ಸೂರ್ಯ, ಚಂದ್ರನ ಬಳಿಕ ಇಸ್ರೋ ವಿಜ್ಞಾನಿಗಳಿಂದ ಮತ್ತೊಂದು ಸಾಹಸ- ಸಮುದ್ರ ಬೇಟೆಗೆ ರೆಡಿಯಾಯ್ತು ಭಾರತ!! ಏನಿದರ ಸ್ಪೆಷಾಲಿಟಿ

Samudryaan Mission: ಆಗಸ್ಟ್ 23ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರಯಾನ-3 (Chandrayaana 3) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈಗಾಗಲೇ ಚಂದ್ರನ ಮೇಲೆ ಪ್ರಜ್ಞಾನ್​ ಪರಾಕ್ರಮ ಕಂಡು ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ. ಇನ್ನು ಇಸ್ರೋ ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಸೂರ್ಯನ ರಹಸ್ಯಗಳನ್ನು ತಿಳಿಯಲು ಆದಿತ್ಯ L1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಇದೀಗ ವಿಜ್ಞಾನಿಗಳು ಹೊಸ ಸಾಧನೆಗೆ ಸಿದ್ಧವಾಗಿದೆ.

ಹೌದು, ಸಮುದ್ರಯಾನ ಮಿಷನ್ (Samudryaan Mission) ಕಳುಹಿಸಲು ಸಿದ್ಧತೆಗಳು ಆರಂಭವಾಗಿದೆ. ಈ ಮೂಲಕ ಸಮುದ್ರದ ಆಳದಲ್ಲಿ ಅಡಗಿರುವ ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಇದಕ್ಕಾಗಿ ಬಂಗಾಳಕೊಲ್ಲಿಯಲ್ಲಿ ಮತ್ಸ್ಯ 6000 ಜಲಾಂತರ್ಗಾಮಿ ನೌಕೆಯನ್ನು ಉಡಾವಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

IAEA ಪ್ರಕಾರ, 2030 ರ ವೇಳೆಗೆ ಲಿಥಿಯಂನ ಜಾಗತಿಕ ಅಗತ್ಯವು ಐದು ಪಟ್ಟು ಹೆಚ್ಚಾಗುತ್ತದೆ. ಕೋಬಾಲ್ಟ್ ನ ಅಗತ್ಯತೆ ಮೂರು ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ ಈ ಮಿಶನ್ ಬಹಳ ಪ್ರಮುಖವಾಗಿದೆ.

ಈ ಜಲಾಂತರ್ಗಾಮಿ ನೌಕೆ ಮೂಲಕ ಮೂವರು ಸಮುದ್ರದಲ್ಲಿ 6 ಸಾವಿರ ಮೀಟರ್ ಆಳಕ್ಕೆ ಹೋಗಲಿದ್ದಾರೆ. ಇದು 500 ಮೀಟರ್ ಆಳದಿಂದ ಆರಂಭವಾಗಲಿದ್ದು, 2026ರ ವೇಳೆಗೆ ಮತ್ಸ್ಯ 6000 ಜಲಾಂತರ್ಗಾಮಿ ನೌಕೆಯು 6 ಸಾವಿರ ಮೀಟರ್ ಆಳ ತಲುಪಲಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯ ವಿಜ್ಞಾನಿಗಳು 2 ವರ್ಷಗಳ ಕಠಿಣ ಪರಿಶ್ರಮದ ನಂತರ ಜಲಾಂತರ್ಗಾಮಿ ನಿರ್ಮಿಸಿದ್ದಾರೆ.

ಈ ಜಲಾಂತರ್ಗಾಮಿ ಸಹಾಯದಿಂದ, ಅನಿಲ ಹೈಡ್ರೇಟ್ ಗಳು, ನಿಕಲ್, ಮ್ಯಾಂಗನೀಸ್, ಕೋಬಾಲ್ಟ್, ಹೈಡ್ರೋಥರ್ಮಲ್ ಸಲ್ಫೈಡ್ ಮತ್ತು ಕಿಮೋ ಸಿಂಥೆಟಿಕ್ ಜೈವಿಕ ಮತ್ತು ಇತರ ಸಸ್ಯಗಳನ್ನು ಸಮುದ್ರದಲ್ಲಿ ಕಂಡುಹಿಡಿಯಲಾಗುತ್ತದೆ.

ಸಮುದ್ರಯಾನ ಮಿಷನ್‌ನ ವಿಶೇಷತೆ ಬಗ್ಗೆ ಹೇಳುವುದಾದರೆ, 2.1 ಮೀಟರ್ ವ್ಯಾಸದ ಜಲಾಂತರ್ಗಾಮಿ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಮುಖ್ಯವಾಗಿ ಮತ್ಸ್ಯ 6000 ತೂಕ ಸುಮಾರು 25 ಟನ್ ಇದ್ದು, 9 ಮೀಟರ್ ಉದ್ದ ಮತ್ತು 4 ಮೀಟರ್ ಅಗಲ
4. 80 ಎಂಎಂ ಟೈಟಾನಿಯಂ ಬಳಸಲಾಗುತ್ತದೆ. ಇನ್ನು ಸಮುದ್ರದೊಳಗೆ 600 ಪಟ್ಟು ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ನೌಕೆ ಹೊಂದಿದೆ.

ಈಗಾಗಲೇ ಭಾರತ ಸರ್ಕಾರವು 2021 ರಲ್ಲಿ ಡೀಪ್ ಓಶನ್ ಗೆ ಅನುಮೋದನೆ ನೀಡಿತ್ತು. 2024ರಲ್ಲಿ ಮೊದಲ ಹಂತದ ಆರಂಭ ಸಾಧ್ಯತೆ. ಇಲ್ಲಿಯವರೆಗೆ ಅಮೆರಿಕ, ಜಪಾನ್, ಫ್ರಾನ್ಸ್, ರಷ್ಯಾ ಸಾಗರದಲ್ಲಿ ಮನುಷ್ಯರನ್ನು ಅಷ್ಟು ಆಳಕ್ಕೆ ಕೊಂಡೊಯ್ಯಲು ಸಮರ್ಥವಾಗಿವೆ ಎನ್ನಲಾಗುತ್ತಿದೆ.

Leave A Reply

Your email address will not be published.