Death News: ಮಕ್ಕಳ ನೇಣು ಹಾಕಿಕೊಳ್ಳುವ ಆಟ – ಸ್ಟೂಲ್ ಜಾರಿತು, ಪ್ರಾಣ ಹಾರಿತು !!

Shocking news Uttar Pradesh death news Hanging game Boy dies after stool slips

Death News: ಉತ್ತರ ಪ್ರದೇಶದ ಜಲೌನ್ ನಲ್ಲಿ ಬಾಲಕ(13) ಆಟವಾಡುತ್ತಾ ಜೀವ ಕಳೆದುಕೊಂಡ(Death news)ದಾರುಣ ಘಟನೆ ವರದಿಯಾಗಿದೆ.

 

ಜಲೌನ್‌ನ ಒರೈಯ ಕಾನ್ಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿರುವ 50 ವರ್ಷದ ಸಂಗೀತಾ ಮೃತ ಯುವಕನ ತಾಯಿ, ಹುಟ್ಟಿನಿಂದಲೇ ಅಂಧರಾಗಿದ್ದು, ಘಟನೆಯ ವೇಳೆ ಅಲ್ಲೇ ಇದ್ದರು ಕೂಡ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಬಾಲಕ ತನ್ನ ಸಹೋದರ ಮತ್ತು ಸಹೋದರಿಯರೊಂದಿಗೆ ಆಟವಾಡುತ್ತಿದ್ದನಂತೆ. ಇವರೆಲ್ಲ ಹಗ್ಗ ಕುಣಿಕೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಆಟ ಆಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಬಾಲಕ ನಿಂತಿದ್ದ ಸ್ಟೂಲ್‌ ಪಕ್ಕಕ್ಕೆ ಜಾರಿ ಬಿದ್ದಿದ್ದು, ಬಾಲಕ ಆಟವಾಡುತ್ತಾ ಪ್ರಾಣ ಕಳೆದುಕೊಂಡಿದ್ದಾನೆ. ಈ ವೇಳೆ ಅವನ ಸಹೋದರ ಮತ್ತು ಸಹೋದರಿ ಬೊಬ್ಬೆ ಹಾಕಿದ್ದು ಆದರೆ ಪಕ್ಕದ ಕೋಣೆಯಲ್ಲಿ ಮಲಗಿದ್ದ ತಾಯಿ ಓಡಿ ಅಲ್ಲಿಗೆ ಓಡಿ ಬಂದರೂ ತನ್ನ ಕುರುಡುತನದಿಂದ ಮಗನನ್ನು ರಕ್ಷಿಸಲು ಸಾಧ್ಯವಾಗದ ದಾರುಣ ಘಟನೆ ವರದಿಯಾಗಿದೆ. ಮಕ್ಕಳ ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದಲ್ಲಿ ವಾಸವಿದ್ದ ಕೆಲವರು ಸ್ಥಳಕ್ಕಾಗಮಿಸಿ ಮಗುವನ್ನು ಕುಣಿಕೆಯಿಂದ ಕೆಳಗಿಳಿಸಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ಅಷ್ಟರಲ್ಲಿ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇದನ್ನೂ ಓದಿ: Non Taxable Income:ಜನಸಾಮಾನ್ಯರೇ.. ನೀವು ಈ ರೀತಿಯಲ್ಲಿ ಆದಾಯ ಗಳಿಸ್ತಿದ್ರೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ !!

Leave A Reply

Your email address will not be published.