ನಾಲ್ಕು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ RBI ! ಈ ಬ್ಯಾಂಕಗಳಲ್ಲಿ ನೀವೂ ಖಾತೆ ಹೊಂದಿದ್ದರೆ ಅಲರ್ಟ್ ಆಗಿರಿ

Bank news RBI imposes monitory penalty on four cooperative banks

RBI Penalty: ಪ್ರಮುಖ ನಿಯಮಗಳನ್ನು ನಿರ್ಲಕ್ಷಿಸಿರುವ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಟ್ಟು ನಾಲ್ಕು ಬ್ಯಾಂಕ್‌ಗಳಿಗೆ ಭಾರೀ ದಂಡ (RBI Penalty) ವಿಧಿಸಿದೆ. ಈ ನಾಲ್ಕು ಬ್ಯಾಂಕ್‌ಗಳು ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕೆ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಮೂಲ ನಿಯಮಗಳನ್ನು ನಿರ್ಲಕ್ಷಿಸಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಟ್ಟು ನಾಲ್ಕು ಬ್ಯಾಂಕ್‌ಗಳಿಗೆ ಭಾರೀ ದಂಡ ವಿಧಿಸಿದೆ. ತನಿಖೆಯ ಸಮಯದಲ್ಲಿ, ಈ ಬ್ಯಾಂಕ್‌ಗಳು ಆರ್‌ಬಿಐನ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ. ಈ ಪರಿಣಾಮ ಬ್ಯಾಂಕ್‌ಗಳಿಗೆ ಭಾರೀ ದಂಡ ವಿಧಿಸಲಾಗುತ್ತಿದೆ ಎಂದು ಆರ್‌ಬಿಐ ತನ್ನ ಆದೇಶದಲ್ಲಿ ತಿಳಿಸಿದೆ.

ದೇಶದ ಕೇಂದ್ರ ಬ್ಯಾಂಕ್ ಈ ನಾಲ್ಕು ಬ್ಯಾಂಕ್‌ಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಈ ನಾಲ್ಕೂ ಬ್ಯಾಂಕ್‌ಗಳು ಸಹಕಾರಿ ಬ್ಯಾಂಕ್‌ಗಳಾಗಿವೆ. ಆರ್‌ಬಿಐ ಪ್ರಕಾರ, ದಂಡ ವಿಧಿಸಿದ ಬ್ಯಾಂಕ್‌ಗಳಲ್ಲಿ ವಾಘೋಡಿಯಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಮತ್ತು ವಿರಾಮ್‌ಗಮ್ ಮರ್ಕೆಂಟೈಲ್ ಕೋಆಪರೇಟಿವ್ ಬ್ಯಾಂಕ್, ಬಾರಾಮತಿ ಸಹಕಾರಿ ಬ್ಯಾಂಕ್, ಬೆಚರಾಜಿ ನಾಗರಿಕ್ ಸಹಕಾರಿ ಬ್ಯಾಂಕ್ ಸೇರಿವೆ.

ವಘೋಡಿಯಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ 5 ಲಕ್ಷ ರೂ. ಮತ್ತು ವಿರಾಮ್‌ಗಾಮ್ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಬಾರಾಮತಿ ಸಹಕಾರಿ ಬ್ಯಾಂಕ್‌ಗೆ 2 ಲಕ್ಷ ರೂ, ಮತ್ತು ಬೆಚ್ಚರಾಜಿ ನಾಗರಿಕ್ ಸಹಕಾರಿ ಬ್ಯಾಂಕ್‌ಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಈಗಾಗಲೇ ಹ್ಯಾಕರ್‌ಗಳು ಎಪಿ ಮಹೇಶ್ ಸಹಕಾರಿ ಬ್ಯಾಂಕ್ ಗೆ ಹ್ಯಾಕರ್‌ಗಳು ನುಗ್ಗಿ ಬ್ಯಾಂಕ್‌ಗೆ 12.48 ಕೋಟಿ ರೂ. ನಷ್ಟ ಮಾಡಿದ್ದರು. ಸೈಬರ್ ಭದ್ರತೆಯ ನಿಯಮಗಳನ್ನು ನಿರ್ಲಕ್ಷಿಸಿದ ಪರಿಣಾಮ ಈ ಬ್ಯಾಂಕಿಗೆ 65 ಲಕ್ಷ ರೂ. ದಂಡ ವಿಧಿಸಿತ್ತು.

ಸದ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಪ್ರಕಾರ, ದಂಡವನ್ನು ವಿಧಿಸುವ ಬ್ಯಾಂಕುಗಳು. ಅದನ್ನು ಬ್ಯಾಂಕ್‌ ಮಾತ್ರ ಪಾವತಿಸಬೇಕಿದೆ. ಅದರಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಇದರಿಂದ ಯಾವುದೇ ಪರಿಣಾಮ ಬೀರದು. ಗ್ರಾಹಕರಿಗೂ ದಂಡದ ಮೊತ್ತಕ್ಕೂ ಯಾವುದೇ ಸಂಬಂಧ ಇಲ್ಲ. ಗ್ರಾಹಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ. ಈ ದಂಡವನ್ನು ಬ್ಯಾಂಕ್ ಮಾತ್ರ ಪಾವತಿಸಬೇಕು ಎಂದು ನಿಯಮವಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ಕಾರಣಗಳಿಗಾಗಿ ಈ ಮೇಲಿನ ಎಲ್ಲಾ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ ಮತ್ತು ನಿಯಮಗಳನ್ನು ಅನುಸರಿಸಲು ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಬ್ಯಾಂಕ್‌ಗಳು ನಿಯಮಗಳನ್ನು ಅನುಸರಿಸದಿದ್ದರೆ, ದಂಡ ಮತ್ತು ನಿರ್ಬಂಧಗಳನ್ನು ವಿಧಿಸಬಹುದು.

ಇದನ್ನೂ ಓದಿ: ಬೀದಿನಾಯಿಯನ್ನೂ ಬಿಡದೆ ಅತ್ಯಾಚಾರ ಎಸಗಿದ ನೀಚ !! ವೈರಲ್ ಆಯ್ತು ವಿಡಿಯೋ

Leave A Reply