Nitin Gadkari: ಕಾರಲ್ಲಿ 6 ಏರ್ ಬ್ಯಾಗ್ ಕಡ್ಡಾಯವಲ್ಲ, ಇಷ್ಟಿದ್ದರೆ ಸಾಕು !! ವರಸೆ ಬದಲಿಸಿದ ಕೇಂದ್ರ ಸಚಿವ ಗಡ್ಕರಿ
National news Government will not make six airbag mandatory for cars says union minister Nitin Gadkari
Nitin Gadkari: ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿರುವ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿದ್ದರೆ, ಅದರಲ್ಲಿ ಕುಳಿತಿರುವವರ ಜೀವಕ್ಕೆ ಅಪಾಯವಿದೆ. ಅಪಘಾತದ ಸಂದರ್ಭದಲ್ಲಿ, ಪ್ರಯಾಣಿಕರ ಜೀವ ಉಳಿಸುವಲ್ಲಿ ಏರ್ ಬ್ಯಾಗ್ ಪ್ರಮುಖ ಪಾತ್ರ ವಹಿಸುತ್ತದೆ.
ಆದ್ದರಿಂದ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಅಕ್ಟೋಬರ್ 2023ರಿಂದ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ ಎಂದು ಸರಿಯಾಗಿ ಒಂದು ವರ್ಷದ ಹಿಂದೆ ಹೇಳಿದ್ದ ನಿತಿನ್ ಗಡ್ಕರಿ (Nitin Gadkari) ಈಗ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.
ನಿತಿನ್ ಗಡ್ಕರಿ ಇದೀಗ ಮಾತು ಬದಲಾಯಿಸಿದ್ದು , “ಈಗಾಗಲೇ ಬಹುತೇಕ ಕಾರು ತಯಾರಕ ಸಂಸ್ಥೆಗಳು ತಮ್ಮ ಕಾರುಗಳಲ್ಲಿ 6 ಏರ್ ಬ್ಯಾಗುಗಳನ್ನು ನೀಡುತ್ತಿವೆ. ಹೀಗಾಗಿ ‘ಏರ್ ಬ್ಯಾಗ್ ಕಡ್ಡಾಯ’ ಮಾಡುವ ಅಗತ್ಯ ಇಲ್ಲ. ಕಾರು ಗ್ರಾಹಕರು ಕೂಡ ಸುರಕ್ಷತೆ ವಿಷಯದಲ್ಲಿ ಈಗ ಜಾಗರೂಕರಾಗಿದ್ದಾರೆ. ಅವರು 6 ಏರ್ ಬ್ಯಾಗುಗಳಿರುವ ಕಾರನ್ನೇ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ಕಾರು ತಯಾರಿಸುವ ಸಂಸ್ಥೆಗಳು ಮತ್ತು ಮತ್ತು ಗ್ರಾಹಕರು ಏರ್ ಬ್ಯಾಗ್ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
“6 ಏರ್ ಬ್ಯಾಗುಗಳನ್ನು ಒದಗಿಸುವ ಕಾರುಗಳಿಗೆ ಹೊಸ ನಿಯಮಗಳ ಅನುಸಾರ ಅತ್ಯಧಿಕ ಸ್ಟಾರ್ ರೇಟಿಂಗ್ ನೀಡಲಾಗುವುದು. 6 ಏರ್ ಬ್ಯಾಗ್ ಇಲ್ಲದಿದ್ದರೆ ಅಂಥ ಕಾರುಗಳ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ,” ಎಂದು ಇದೇ ಸಂದರ್ಭದಲ್ಲಿ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಮೊದಲು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಅಕ್ಟೋಬರ್ 2023ರಿಂದ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ ಎಂದು ಸರಿಯಾಗಿ ಒಂದು ವರ್ಷದ ಹಿಂದೆ ಹೇಳಿದ ಮಾತನ್ನು ಇದೀಗ ನಿತಿನ್ ಗಡ್ಕರಿ ಬದಲಿಸಿದ್ದು, ಕಾರುಗಳಿಗೆ ಏರ್‌ಬ್ಯಾಗ್ ಕಡ್ಡಾಯಗೊಳಿಸುವ ಅಗತ್ಯ ಇಲ್ಲ ಎಂದಿದ್ದಾರೆ.