ಬೆಳ್ತಂಗಡಿ : ಭಾಸ್ಕರ ನಾಯ್ಕ ಮೇಲೆ ಹಲ್ಲೆ : ಓರ್ವ ಆರೋಪಿ ಪೊಲೀಸರಿಗೆ ಶರಣಾಗತಿ

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತ ಭಾಸ್ಕರ್ ನಾಯ್ಕ ಸಪ್ಟೆಂಬರ್ 3 ರಂದು ಸಂಜೆ ಮಂಗಳೂರಿನಲ್ಲಿ ಯೂಟ್ಯೂಬ್ ಚಾನಲ್ ಗೆ ಸಂದರ್ಶನ ನೀಡಿ ವಾಪಸ್ ಹಿಂತಿರುಗುತ್ತಿದ್ದ ಸಂದರ್ಭ ಮಹೇಶ್ ಶೆಟ್ಟಿ ತಂಡ ಹಲ್ಲೆ ಮಾಡಿದ್ದರು ಎಂಬ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.

 

ಉಜಿರೆ ಭಾಸ್ಕರ್ ನಾಯ್ಕರವರ ಮೇಲೆ ತಿಮರೋಡಿ ಮಹೇಶ್ ಶೆಟ್ಟಿ ತಂಡದಿಂದ ಹಲ್ಲೆ ನಡೆದಿದ್ದು, ಇದರಲ್ಲಿ ಮೋಹನ್ ಶೆಟ್ಟಿ,ಮುಖೇಶ್ ಶೆಟ್ಟಿ,ಶೆಟ್ಟಿ,ನಿತೀನ್ ನೀತು, ಪ್ರಜ್ವಲ್ ಕೆವಿ ಗೌಡ, ಪ್ರಮೋದ್ ಶೆಟ್ಟಿ ಮತ್ತಿತರರು ಭಾಗಿಯಾಗಿ ಕಾರು ಅಡ್ಡ ಹಾಕಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನವಾಗದ ಹಿನ್ನೆಲೆ ಹಲ್ಲೆಗೊಳಾಗಾಗಿದ್ದ ಭಾಸ್ಕರ್ ನಾಯ್ಕ್ ಸಪ್ಟೆಂಬರ್ 11 ರಂದು ಹೈ ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಪ್ರಕರಣದ ಕುರಿತಂತೆ  ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಸೆಪ್ಟೆಂಬರ್ 15ರೊಳಗೆ ಈ ಬಗ್ಗೆ ತನಿಖಾ ವರದಿ ನೀಡುವಂತೆ ಹೈಕೋರ್ಟ್ ಆದೇಶ ಮಾಡಿತ್ತು. ಖ್ಯಾತ ಹೈಕೋರ್ಟ್ ವಕೀಲರಾದ ರಾಜ್ ಶೇಖರ್ ಹಲ್ಲೆಗೊಳಾಗದ ಭಾಸ್ಕರ್ ನಾಯ್ಕ ಪರವಾಗಿ ವಾದ ಮಂಡಿಸಿದ್ದರು. ಈ ಕುರಿತಂತೆ ಸೆ.12 ರಂದು ನ್ಯಾಯಾಧೀಶರು ಪೊಲೀಸ್ ಇಲಾಖೆಗೆ ಸೆಪ್ಟೆಂಬರ್ 15 ರಂದು ಪ್ರಕರಣದ ಕುರಿತ ವರದಿ ಸಲ್ಲಿಸಲು ಸೂಚನೆ ನೀಡಿದ ಹಿನ್ನೆಲೆ, ಪ್ರಕರಣದ ಆರೋಪಿಯೊಬ್ಬನನ್ನು ತಿಮರೋಡಿ ಮಹೇಶ್ ಶೆಟ್ಟಿ ಬಂಟ್ವಾಳ ಡಿವೈಎಸ್ಪಿಗೆ ಶರಣಾಗತಿ ಮಾಡಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಕೆಲ ಹಿಂದೆ ಉಜಿರೆಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಪೊಲೀಸರ ವಿರುದ್ಧ ಹಲ್ಲೆಗೊಳಗಾದ ಭಾಸ್ಕ‌ರ್ ನಾಯ್ಕ ಹೈಕೋರ್ಟ್ ಮೊರೆ ಹೋಗಿದ್ದರು. ಭಾಸ್ಕರ್ ನಾಯ್ಕ್ ಹೈಕೋರ್ಟ್ ಮೊರೆ ಹೋದ ಬಳಿಕ ಜಾಗೃತಗೊಂಡ ಖಾಕಿ ಪಡೆ ಆರೋಪಿಗಳ ಶರಣಾಗತಿ ಮಾಡಿಸಲು ಹರಸಾಹಸ ಪಟ್ಟಿದ್ದಾರೆ. ಇದರ ನಡುವೆ, ಈ ಪ್ರಕರಣದ ಐದನೇ ಆರೋಪಿಯಾಗಿರುವ ನಿತೀನ್ ಪೂಜಾರಿ ಯಾನೆ ನೀತು ತನ್ನ ಪತ್ನಿ ಮನೆ ಸಕಲೇಶಪುರದಲ್ಲಿ ತಲೆ ಮರೆಸಿಕೊಂಡಿದ್ದ. ಹೈಕೋರ್ಟ್‌ ವರದಿ ಬೆನ್ನಲ್ಲೇ ತಿಮರೋಡಿ ತಂಡ ನಿತಿನ್ ನನ್ನು ಬಂಟ್ವಾಳಕ್ಕೆ ಡಿವೈಎಸ್ಪಿ ಠಾಣೆಗೆ ಶರಣಾಗಲು ಸೂಚಿಸಿದ್ದ ಹಿನ್ನೆಲೆ ಸೆಪ್ಟೆಂಬರ್ 14 ರಂದು ರಾತ್ರಿ ಶರಣಾಗತಿ ಮಾಡಲಾಗಿದೆ. ಇಂದು ಹೈಕೋರ್ಟ್‌ ಗೆ ಒಬ್ಬನನ್ನು ಬಂಧಿಸಿರುವ ಕುರಿತಂತೆ ಪೊಲೀಸ್ ಇಲಾಖೆ ವರದಿ ನೀಡಿದೆ ಎನ್ನಲಾಗಿದೆ.

Leave A Reply

Your email address will not be published.