Petrol- diesel price: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ !! ಕಂಗಾಲದ ಪರ ದೇಶದ ಜನ
Petrol- diesel price: ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನ(pakistan) ಸರ್ಕಾರ, ಜನರ ಮೇಲೆ ಪುನಃ ಕರಭಾರ ಹೇರಿದ್ದು, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ ಕಂಡಿದ್ದು ನಮ್ಮ ಪರದೇಶದ ಜನ ಮತ್ತೆ ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ.
ಹೌದು, ಆರ್ಥಿಕವಾಗಿ ಪಾತಾಳಕ್ಕೆ ಕುಸಿದು ನರಳುತ್ತಿರುವ ಪಾಕಿಸ್ತಾನದಲ್ಲಿ ಹಣದುಬ್ಬರ ಏರುತ್ತಲೇ ಇದೆ. ಪಾಕ್‌ನಲ್ಲಿ ಬಡ ಜನರ ಬದುಕು ನರಳಾಡುವ ಸನ್ನಿವೇಶಕ್ಕೆ ಸಿಲುಕಿಬಿಟ್ಟಿದೆ. ದಿನನಿತ್ಯ ಬೇಕಾಗಿರುವ ವಸ್ತುಗಳು ಕೈಗೆ ಸಿಗುತ್ತಿಲ್ಲ. ಹೀಗಾಗಿ ಹೆಚುತ್ತಿರುವ ಆರ್ಥಿಕ ಸವಾಲುಗಳ ನಡುವೆ ದಿವಾಳಿಯಾಗುತ್ತಿರುವ ಪಾಕಿಸ್ತಾನ (Pakistan) ಶುಕ್ರವಾರ ಪೆಟ್ರೋಲ್ (Petrol) ಮತ್ತು ಹೈಸ್ಪೀಡ್ ಡೀಸೆಲ್ (Highspeed Diesel) ಬೆಲೆಯನ್ನು ಏರಿಸಿದೆ.
ಎಷ್ಟೆಷ್ಟು ಬೆಲೆ ಏರಿಕೆ?
ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 26.02 ಪಿಕೆಆರ್ (ಅಂದಾಜು 7.28 ರೂ.) ಏರಿಕೆ ಮಾಡಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 17.34 ಪಿಕೆಆರ್ (ಅಂದಾಜು 4.85 ರೂ.) ಏರಿಕೆ ಮಾಡಿದೆ. ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 333.38 ಪಿಕೆಆರ್ (ಅಂದಾಜು 93.26 ರೂ.) ಮಾರಾಟ ಮಾಡುತ್ತಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 329.18 ಪಿಕೆಆರ್ (ಅಂದಾಜು 92.09 ರೂ.) ಆಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ (Price Hike) ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.