Power TV Rakesh Shetty: ವಿಶ್ವದ ಶ್ರೇಷ್ಠ ಸಮುದಾಯಗಳಲ್ಲಿ ಒಂದಾದ ಶೆಟ್ಟರನ್ನು ಅವಮಾನಿಸಿದ ಪವರ್ ಟಿವಿ ರಾಕೇಶ್ ಶೆಟ್ಟಿ | ಮಹೇಶ್ ಶೆಟ್ಟಿ ಸರ್ ನೇಮ್ ” ಬೇ… ಸಿ” ಅಂತೆ !!
Dharmastala Sowjanya murder and rape case Power TV Rakesh Shetty insulted Mahesh Shetty thimarodi
Power TV Rakesh Shetty: ಪವರ್ ಟಿವಿಯ ಎಂಡಿ, ರಾಕೇಶ್ ಶೆಟ್ಟಿಯವರು (Power TV Rakesh Shetty) ಇಂದು ನಡೆದ ಕ್ಷಮಿಸು ಸೌಜನ್ಯ-3 ಕಾರ್ಯಕ್ರಮದ ಸಂದರ್ಭ ಯಾರೂ ಊಹಿಸದ ರೀತಿಯಲ್ಲಿ ಶೆಟ್ಟಿ ಸಮುದಾಯವನ್ನು ಅಪಮಾನ ಮಾಡಿದ್ದಾರೆ. ವಿಶ್ವದ ಒಂದು ಅತ್ಯಂತ ಶ್ರೇಷ್ಠ ಸಮುದಾಯವಾದ ಶೆಟ್ಟರಿಗೆ ಈವರೆಗೆ ಯಾರೂ ಮಾಡದೆ ಇರುವ ಅಕ್ಷಮ್ಯ ಅಪರಾಧವನ್ನು ರಾಕೇಶ್ ಶೆಟ್ಟಿ ಮಾಡಿದ್ದಾರೆ. ಶೆಟ್ಟಿ ಇಡೀ ಶೆಟ್ಟಿ ಸಮುದಾಯವನ್ನೇ ಅವಮಾನಿಸಿದ್ದಾರೆ. ಅಕ್ಷಮ್ಯ ಅಕ್ಷಮ್ಯ ಅಪರಾಧ ಎಸಗಿದ್ದಾರೆ ರಾಕೇಶ್ ಶೆಟ್ಟಿ.
ಹಾಗಾದ್ರೆ ಏನಂದ್ರು ಪವರ್ ಟಿವಿ ಮ್ಯಾನೇಜಿಂಗ್ ಡೈರೆಕ್ಟರ್ ರಾಕೇಶ್ ಶೆಟ್ಟಿ ? ಬನ್ನಿ ನೋಡೋಣ.
ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳವನ್ನು ಸಮರ್ಥಿಸುವ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದೂರುವ ಸನ್ನಿವೇಶದಲ್ಲಿ, ಔಚಿತ್ಯ ಮರೆತು ಮಾತನಾಡಿದ್ದಾರೆ ರಾಕೇಶ್ ಶೆಟ್ಟಿ. ಹೌದು, ಮಹೇಶ್ ಶೆಟ್ಟಿ ತಿಮರೋಡಿ ಅವರ ಸರ್ ನೇಮ್ ”ಬೇ…ರ್ಸಿ” ಇರಬೇಕು ಅಂದಿದ್ದಾರೆ. ಅಂದರೆ ಇಡೀ ಶೆಟ್ಟಿ ಸಮುದಾಯವನ್ನು ರಾಕೇಶ್ ಶೆಟ್ಟಿ ಅವಮಾನಿಸಿದ್ದಾರೆ.
ನಿನ್ನೆ ಮಹೇಶ್ ಶೆಟ್ಟಿಯವರನ್ನು ದೂರುವ ಸಂದರ್ಭದಲ್ಲಿ ಮಹೇಶ್ ಶೆಟ್ಟಿಯವರ ಸರ್ ನೇಮ್ ಬೇ … ಅಂದು ನಾಲಗೆ ಹರಿಬಿಟ್ಟಿದ್ದಾರೆ ರಾಕೇಶ್ ಶೆಟ್ಟಿ. ಸರ್ ನೇಮ್ ಅಂದರೆ, ಶೆಟ್ಟಿ, ಭಟ್, ಗೌಡ, ಪೂಜಾರಿ ಇತ್ಯಾದಿ ಆಗಿದ್ದು, ಮಹೇಶ್ ಶೆಟ್ಟಿ ಶೆಟ್ಟರಾಗಿದ್ದು, ಅವರ ಸರ್ ನೇಮ್ ಅನ್ನು ಬೇ…ಸಿ ಅನ್ನುವ ಮೂಲಕ ಇಡೀ ಶೆಟ್ರಿಗೆ ರಾಕೇಶ್ ಶೆಟ್ಟಿ ಅವಮಾನ ಮಾಡಿದ್ದಾರೆ.
ಪ್ರತಿಭಟನೆಗಾರರು ಟೆರರಿಸ್ಟ್ ಗಳು ಅಂದ ಚಾನೆಲ್:
ನಿನ್ನೆ ಪ್ರಸಾರ ಆದ ಪವರ್ ಟಿವಿಯ ‘ಕ್ಷಮಿಸು ಸೌಜನ್ಯ -3’ ಸಂದರ್ಭವನ್ನು ಕೇವಲ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಹೋರಾಟಗಾರರನ್ನು ಟೀಕಿಸಲು ಬಳಸಿಕೊಂಡರು ರಾಕೇಶ್ ಶೆಟ್ಟಿ. ಸೆಟಲೈಟ್ ಟಿವಿ ಎಂದು ಬೀಗುತ್ತಿರುವ ಟಿವಿಯೊಂದು ಇತಿಹಾಸದಲ್ಲಿಯೇ, ಅದೂ ಟಿವಿಯೊಂದರ ಮಾಲೀಕರು ವೈಯಕ್ತಿಕ ನಿಂದನೆಗೆ ಇಳಿದದ್ದು ಇದೇ ಮೊದಲು. ಸೌಜನ್ಯ -3 ಕಾರ್ಯಕ್ಕಮಾದ ಆರಂಭದಲ್ಲಿ, ಪ್ರತಿಭಟನೆಗಾರರನ್ನು ಟೆರರಿಸ್ಟ್ ಅಂದಿದ್ದಾರೆ ರಾಕೇಶ್ ಶೆಟ್ಟಿ. ಮೊದಲಿಗೆ, ಶಾಂತಿಯುತವಾಗಿ ಪ್ರಜಾಪ್ರಭುತ್ವದ ಹಕ್ಕನ್ನು ಬಳಸುವ, ಪ್ರತಿಭಟನೆ ಮಾಡುವವರನ್ನು ಟೆರರಿಸ್ಟ್ ಗಳಿಗೆ ಹೋಲಿಸಿದೆ ಟಿವಿ ಚಾನೆಲ್.
ತನ್ನ ಏಕಮುಖ ಅಭಿಪ್ರಾಯಗಳಿಂದ ಬಂದಿದ್ದ ಚಾನೆಲ್ ಕೇವಲ ಧರ್ಮಸ್ಥಳದ ಪರವಾಗಿ ಮಾತಾಡಿತ್ತು. ಕಳೆದ 11 ವರ್ಷಗಳಿಂದ ಸೌಜನ್ಯನ ಸಂತ್ರಸ್ತ ಅಮ್ಮನನ್ನು ಕೂಡಾ ಅನುಮಾನಿಸಿ ಮಾತಾಡಿದ ನಿನ್ನೆಯ ಪ್ರೋಗ್ರಾಮ್ ನಲ್ಲಿ ತಾನು ಮಾಡಿದ್ದೇ ತನಿಖೆ, ಎನ್ನುತ್ತಾ ಮಹೇಶ್ ಶೆಟ್ಟರಿಗೆ ಏಕವಚನದಲ್ಲಿ ನಿಂದೆ ಮಾಡಿತ್ತು. ಬೈಗುಳ ಅತಿಯಾದಾಗ ಮಾತು ಜಾರಿದೆ. ಇಡೀ ಶೆಟ್ಟಿ ಸಮುದಾಯಕ್ಕೆ ತೀವ್ರ ಅಪಮಾನ ಆಗಿದೆ. ಶೆಟ್ಟರ ಸರ್ ನೇಮ್ ಅನ್ನು ಕೆಟ್ಟ ಪದಕ್ಕೆ ಹೋಲಿಸಿದ ಘಟನೆಯನ್ನು ನಾವು ಕೂಡಾ ಖಂಡಿಸುತ್ತಿದ್ದೇವೆ.
ಅಕ್ಷಮ್ಯ ಅಪಮಾನ:
ನಿನ್ನೆಯ ಪ್ರೋಗ್ರಾಮಿನಲ್ಲಿ ಭಾಗಿಯಾದಉಳಿದವರ ಮಾತಿನ ಬಗ್ಗೆ ಆಶ್ಚರ್ಯ ಆಗಲಿಲ್ಲ. ಯಾಕೆಂದರೆ ಅದು ನಿರೀಕ್ಷಿತವೇ ಆಗಿತ್ತು. ಆದರೆ, ಪ್ರವೀಣ್ ವಾಲ್ಕೆಯಂತಹ ನಿಜವಾದ ಹೋರಾಟಗಾರ ಮತ್ತು ಹಿರಿಯರನ್ನು ಕೂಡ ಕರೆದು ತಂದು ತಾವು ಜೀವಮಾನದಲ್ಲಿ ಗಳಿಸಿದ ಒಳ್ಳೆಯ ಹೆಸರನ್ನು ಹಾಳುಮಾಡುವ ಪ್ರಯತ್ನ ಕಾರ್ಯಕ್ರಮದ ಮೇಲೆ ಪ್ರಜ್ಞಾವಂತರಿಗೆ ಬೇಸರ ಮೂಡಿಸಿದ್ದು ನಿಜ. ಯಾವುದೊ ಅಪ್ರಸ್ತುತ ಡಾಕ್ಯುಮೆಂಟ್ ಗಳನ್ನು ಮುಂದಿಟ್ಟು, ‘ಇದು ಸಾಕ್ಷಿ, ಇದೇ ಫೈನಲ್, ಇನ್ನೇನು ಬೇಕು ?” ಎನ್ನುವ ಈ ಕಾರ್ಯಕ್ರಮದ ನೋಡಿದ ಎಂಥವರಿಗಾದರೂ ಅದರ ಉದ್ದೇಶ, ಅದರ ಹಿಂದಿರುವ ‘ ಅರ್ಥ’ ವು ಅರ್ಥ ಆಗೋದರಲ್ಲಿ ಅನುಮಾನವೇ ಇಲ್ಲ!
ಜಗತ್ತಿನ ಯಾವುದೇ ಕ್ಷೇತ್ರದಲ್ಲಿಯಾಗಲೀ, ಯಾವುದೇ ಕ್ಷೇತ್ರಕ್ಕೆ ಹೋಗಲಿ, ತನ್ನತನವನ್ನು ಬಿಟ್ಟು ಕೊಡದೆ ತಮ್ಮದೇ ಆದ ಛಾಪು ಮೂಡಿಸಿರುವ ಸಮುದಾಯ ಶೆಟ್ಟರದು. ಕಲೆ – ಸಂಸ್ಕೃತಿ ಸಂಸ್ಕಾರ, ದೈವ, ದೇವರುಗಳನ್ನು ಸದಾ ಪೂಜಿಸುವ, ಧ್ಯಾನಿಸುವ ಶೆಟ್ಟಿ ಸಮುದಾಯವನ್ನು ಈ ಥರ ನಿಷ್ಕೃಷ್ಟವಾಗಿ ಕಂಡದ್ದು ಇತಿಹಾಸದಲ್ಲೇ ಇಲ್ಲ. ಇದಕ್ಕೆ ಅಣ್ಣಪ್ಪ ಮಂಜುನಾಥರೇ ಕ್ಷಮೆ ನೀಡಬೇಕು.
ತಾನೊಬ್ಬ ತನಿಖಾ ಪತ್ರಿಕೋದ್ಯಮಿ, ನನ್ನದು ಇಂಟರ್ನ್ಯಾಷನಲ್ ಲೆವೆಲ್; ನಮ್ಮದು ಸೆಟಲೈಟ್ ಟಿವಿ- ನಿಮ್ಮ’ಥರ ಕಾಗಕ್ಕ ಗುಬ್ಬಕ್ಕ ಕಥೆ ‘ ಹೇಳುವ ಯೂ ಟ್ಯೂಬ್ ಅಲ್ಲ ಎನ್ನುವ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಯ ಈ ಹೇಳಿಕೆಯ ಬಗ್ಗೆ ಜಾತ್ಯತೀತವಾಗಿ ಮತ್ತು ಧರ್ಮಾತೀತವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮಲ್ಪೆಯಲ್ಲಿ ಅಬ್ಬರಿಸಿದ ಸೌಜನ್ಯ ಹೋರಾಟ: ಆಪಪ್ರಚಾರ ತೀವ್ರವಾದಂತೆ ತಿಮರೋಡಿ ಬೆಂಬಲಕ್ಕೆ ಧಾವಿಸಿದ ಜನ ಸಾಗರ !