್ಟೆ ಹಾಕಿ ಟ್ರೋಲ್ ಆಗೋ ಉರ್ಫಿ ಈ ಸಲ ಹಾಕಿದ್ದೇನು ಗೊತ್ತಾ ?! ವೈರಲ್ ಫೋಟೋ ಕಂಡು ಟ್ರೋಲರ್ ಗಳೇ ಶಕ್ !!

Urfi javed: ತಾನು ತೊಡುವ ಅರೆಬರೆ ಉಡುಪುಗಳ ಮೂಲಕವೇ ದೇಶಾದ್ಯಂತ ಸುದ್ಧಿಯಾಗಿರೃ ಹಿಂದಿ ಬಿಗ್ ಬಾಸ್ ಸ್ಪರ್ಧಿ (Bigg Boss Hindi) ಉರ್ಫಿ ಜಾವೇದ್ (Urfi Javed) ಇದೀಗ ತಮ್ಮ ಹೊಸ ಬಟ್ಟೆ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದು ಸದ್ಯ ಆ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ತುಂಡುಡುಗೆ ತೊಡುವ ಮೂಲಕ ಸದಾ ದೇಹ ಪ್ರದರ್ಶಿಸಿ ಯಾವಾಗ್ಲೂ ಟ್ರೋಲ್ ಆಗುತ್ತಿದ್ದ ಉರ್ಫಿ ಜಾವೇದ್ ಇದೀಗ ಸಂಪೂರ್ಣವಾಗಿ ಮೈ ಮುಚ್ಚುವಂತೆ ಬಟ್ಟೆ ಧರಿಸಿದ್ದು, ನೋಡುಗರಿಗೆ ಅಷ್ಟೇ ಅಲ್ಲಾ ಟ್ರೋಲಿಗರಿಗೂ ಶಾಕ್ ಉಂಟಾಗಿದೆ. ಹೌದು, ಸದಾ ಅರೆಬರೆ ಬಟ್ಟೆ ತೊಟ್ಟು ಪಡ್ಡೆ ಸದಾ ಟ್ರೋಲ್ ಆಗುವ ಉರ್ಫಿ ಇಂದು ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ಗಣೇಶನ ದರ್ಶನ ಪಡೆದಿದ್ದಾಳೆ.
ವಿಶೇಷ ಅಂದ್ರೆ ಇದುವರೆಗೂ ಉರ್ಫಿ ಅರ್ಧಂಬರ್ಧ ಬಟ್ಟೆ ತೊಟ್ಟು ಟ್ರೋಲ್ ಆಗುತ್ತಿದ್ದಳು. ಆದರೀಗ ಪೂರ್ತಿ ಬಟ್ಟೆ ಹಾಕಿದರೂ ಆಕೆಗೆ ಟ್ರೋಲಿಗರ ಕಾಟ ತಪ್ಪಿಲ್ಲ. ಯಾಕೆಂದರೆ ಈಗಲೂ ಆಕೆ ಟ್ರೋಲಿಗರ ಬಾಯಿಗೆ ತುತ್ತಾಗಿದ್ದಾಳೆ. ಅಲ್ಲದೆ ಮೈ ತುಂಬಾ ಬಟ್ಟೆ ತೊಟ್ಟ ಉರ್ಫಿಯ ನೋಡಿದ ಜನ ನಿಜಕ್ಕೂ ತಾವು ಶಾಕ್ ಆಗಿದ್ದಾಗಿ ಕಾಮೆಂಟ್ ಮಾಡಿದ್ದಾರೆ.
ಇನ್ನು ಈ ವೇಳೆ ಉರ್ಫಿಯ ಮೈತುಂಬಾ ಬಟ್ಟೆ ಮಾತ್ರವಲ್ಲದೇ ಗೋಲ್ಡನ್ ಪ್ರೇಮ್ನ ವಿಭಿನ್ನ ಶೈಲಿಯ ಕನ್ನಡಕವನ್ನೂ ಧರಿಸಿದ್ದಳು. ಸದ್ಯ ಆಕೆ ಧರಿಸಿದ ಆ ವಿಭಿನ್ನ ಶೈಲಿಯ ಕನ್ನಡಕ ಎಲ್ಲರ ಗಮನ ಸೆಳೆಯಿತು. ಕೆಂಪು ಬಣ್ಣದ ಸಂಪ್ರದಾಯಿಕ ಧಿರಿಸು ಧರಿಸಿದ್ದ ಉರ್ಫಿ ಹೆಗಲಿನ ಸುತ್ತ ಶಾಲು ಧರಿಸಿದ್ದರು, ಇದರ ಜೊತೆಗೆ ಅವರು ಹಾಕಿದ್ದ ಈ ಕನ್ನಡಕ ಎಲ್ಲರನ್ನು ಸೆಳೆದಿದೆ. ಕೆಲವರಂತೂ ಅದು ಮುಖಕ್ಕೆ ಹಾಕಿದ ಆಭರಣದಂತೆ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.