Chaitra kundapura: ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕಟ್ಟಿಂಗ್ ಶಾಪ್ ಮಾಲಿಕ !!
Chitra kundapura cheating case explosive information from the salon owner
Chaitra kundapura cheating case: ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಸುಮಾರು 7 ಕೋಟಿ ರೂ. ವಂಚಿಸಿರುವ ಆರೋಪದಲ್ಲಿ ಈಗ ಚೈತ್ರಾ ಕುಂದಾಪುರ(Chaitra kundapura cheating case) ಹಾಗೂ ಆಕೆಯ ಕತರ್ನಾಕ್ ಗ್ಯಾಂಗ್ ಬೆಂಗಳೂರಿನ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿರುವ ಕಥೆ ಸಿನಿಮಾಗಿಂತಲೂ ರೋಚಕವಾಗಿದ್ದು, ಚೈತ್ರಾ ಕುಂದಾಪುರ ಸ್ವತಃ ತಾವೇ ಮೂವರು ಕೇಂದ್ರ ಬಿಜೆಪಿ ನಾಯಕರನ್ನು ಸೃಷ್ಟಿಸಿ ಉದ್ಯಮಿಯನ್ನು ನಂಬಿಸಿರುವುದು ಬಟಾ ಬಯಲಾಗಿದೆ. ಇನ್ನೂ ಈ ನಡುವೆ ಈ ಪಾತಕಿ ಚೈತ್ರಾ ಕುಂದಾಪುರಳ ಕುರಿತು ಹೊಸ ಹೊಸ ಸ್ಪೋಟಕ ವಿಚಾರಗಳು ಹೊರಬರುತ್ತಿದ್ದು, ಇದೀಗ ಮತ್ತೊಂದು ವಿಚಾರವನ್ನು ಕಟಿಂಗ್ ಶಾಪ್ ಮಾಲೀಕ ತೆರೆದಿಟ್ಟಿದ್ದಾನೆ.
ಹೌದು, ಚೈತ್ರಾ ಕುಂದಾಪುರ ತನಗೆ ಬಿಜೆಪಿಯ ಕೇಂದ್ರ ನಾಯಕರು ಹಾಗೂ ಆರ್ಎಸ್ಎಸ್ ವರಿಷ್ಠರು ಪರಿಚಯ ಎಂದು ಹಂತ ಹಂತವಾಗಿ ಏಳು ಕೋಟಿ ರೂಪಾಯಿಯನ್ನು ಉದ್ಯಮಿಯಿಂದ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವ್ಯವಸ್ಥಿತ ಪ್ಲಾನ್ ಮಾಡಿದ್ದ ಚೈತ್ರಾ ಕುಂದಾಪುರ ನಕಲಿ ಕೇಂದ್ರದ ನಾಯಕರನ್ನೇ ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ. ಸಲೂನ್ ಕೆಲಸಗಾರರು, ಕಬಾಬ್ ಮಾರುವವರನ್ನೇ ಬಿಜೆಪಿಯ ಕೇಂದ್ರದ ನಾಯಕರು ಎಂದು ಉದ್ಯಮಿಗೆ ನಂಬಿಸಿದ್ದರು ಎಂದು ಹೇಳಲಾಗಿದೆ.
ಹೇರ್ ಸೆಲೂನ್ನಲ್ಲಿ ರೆಡಿಯಾದ ವಿಶ್ವನಾಥ್ ಜೀ ಪಾತ್ರ: ವಂಚನೆ ಪ್ರಕರಣದಲ್ಲಿ ಪಟ್ಟಣದ ದೊಡ್ಡಪೇಟೆಯೊಂದರಲ್ಲಿನ ಹೇರ್ ಸೆಲೂನ್ನಲ್ಲಿ ಆರ್ಎಸ್ಎಸ್ ಪ್ರಚಾರಕ್ ವಿಶ್ವನಾಥ್ ಜೀ ತರಾ ವ್ಯಕ್ತಿಯ ಪಾತ್ರವನ್ನು ಸೃಷ್ಟಿಸಲು ವ್ಯಕ್ತಿಯನ್ನು ಕರೆ ತಂದ ಹಿನ್ನಲೆಯಲ್ಲಿ ಶಾಪ್ ಅಂಗಡಿಯನ್ನು ಕ್ಲೋಸ್ ಮಾಡುವ ಸಂದರ್ಭದಲ್ಲಿ ಧನರಾಜ್ ಕರೆದುಕೊಂಡ ಬಂದಿದ್ದರಿಂದ ಪ್ರಚಾರಕರ ಪೋಟೊ ತೋರಿಸಿ ಈ ರೀತಿ ರೆಡಿ ಮಾಡುವಂತೆ ಒತ್ತಾಯಿಸಿದ ಬಳಿಕ ಹೇರ್ಕಟ್ ಮಾಡಿ, ಹೇರ್ ಡ್ರೈ ಮಾಡಿ ವಿಶ್ವನಾಥ್ ಜೀ ಪಾತ್ರಕ್ಕೆ ಜೀವ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತಾಡಿದ ಸೆಲೋನ್ ಸಾಪ್ ನ ಮಾಲೀಕ ರಾಮು ಒಂದು ದಿನ 9ಗಂಟೆ ಗೆ ಕಡೂರಿನ ಧನರಾಜ್ ನಮ್ಮ ಅಂಗಡಿಗೆ ಕಸ್ಟಮರ್ , ಅವರ ಜೊತೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಓರ್ವ ವ್ಯಕ್ತಿ ಕರೆತಂದು , ಒಂದು ಪೋಟೋ ತೋರಿಸಿ ಇದೇ ರೀತಿ ಕಟ್ಟಿಂಗ್ ಮತ್ತು ಹೇರ್ ಡ್ರೈ ಆಗಬೇಕೆಂದು ಹೇಳಿದರು. ಅದೇ ರೀತಿ ಮಾಡಿ ಅವರನ್ನು ರೆಡಿ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಯಾರು ಈ ಗಗನ್ ಕಡೂರು?
ಗಗನ್ಕಡೂರ್ ಯಾರು?: ಕಡೂರಿನ ಮೂಲತಃ ಎಬಿವಿಪಿ ಸೇರಿದಂತೆ ಹಿಂದೂಪರ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಗನ್ ಕಡೂರು ಪಟ್ಟಣದಲ್ಲಿ ಬಿಲ್ದಿಂಗ್ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಹಿನ್ನಲೆಯಲ್ಲಿ ಚೈತ್ರಾಕುಂದಾಪುರ ಪರಿಚಯವಾಗಿದ್ದು, ಬಳಿಕ ಹಿಂದೂಪರ ಸಂಘಟನೆಯ ಆಯೋಜಕರು ಕಡೂರು ಭಾಗದಲ್ಲಿ ನಡೆಸುತ್ತಿದ್ದ ಕೆಲ ಕಾರ್ಯಕ್ರಮಗಳಿಗೆ ಹಾಗಾಗ್ಗೆ ದಿಕ್ಸೂಚಿ ಭಾಷಣ ಮಾಡಿಸಲು ಚೈತ್ರಾಳನ್ನು ದಿಕ್ಸೂಚಿ ಭಾಷಣ ಮಾಡಿಸಲು ಆಹ್ವಾನಿಸುತ್ತಿದ್ದನು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: BJP-JDS: ಮೈತ್ರಿ ಕುರಿತು ಯೂಟರ್ನ್ ಹೊಡೆದು ಶಾಕಿಂಗ್ ಹೇಳಿಕೆ ನೀಡಿ ಯಡಿಯೂರಪ್ಪ !!