Kantara 2: ಅಬ್ಬಬ್ಬಾ.. ನೀರಿಕ್ಷೆಗೂ ಮೀರಿದ ಕಾಂತಾರ-2 ! ಮೊದಲ ಪಾರ್ಟ್‌ಗಿಂತ ಹತ್ತು ಪಟ್ಟು ಬಜೆಟ್ ಏರಿಸಿದ ಸೆಟ್!

Sandalwood news kantara-2 Rishab Shetty starrer to be made with the whoping budget of rupees 150 crore

Kantara 2: ಹಿಂದೂ ಧರ್ಮದಲ್ಲಿ ಹಳ್ಳಿ ಜನರ ಸಂಸ್ಕೃತಿ ಸೊಗಡು, ಅವರ ದೈವಾರಾಧನೆಯ ಸೊಬಗು , ಭಕ್ತಿಯಲ್ಲಿರುವ ಶಕ್ತಿಯನ್ನು ಇಡೀ ಜಗತ್ತಿಗೆ ಸಾರಿದ ಕೀರ್ತಿ ಕಾಂತರ ಚಿತ್ರಕ್ಕೆ ಸಲ್ಲುತ್ತದೆ. ಯಾಕೆಂದರೆ ಕಾಂತಾರ ಎಂದಾಗ ದೈವದ ನೆನಪಾಗುವಷ್ಟು ಪ್ರಸಿದ್ಧಿ ಪಡೆದಿದೆ. ಒಟ್ಟಿನಲ್ಲಿ ಭಾರತ ಚಿತ್ರರಂಗದಲ್ಲಿಯೇ ಅದ್ಭುತವಾಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅವರ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ದೊರೆತಿದೆ.
ಮುಖ್ಯವಾಗಿ ಜಗತ್ತಿನಾದ್ಯಂತ ದಾಖಲೆ ಸೃಷ್ಟಿಸಿದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಬರೋಬ್ಬರಿ 398 ಕೋಟಿ ರೂ. ಬಾಚಿಕೊಂಡಿದೆ.

ಮೂಲತಃ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ತೆರೆಕಂಡಾಗ ಕೇವಲ ಕನ್ನಡ ಸಿನಿಮಾವಾಗಿತ್ತು. ಆದರೆ ನಂತರ ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿಂಚಿತು. ಕನ್ನಡದಲ್ಲಿ ನಿರ್ಮಿಸಿದ್ದ ‘ಕಾಂತಾರ’ ನಂತರ ತೆಲುಗು, ಹಿಂದಿ, ತಮಿಳು ವರ್ಷನ್‌ಗಳಲ್ಲಿಯೂ ಡಬ್​ ಆಗಿ ಅಲ್ಲಿಯೂ ಜನರ ಮೆಚ್ಚುಗೆ ಗಳಿಸಿತು. ಆದ್ದರಿಂದ ಸಹಜವಾಗಿಯೇ ಕಾಂತಾರ 2 ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಹೀಗಿರುವಾಗ ‘ಕಾಂತಾರ 2′(Kantara 2) ಸಿನಿಮಾವನ್ನು ಮೊದಲ ಪಾರ್ಟ್‌ಗಿಂತ ಹತ್ತು ಪಟ್ಟು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.

ಕಾಂತಾರ ಮೊದಲನೇ ಭಾಗದ ಗ್ರ್ಯಾಂಡ್‌ ಸಕ್ಸಸ್‌ ನಂತರ, ನಟ-ನಿರ್ದೇಶಕ ರಿಷಬ್ ಶೆಟ್ಟಿ ವೀಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಸಿನಿಮಾವನ್ನು ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೀಗ ಚಿತ್ರ ತಂಡ ಕಾಂತಾರ-2 ವಿಚಾರವಾಗಿ ಈ ಸಿನಿಮಾ ಬಿಗ್ ಬಜೆಟ್ ನಲ್ಲಿ ಕಾಂತಾರ 2 ಚಿತ್ರತಂಡ ನಿರ್ಮಾಣಕ್ಕೆ ರೆಡಿಯಾಗಿದೆ ಎಂದು ತಿಳಿದಿದೆ.

ಕಾಂತಾರ ಇನ್ನೂ ಹೆಚ್ಚು ಹೆಸರು ಮಾಡಲು ಕಾರಣವೆಂದರೆ ಅತ್ಯಂತ ಕಡಿಮೆ ಬಜೆಟ್​ನಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದಕ್ಕೆ ಖರ್ಚು ಮಾಡಿದ್ದು ಕೇವಲ 16 ಕೋಟಿ ರೂ.
ಆದರೆ, ಕಾಂತಾರ-2 ಹಾಗಲ್ಲ. ಕಾಂತಾರ ಮೊದಲಿನ ಭಾಗದ ಸಕ್ಸಸ್‌ನಿಂದ ವೀಕ್ಷಕರಿಗೆ ಚಿತ್ರದ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ಚಿತ್ರತಂಡ ಹೆಚ್ಚು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾತ್ರವಲ್ಲ, ಕಾಂತಾರ-2 ಬರೋಬ್ಬರಿ 150 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂದು ವರದಿಯಾಗಿದೆ. ಕಾಂತಾರ 2 ಮೇಲೆ ಭಾರಿ ನಿರೀಕ್ಷೆಗಳಿರುವ ಕಾರಣಕ್ಕಾಗಿಯೇ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.

ಇನ್ನು ಕಾಂತಾರ 2ನಲ್ಲಿನ ತನ್ನ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ತೆಳ್ಳಗೆ ಕಾಣಿಸಿಕೊಳ್ಳಲು ಸುಮಾರು 11 ಕಿಲೋಗಳನ್ನು ಇಳಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ‘ಕಾಂತಾರ 2’ ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹ ತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ. ಇನ್ನು, ‘ಕಾಂತಾರ 2′ ಕಥೆಯು ಕ್ರಿ ಶ 400ರಲ್ಲಿ ನಡೆಯಲಿದೆ ಎಂಬ ಮಾತು ಸಹ ಕೇಳಿ ಬರ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಕಾಂತಾರ’ ಕಥೆಯು ಕರಾವಳಿ ಹಿನ್ನೆಲೆಯಲ್ಲಿ ಸಾಗುವುದರಿಂದ, ಅಲ್ಲಿಯೇ ಶೂಟಿಂಗ್ ನಡೆಯಲಿದ್ದು, ಒಟ್ಟಿನಲ್ಲಿ ರಿಷಬ್ ಶೆಟ್ಟಿಯವರ ಕಾಂತಾರ 2 ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಅಭಿಮಾನಿಗಳು ಕಾಂತಾರ ಪಾರ್ಟ್‌-2ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ನಾಲ್ಕು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ RBI ! ಈ ಬ್ಯಾಂಕಗಳಲ್ಲಿ ನೀವೂ ಖಾತೆ ಹೊಂದಿದ್ದರೆ ಅಲರ್ಟ್ ಆಗಿರಿ

Leave A Reply

Your email address will not be published.