Rajasthan: 26 ಬೆರಳುಗಳಿರುವ ಮಗುವಿನ ಜನನ! ಮಗು ನೋಡಲು ಆಸ್ಪತ್ರೆ ಮುಂದೆ ಜನಸಂದಣಿ! ವೈದ್ಯರೇ ಶಾಕ್‌!!!

national news rajasthan woman gave birth a baby girl with 26 fingers

Rajasthan: ರಾಜಸ್ಥಾನದ (Rajasthan) ಭರತ್‌ಪುರದ ಆಸ್ಪತ್ರೆಯಲ್ಲಿ ಮಹಿಳೆಯೋರ್ವರು 26 ಬೆರಳುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಮಗುವಿಗೆ ಇಷ್ಟೊಂದು ಬೆರಳುಗಳಿರುವುದನ್ನು ನೋಡಿ ನಿಜಕ್ಕೂ ಆಸ್ಪತ್ರೆಯ ವೈದ್ಯರು, ದಾದಿಯರು ಆಶ್ಚರ್ಯಚಕಿತರಾಗಿದ್ದಾರೆ. ಮಗುವಿನ ಕೈಯಲ್ಲಿ 7-7 ಬೆರಳುಗಳು, ಮತ್ತು ಕಾಲುಗಳಲ್ಲಿ 6-6 ಬೆರಳುಗಳಿವೆ. ಈ ಘಟನೆ ಜಿಲ್ಲೆಯ ಕಮಾನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಶನಿವಾರ ಸಂಜೆ 8 ತಿಂಗಳ ಗರ್ಭಿಣಿಯೊಬ್ಬರು ಸಾಮಾನ್ಯ ತಪಾಸಣೆಗಾಗಿ ಕಮಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಿಎಚ್‌ಸಿಗೆ ಬಂದಿದ್ದರು. ತಪಾಸಣೆ ವೇಳೆಯೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಮಹಿಳೆ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಸುದ್ದಿ ಎಲ್ಲಾ ಕಡೆ ಹಬ್ಬಿದ ನಂತರ ಜನರು ಮಗು ನೋಡಲು ಆಸ್ಪತ್ರೆಗೆ ಸೇರಿದ್ದರು. ಇದೀಗ ಈ ಮಗುವಿನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಮಗುವಿನ ತಾಯಿಯ ಹೆಸರು ಸರಜು, ಗೋಪನಾಥ್ ಬಡಾವಣೆಯ ನಿವಾಸಿ. ಸರಜೂ ಅವರ ಪತಿ ಗೋಪಾಲ್ ಭಟ್ಟಾಚಾರ್ಯ ಸಿಆರ್‌ಪಿಎಫ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

ಈ ರೀತಿಯ ಪ್ರಕರಣವನ್ನು ಪಾಲಿಡಾಕ್ಟಿಲಿ ಎಂದು ಕರೆಯಲಾಗುತ್ತದೆ. ಇಂತಹ ಪ್ರಕರಣಗಳು ಬಹಳ ವಿರಳವಾಗಿ ಕಂಡುಬರುತ್ತವೆ ಎಂದು ಡಾಕ್ಟರ್‌ಗಳು ಹೇಳಿದ್ದಾರೆ. ಆದಾಗ್ಯೂ, ಇದರಿಂದ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಡಾಕ್ಟರ್‌ ಹೇಳಿದ್ದಾರೆ.

ಇದನ್ನೂ ಓದಿ: DA Hike: ದೀಪಾವಳಿಗೂ ಮುನ್ನ ಸರಕಾರ ನೌಕರರಿಗೆ ಸಿಗಲಿದೆ ಬಂಪರ್‌ ಗಿಫ್ಟ್‌! ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ!

Leave A Reply

Your email address will not be published.