Uttara kannada: ಉತ್ತರ ಕನ್ನಡದ ಹಾಸ್ಟೆಲ್ ಹುಡುಗಿಯರು ಕೈ ಕುಯ್ದುಕೊಂಡ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಇದು PUBG ಎಫೆಕ್ಟ್ ?!
Uttar Kannada news pubg effect dandeli private school girls have injuries their hands themselves
Uttar kannada: ಶಾಲೆಗೆ ಹೋದಂತಹ ಸಂದರ್ಭದಲ್ಲಿ ಸುಮಾರು ಹದಿನಾಲ್ಕು ವಿದ್ಯಾರ್ಥಿನಿಯರು ಸೇಫ್ಟಿ ಪಿನ್ ಗಳಿಂದ ತಮ್ಮ ಕೈಗಳನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಾತಕಾರಿ ಘಟನೆ ಉತ್ತರ ಕನ್ನಡ(Uttara kannada) ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದ್ದು ಈ ಪ್ರಕರಣ ನಿಗೂಢವಾಗಿಯೇ ಉಳಿದಿತ್ತು. ಆದರೀಗ ರಾತ್ರಿ ಬೆಳಗಾಗೋದ್ರೊಳಗೆ ಇದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು, ಉತ್ತರ ಕನ್ನಡ (Uttar Kannada) ಜಿಲ್ಲೆಯ ದಾಂಡೇಲಿಯ ಜನತಾ ಶಾಲೆಯಲ್ಲಿ 9 ಮತ್ತು 10 ನೇ ತರಗತಿಯ ಒಟ್ಟು 14 ವಿಧ್ಯಾರ್ಥಿನಿಯರು (Students) ಎಡಗೈ ತೋಳಿನ ಕೆಳಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಶಾಲೆಯಲ್ಲಿದ್ದಂತಹ ಉಳಿದ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಆ ಕೂಡಲೇ ಶಿಕ್ಷೀರು ಪೋಷಕರಿಗೆ ಶಿಕ್ಷಕರು ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಎಲ್ಲರೂ ದಾವಿಸಿದ್ದಾರೆ. ಇದರೊಂದಿಗೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಅಧಿಕಾರಿಗಳು ಕೂಡ ಬಂದು ಈ ಕುರಿತು ವಿಚಾರಣೆಯನ್ನು ಕೈಗೊಂಡಿದ್ದಾರು. ಆದರೀಗ ಈ ಪ್ರಕರಣಕ್ಕೆಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಪಬ್ಜಿ ಎಫೆಕ್ಟ್ ಅನ್ನಲಾಗ್ತಿದೆ.
ವಿದ್ಯಾರ್ಥಿಗಳು ಕೈ ಕುಯ್ದುಕೊಂಡಿರುವ ಘಟನೆ ನಾಲ್ಕೈದು ದಿನಗಳ ಹಿಂದೆಯೇ ನಡೆದಿದೆ. ವಿಷಯವನ್ನು ಪಾಲಕರಿಗೆ ತಿಳಿಸಿಲ್ಲ. ಶುಕ್ರವಾರ ಹಲವು ಪಾಲಕರ ಗಮನಕ್ಕೆ ಬರುತ್ತಿದ್ದಂತೆ ಶಾಲೆಗೆ ದೌಡಾಯಿಸಿ ಶಿಕ್ಷಕರನ್ನು ವಿಚಾರಿಸಿದ್ದಾರೆ. ಈ ವೇಳೆ ಶಿಕ್ಷಕರು ಪಾಲಕರೆದುರೇ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಒಂದೊಂದು ಕಾರಣ ಹೇಳಿದ್ದಾರೆ. ಹೂವು ಕೀಳುವ ವೇಳೆ ಮುಳ್ಳು ತರಚಿದೆ, ತಾಯಿ ಬೈದಿದ್ದರಿಂದ, ಸ್ನೇಹಿತೆ ಕೈ ಕುಯ್ದುಕೊಂಡಿದ್ದರಿಂದ ನಾನು ಮಾಡಿಕೊಂಡೆ ಎಂದು ಹೇಳಿದ್ದಾರೆ. ಆಗ ಶಿಕ್ಷಕರು ಬುದ್ಧಿ ಹೇಳಿ ಕಳಿಸಿದ್ದಾರೆ. ಶನಿವಾರ ಈ ವಿಷಯ ಪೊಲೀಸರು ಹಾಗೂ ಉಳಿದ ಪಾಲಕರಿಗೆ ತಲುಪಿದೆ. ಆಗ ಪಾಲಕರು ಮತ್ತು ಪೊಲೀಸರು ಶಾಲೆಗೆ ಭೇಟಿ ನೀಡಿ ಮುಖ್ಯಾಧ್ಯಾಪಕರ ಜತೆ ಚರ್ಚಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪಬ್‌ಜೀಯಂತಹ ಗೇಮ್ ಆಡಿ ಅವುಗಳ ಪ್ರೇರಣೆಯಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Vijaya lakshmi: ವಿಜಯ ಲಕ್ಷ್ಮಿಯ 7 ಬಾರಿ ಗರ್ಭಪಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಕೊನೆಗೂ ಯೂಟರ್ನ್ ಹೊಡೆದೇ ಬಿಟ್ಲಾ ಈ ನಟಿ !!