Uttar pradesh: ರಸ್ತೆಯಲ್ಲಿ ಸ್ಕಿಡ್ ಆದ ಬೈಕ್ – ಬ್ಯಾಗ್ ಒಳಗಿಂದ ತುಪು ತುಪು ಉದುರಿದವು ಎರಡು ಹೆಣ !!
Uttar pradesh: ಕೆಲವೊಮ್ಮೆ ತಪ್ಪು ಮಾಡಿ ಅದನ್ನು ಮರೆಮಾಚಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಕೈಗೂಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅದು ತಪ್ಪಿತಸ್ಥರನ್ನು ಸಿಕ್ಕಿಸಿಹಾಕಿಸಿಬಿಡುತ್ತದೆ. ಅಂತಾದ್ದೇ ವಿಚಿತ್ರ ಘಟನೆಯೊಂದು ಇದೀಗ ಉತ್ತರ ಪ್ರದೇಶದಲ್ಲಿ(Uttar pradesh) ನಡೆದಿದ್ದು, ರಸ್ತೆಯಲ್ಲಿ ಸ್ಕಿಡ್ ಆದ ಬೈಕ್ ನಲ್ಲಿದ್ದ ಬ್ಯಾಗ್ ನಿಂದ ಎರಡು ಹೆಣಗಳು ತುಪು ತುಪು ಉದುರಿದ್ದು, ಕೂಡಲೇ ಅಲ್ಲಿದ್ದ ಪೋಲೀಸರು ಅವರನ್ನು ಬಂಧಿಸಿದ್ದಾರೆ.
ಹೌದು, ಉತ್ತರಪ್ರದೇಶದ ಆಯೋಧ್ಯೆ(Ayodhya) ಬಳಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಬೈಕ್‌ನಲ್ಲಿ ಶವ ಸಾಗಿಸುತ್ತಿದ್ದ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಿತ್ರ ಅಂದರೆ ಯುವಕರಿಬ್ಬರು ಶವವನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿಸಿ ಇಬ್ಬರ ಮಧ್ಯದಲ್ಲಿ ಇರಿಸಿ ಸಾಗಿಸುತ್ತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಶವ ರಸ್ತೆಗೆ ಬಿದ್ದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ಅಂದಹಾಗೆ ಅಯೋಧ್ಯೆಯ(Ayodhya) ಖಂಡಸಾ ಪ್ರದೇಶದಲ್ಲಿನ ಆಜಾದ್‌ನಗರ-ಘಟೌಲಿ (Azadnagar-Ghatauli intersection) ಬಳಿ ರಸ್ತೆ ವಿಭಾಜಕದಲ್ಲಿ ಬೈಕ್ (Motorbike) ಸ್ಕಿಡ್ ಆಗಿ ಪ್ಲಾಸ್ಟಿಕ್ ಬ್ಯಾಗೊಂದು ಕೆಳಗೆ ಬಿದ್ದಿದ್ದು, ಅದರಿಂದ ಮನುಷ್ಯರ ಕೈಯೊಂದು ಹೊರಗೆ ಬಂದಿದೆ. ಇದನ್ನು ನೋಡಿ ಅಲ್ಲಿದ್ದವರು ಗಾಬರಿಯಾಗಿದ್ದು, ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಜನರಿಗೆ ಗೊತ್ತಾಯಿತು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶವ ಸಾಗಿಸುತ್ತಿದ್ದ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಅವರಿಬ್ಬರನ್ನು ಬಂಧಿಸಲಾಗಿದ್ದು ಸಮೀಪದ ಹೊಳೆಯಲ್ಲಿ ಈ ಶವವನ್ನು ಬಿಡಲು ಯುವಕರು ಹೊರಟಿದ್ದರು ಎಂದು ತಿಳಿದು ಬಂದಿದೆ.
ಮೃತದೇಹದ ಶವದಲ್ಲಿ ಗಾಯದ ಗುರುತು:
ಇನ್ನು ಬೈಕ್ ನಿಂದ ಹೊರಬಂದ ಮೃತ ವ್ಯಕ್ತಿಯ ತಲೆಯಲ್ಲಿ ಗಾಯದ ಗುರುತಿದ್ದು, ಯಾವುದೋ ಮಾರಾಮಾರಿ ನಡೆದ ಅನುಮಾನ ಎದುರಾಗಿದೆ. ಅಲ್ಲದೆ ಆರೋಪಿಗಳು ಬಳಸಿದ್ದ ಬೈಕ್ ಕೂಡ ಮೃತನ ಹೆಸರಿನಲ್ಲೇ ನೋಂದಣಿಯಾಗಿತ್ತು. ಇನ್ನು ತನಿಖೆ ನಂತರ ಮೃತನ ಮೂವರು ಸಹೋದರರು ಈಗಾಗಲೇ ಮೃತಪಟ್ಟಿದ್ದು, ಈತನ ಪತ್ನಿ ಕೆಲ ತಿಂಗಳ ಹಿಂದೆ ಈತನನ್ನು ಬಿಟ್ಟು ಹೋಗಿದ್ದಳು ಎಂದು ತಿಳಿದು ಬಂದಿದೆ. ಏನಿದು ಪ್ರಕರಣ ಎಂಬುದು ಮುಂದಿನ ತನಿಖೆಯಿಂದ ತಿಳಿಯಬೇಕಿದೆ.