ಬೆಳ್ತಂಗಡಿ: ಉಜಿರೆ ಭಾಸ್ಕರ್‌ ನಾಯ್ಕ್‌ ಮೇಲೆ ಹಲ್ಲೆ ಪ್ರಕರಣ-ಶರಣಾಗತಿ ಆರೋಪಿಗೆ ಜಾಮೀನು ಮಂಜೂರು!!

ಬೆಳ್ತಂಗಡಿ: ಉಜಿರೆ ಭಾಸ್ಕರ್‌ ನಾಯ್ಕ್‌ ಮೇಲೆ ತಿಮರೋಡಿ ಮಹೇಶ್‌ ಶೆಟ್ಟಿ ತಂಡದವರು ಹಲ್ಲೆ ಮಾಡಿದರೆಂಬ, ಅಟ್ರಾಸಿಟಿ ಹಲ್ಲೆ ಪ್ರಕರಣಕ್ಕೆ ಕುರಿತಂತೆ ಐದನೇ ಆರೋಪಿ ನಿತಿನ್‌ @ ನೀತುಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಿದೆ.

 

ಸಕಲೇಶಪುರ ಪತ್ನಿ ಮನೆಯಿಂದ ನಿತಿನ್‌@ ನೀತು ಅವರನ್ನು ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಸೆ.14 ರಂದು ಶರಣಾಗತಿ ಆಗಿದ್ದು, ಸೆ.15 ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸಂಜೆ ವೇಳೆಗೆ ಆರೋಪಿ ನಿತಿನ್‌ ಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದೆ.

Leave A Reply

Your email address will not be published.