Rabindranath tagore shantiniketan house : ಠಾಗೂರರ ‘ಶಾಂತಿನಿಕೇತನ’ವಿನ್ನು ವಿಶ್ವ ಪಾರಂಪರಿಕ ತಾಣ – ಯುನೆಸ್ಕೊ ಪಟ್ಟಿಗೆ ಹೆಸರು ಸೇರ್ಪಡೆ !!

National news Rabindranath Tagore Shantiniketan house listed into UNESCO World Heritage site

Rabindranath tagore shantiniketan house :ನೊಬೆಲ್ ಪ್ರಶಸ್ತಿ ಪುರಸ್ಕೃತ, ಸಾಹಿತಿ, ಭಾರತದ ರಾಷ್ಟ್ರಗೀತೆ ಜನಗಣಮನ ರಚನೆ ಮಾಡಿದ ರಬೀಂದ್ರನಾಥ್ ಠಾಗೋರ್ ಅವರ ಮನೆ (Rabindranath tagore shantiniketan house) ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗಿದೆ. ಹೌದು, ಠಾಗೂರರ ‘ಶಾಂತಿನಿಕೇತನ’ವಿನ್ನು ವಿಶ್ವ ಪಾರಂಪರಿಕ ತಾಣ. ಯುನೆಸ್ಕೋ ಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ.

ಶಾಂತಿನಿಕೇತನ ಪಶ್ಚಿಮ ಬಂಗಾಳದ ಬೀರ್ಮುಮ್ ಜಿಲ್ಲೆಯಲ್ಲಿದೆ. ಇದು ಯುನೆಸ್ಕೋ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಭಾರತದ 41 ತಾಣಗಳು ಈ ಪಟ್ಟಿಗೆ ಸೇರಿದ ಹೆಗ್ಗಳಿಕೆ ಪಡೆದುಕೊಂಡಿದೆ. ಸಭೆಯಲ್ಲಿ ಪಾರಂಪರಿಕ ಪಟ್ಟಿಗೆ ಶಾಂತಿನಿಕೇತನ ಸೇರ್ಪಡೆ ಘೋಷಣೆಯಾಗುತ್ತಿದ್ದಂತೆ ಭಾರತದ ಅಧಿಕಾರಿಗಳು ಧನ್ಯವಾದ, ಭಾರತ್ ಮಾತಾ ಕಿ ಜೈ ಎಂದು ಸಂತಸದಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಶಾಂತಿನಿಕೇತನವನ್ನು 1863ರಲ್ಲಿ ರವೀಂದ್ರನಾಥ ಟಾಗೋರ್‌ನವರ ತಂದೆ ಮಹರ್ಷಿ ದೇವೇಂದ್ರನಾಥ್‌ರವರು ಪಶ್ಚಿಮ ಬಂಗಾಳದ ಬೀರ್‌ಭೂಂನಲ್ಲಿ ಸ್ಥಾಪಿಸಿದ್ದರು. ನಂತರ ರವೀಂದ್ರನಾಥ್‌ ಟಾಗೋರರು ಮುನ್ನಡೆಸಿಕೊಂಡು ಅದನ್ನು ವಿಶ್ವ ಭಾರತಿ ಎಂಬ ವಿಶ್ವ ವಿದ್ಯಾಲಯವನ್ನಾಗಿಸಿದರು.

ಈ ಶಾಂತಿನಿಕೇತನದಲ್ಲಿ ರಬೀಂದ್ರನಾಥ್ ಠಾಗೋರ್ ಹಲವು ಸಭೆಗಳನ್ನು ನಡೆಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಹಾತ್ಮಾ ಗಾಂಧಿ ಜೊತೆಗೆ ಹಲವು ಸಭೆಗಳು ನಡೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮನೆ ಪ್ರಮುಖ ಪಾತ್ರ ನಿರ್ವಹಿಸಿದೆ. ಸ್ವಾತಂತ್ರ್ಯ ಬಳಿಕ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಕೂಡ ಇದೇ ಮನೆಯಲ್ಲಿ ಠಾಗೋರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: Vijaya lakshmi: ವಿಜಯ ಲಕ್ಷ್ಮಿಯ 7 ಬಾರಿ ಗರ್ಭಪಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಕೊನೆಗೂ ಯೂಟರ್ನ್ ಹೊಡೆದೇ ಬಿಟ್ಲಾ ಈ ನಟಿ !!

Leave A Reply

Your email address will not be published.