ಬೆಳ್ಳಾರೆ : ವ್ಯಕ್ತಿಯೊಬ್ಬರ ಜತೆ ಕೆಲಸಕ್ಕೆ ಹೋಗುವ ವಿಚಾರದಲ್ಲಿ ತಗಾದೆ ,ಯುವಕನಿಗೆ ಹಲ್ಲೆ

Sullia news A young man was assaulted while he was going to work with a man in bellare

Bellare : ವ್ಯಕ್ತಿಯೊಬ್ಬರ ಜತೆ ಕೆಲಸಕ್ಕೆ ಹೋಗುವ ವಿಚಾರದಲ್ಲಿ ತಕರಾರು ತೆಗೆದು ಯುವಕನೊಬ್ಬನಿಗೆ ಹಲ್ಲೆ ನಡೆಸಿದ ಬಗ್ಗೆ ಬೆಳ್ಳಾರೆ( Bellare) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಿವರಾಜ್ ಎಂ, ಬಿ (27) ಎಂಬವರು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಂತೆ, ಸೆ.17ರಂದು ಸಂಜೆ ಶಿವರಾಜ್ ಅವರು ಬೆಳ್ಳಾರೆ ಗ್ರಾಮದ ಕೊಳಂಬಳ ಅಕ್ಕಿ ಮಿಲ್ಲ್ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದಾಗ, ನೆಟ್ಟಾರು ಕಡೆಯಿಂದ ಕಾರೊಂದರಲ್ಲಿ ಬಂದ ಆರೋಪಿಗಳಾದ ಹಕೀo,ಅತ್ತಾವುಲ್ಲ ,ರಫೀಕ್ ಅಜ್ಜಾವರ ಮತ್ತು ಆಶೀರ್ ಎಂಬವರು, ಶಿವರಾಜ್‌ರನ್ನು ಅಡ್ಡಗಟ್ಟಿ, ಜಮಾಲುದ್ದೀನ್ ಎಂಬವರೊಂದಿಗೆ ಕೆಲಸಕ್ಕೆ ಹೋಗುತ್ತಿರುವ ವಿಚಾರದಲ್ಲಿ ತಕರಾರು ತೆಗೆದು ಹಲ್ಲೆ ನಡೆಸಿದ್ದಾರೆ.ಅಲ್ಲದೆ ಜಾತಿನಿಂದನೆ ಮಾಡಿ ಜೀವಬೆದರಿಕೆ ಹಾಕಿ ತೆರಳಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಶಿವರಾಜ್ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 63/2023 ಕಲಂ :341, 504,323,506, ಜೊತೆಗೆ 34 ಐಪಿಸಿ ಮತ್ತು ಕಲo 3(1)(r)(s)prevention of atrocities (Amendment)Act 2015 ಯಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: SBI: ಸಾಲದ ಕಟ್ಟಲು ಡೆಡ್‌ಲೈನ್‌ ಬಂದ್ರೂ ಕಂತು ಕಟ್ಟದವರಿಗೆ ಚಾಕೋಲೇಟ್ ಕೊಡ್ತಿದೆ SBI ಬ್ಯಾಂಕ್ !! ಏನಿದು ಬ್ಯಾಂಕ್ ನ ಹೊಸ ನಡೆ?

Leave A Reply

Your email address will not be published.