ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್ – ಇನ್ಮುಂದೆ ಸೀಟ್ ರಿಸರ್ವ್ ಮಾಡಿದ್ರೂ ಆ ಸೀಟು ಸಿಗಲ್ಲ ನಿಮಗೆ !! ಅಚ್ಚರಿ ಮೂಡಿಸಿದ ಇಲಾಖೆಯ ಹೊಸ ಗೈಡ್ ಲೈನ್
Travel news national news Indian railway issued a new rule regarding lower seat reservation
Indian Railway: ದೂರ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಅನುಕೂಲಕರ ಟಿಕೆಟ್ ಮೊದಲೇ ಬುಕ್ ಮಾಡುತ್ತೇವೆ. ಸಾಮಾನ್ಯವಾಗಿ ರೈಲು ಪ್ರಯಾಣದಲ್ಲಿ ನಾವು ಮೊದಲೇ ಸೀಟುಗಳನ್ನು ಬುಕ್ ಮಾಡಿದ್ದರೆ ಆ ಸೀಟು ನಮಗೇ ಮೀಸಲಾಗಿರುತ್ತದೆ. ಬೇರೆ ಯಾರೂ ಆ ಸೀಟಿನಲ್ಲಿ ಮಾತ್ರ ಕುಳಿತುಕೊಳ್ಳುವಂತಿಲ್ಲ. ಇದರಿಂದ ಆರಾಮವಾಗಿ ಪ್ರಯಾಣ ಮಾಡಬಹುದಿತ್ತು. ಇನ್ನು ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವವರು ಲೋವರ್ ಬರ್ತ್ ನ್ನು ಹೆಚ್ಚು ಪ್ರಿಫರ್ ಮಾಡುತ್ತಾರೆ. ಮಲಗಲು, ಏಳಲು ಸುಲಭ ಅನ್ನೋ ಕಾರಣಕ್ಕೆ ಕೆಳಗಿನ ಸೀಟನ್ನೇ ಆಯ್ಕೆ ಮಾಡುತ್ತಾರೆ. ಆದ್ರೆ ಇನ್ಮುಂದೆ ಲೋವರ್ ಬರ್ತ್ ಆಯ್ಕೆ ಮಾಡಿದ್ರೂ ಎಲ್ಲರಿಗೂ ಆ ಸೀಟ್ ಸಿಗೋದಿಲ್ಲವಂತೆ.
ಭಾರತೀಯ ರೈಲು (Indian Railway) ಪ್ರಯಾಣದಲ್ಲಿ ಹೆಚ್ಚಿನ ಜನರ ಆದ್ಯತೆಯ ಆಸನವೆಂದರೆ ಲೋವರ್ ಬರ್ತ್ ಅಥವಾ ಸೈಡ್ ಲೋವರ್ ಬರ್ತ್. ಆದರೆ ಈಗ ಎಲ್ಲರೂ ಬಹುಶಃ ಈ ಆಸನವನ್ನು ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಹೌದು, ಭಾರತೀಯ ರೈಲ್ವೇ ಈ ಕುರಿತು ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ರೈಲಿನ ಕೆಳ ಬರ್ತ್ ಅನ್ನು ನಿರ್ದಿಷ್ಟ ವರ್ಗದ ಜನರಿಗೆ ಮೀಸಲಿಡಲಾಗುತ್ತದೆ.
ರೈಲು ಪ್ರಯಾಣದಲ್ಲಿ ಸೀಟು ಕಾಯ್ದಿರಿಸುವ ರೂಲ್ಸ್ನಲ್ಲಿ ಐಆರ್ಸಿಟಿಸಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಕೆಳ ಬರ್ತ್ಗೆ ಸಂಬಂಧಿಸಿದಂತೆ ರೈಲ್ವೆ ಹೊಸ ನಿಯಮ (New Rules)ವನ್ನು ಹೊರಡಿಸಿದೆ. ರೈಲ್ವೆಯು ರೈಲಿನ ಕೆಳ ಬರ್ತ್ ಅನ್ನು ವಿಶೇಷ ಚೇತನರಿಗಾಗಿ ಕಾಯ್ದಿರಿಸಿದೆ. ಅವರ ಪ್ರಯಾಣ (Travel)ವನ್ನು ಹೆಚ್ಚು ಅನುಕೂಲಕರವಾಗಿಸಲು, ಭಾರತೀಯ ರೈಲ್ವೇ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ರೈಲ್ವೆ ಮಂಡಳಿಯ ಆದೇಶದ ಪ್ರಕಾರ, ಸ್ಲೀಪರ್ ಕ್ಲಾಸ್ನಲ್ಲಿ ವಿಶೇಷ ಚೇತನರಿಗೆ ನಾಲ್ಕು ಸೀಟುಗಳು, ಎರಡು ಲೋವರ್, ಎರಡು ಮಿಡ್ಲ್, ಥರ್ಡ್ ಎಸಿಯಲ್ಲಿ ಎರಡು ಮತ್ತು ಎಸಿ3 ಎಕಾನಮಿಯಲ್ಲಿ ಎರಡು ಸೀಟುಗಳನ್ನು ಮೀಸಲಿಡಲಾಗಿದೆ. ಅವನು ಅಥವಾ ಅವನೊಂದಿಗೆ ಪ್ರಯಾಣಿಸುವ ಜನರು ಈ ಆಸನ (Seat)ದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ, ಗರೀಬ್ ರಥ ರೈಲಿನಲ್ಲಿ, 2 ಕೆಳಗಿನ ಸೀಟುಗಳು ಮತ್ತು 2 ಮೇಲಿನ ಸೀಟುಗಳನ್ನು ಅಂಗವಿಕಲರಿಗೆ ಮೀಸಲಿಡಲಾಗಿದೆ. ಈ ಆಸನಗಳಿಗೆ ಅವರು ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇವುಗಳ ಹೊರತಾಗಿ, ಭಾರತೀಯ ರೈಲ್ವೇಯು ಹಿರಿಯ ನಾಗರಿಕರಿಗೆ ಕೇಳದೆಯೇ ಲೋವರ್ ಬರ್ತ್ಗಳನ್ನು ನೀಡುತ್ತದೆ. 45 ವರ್ಷ ಮತ್ತು ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ, ಸ್ಲೀಪರ್ ಕ್ಲಾಸ್ನಲ್ಲಿ 6ರಿಂದ 7 ಲೋವರ್ ಬರ್ತ್ಗಳು, ಥರ್ಡ್ ಎಸಿಯ ಪ್ರತಿ ಕೋಚ್ನಲ್ಲಿ 4-5 ಲೋವರ್ ಬರ್ತ್ಗಳು, ಸೆಕೆಂಡ್ ಎಸಿಯ ಪ್ರತಿ ಕೋಚ್ನಲ್ಲಿ 3-4 ಲೋವರ್ ಬರ್ತ್ಗಳನ್ನು ರೈಲಿನಲ್ಲಿ ಕಾಯ್ದಿರಿಸಲಾಗಿದೆ. ಯಾವುದೇ ಆಯ್ಕೆಯನ್ನು ಆಯ್ಕೆ ಮಾಡದೆಯೇ ಅವರು ಸೀಟು ಪಡೆಯಬಹುದಾಗಿದೆ.
ಒಂದು ವೇಳೆ ಟಿಕೆಟ್ ಕಾಯ್ದಿರಿಸುವಾಗ ಹಿರಿಯ ನಾಗರಿಕರು, ಅಂಗವಿಕಲರು ಅಥವಾ ಗರ್ಭಿಣಿ ಮಹಿಳೆಗೆ ಮೇಲಿನ ಸೀಟ್ ಪಡೆದರೆ, ನಂತರ ಆನ್ಬೋರ್ಡ್ ಟಿಕೆಟ್ ಪರಿಶೀಲನೆಯ ಸಮಯದಲ್ಲಿ, ಟಿಟಿ ಅವರಿಗೆ ಲೋವರ್ ಸೀಟ್ ನೀಡಲು ಅವಕಾಶ ಕೂಡ ಇದೆ.
ಇದನ್ನೂ ಓದಿ: ಈ ಪುಟ್ಟ ಪೋರಿಯ ಗಂಡ ಮಿಸ್ ಆಗಿದ್ದಾನಂತೆ! ಸಿಗೋ ವರೆಗೂ ಊಟ, ತಿಂಡಿ ಮಾಡೋಲ್ವಂತೆ !!