Gruha Lakshmi Yojana: ಯಜಮಾನಿಯರೇ, ಇನ್ನೂ ಗೃಹಲಕ್ಷ್ಮೀ ದುಡ್ಡು ಬಂದಿಲ್ವಾ? ಹಾಗಿದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ನೋಡಿ ಸಖತ್ ಗುಡ್ ನ್ಯೂಸ್

Karnataka news Congress guarantee Gruha Lakshmi scheme update gruha Lakshmi Scheme money update

Gruha lakshmi Yojana: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಮನೆಯ ಯಜಮಾನಿಯರು ಎದುರು ನೋಡುತ್ತಿದ್ದಾರೆ. ಇದೀಗ,ಯೋಜನೆಯ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್ಡೇಟ್ ನೀಡಿದ್ದಾರೆ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಹಣ ಜಮೆಯಾಗದ ವಿಚಾರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್( Lakshmi Hebablkar)ಎಲ್ಲಾ ಫಲಾನುಭವಿಗಳಿಗೂ ಹಣ ಜಮೆಯಾಗಲಿದೆ ಎಂಬ ಭರವಸೆ ನೀಡಿದ್ದಾರೆ.ಕೆಲವರ ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆಯಾಗಿರುವ ಹಿನ್ನೆಲೆ ಹಣ ಜಮಾ ಪ್ರಕ್ರಿಯೆ ಆಗಿತ್ತಿಲ್ಲ. 8 ಲಕ್ಷ ಜನರ ಅಕೌಂಟ್ ನಂಬರ್ ನಲ್ಲಿ ಸಮಸ್ಯೆ ಎದುರಾಗಿದ್ದು, ಹೀಗಾಗಿ, ಹಣ ಜಮಾ ಪ್ರಕ್ರಿಯೆ ಆಗಿಲ್ಲ. ಹಣ ಜಮಾ ಆಗದೇ ಇರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಆಗುತ್ತಿದೆ. ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆದುಕೊಂಡು ಫಲಾನುಭವಿಗಳಿಗೆ ಹಣ ತಲುಪಿಸುವ ಕಾರ್ಯ ಮಾಡಲಿದ್ದು, ಈ ಸಂಬಂಧ ಸಹಾಯವಾಣಿ ಆರಂಭ ಮಾಡಲು ಕೂಡ ಚಿಂತನೆ ನಡೆಯುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್ಡೇಟ್ ನೀಡಿದ್ದಾರೆ.

ಕರ್ನಾಟಕ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
ಗೃಹ ಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಆಗ, ವೆಬ್ ಸೈಟ್ ನ ಮುಖಪುಟ ಪರದೆಯ ಮೇಲೆ ಕಾಣಿಸುತ್ತದೆ. ಕರ್ನಾಟಕ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಆ ಬಳಿಕ ಅರ್ಜಿ ನಮೂನೆಯ ಪ್ರಿಂಟ್‌ಔಟ್ ತೆಗೆಯಿರಿ.ನಂತರ, ವೈಯಕ್ತಿಕ ವಿವರಗಳು, ಬ್ಯಾಂಕ್ ವಿವರಗಳು ಮುಂತಾದ ಎಲ್ಲಾ ಅಗತ್ಯ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಗೃಹ ಲಕ್ಷ್ಮಿ ಯೋಜನೆಗೆ ಅಗತ್ಯ ದಾಖಲೆಗಳಾದ ವಾಸಸ್ಥಳ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, 2 ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್ ಮುಂತಾದ ಗುರುತಿನ ಪುರಾವೆಗಳು ಇಲ್ಲವೇ ಪಡಿತರ ಚೀಟಿ, ನೀರಿನ ಬಿಲ್, ವಿದ್ಯುತ್ ಬಿಲ್ ಮುಂತಾದ ವಿಳಾಸ ಪುರಾವೆ, ಬ್ಯಾಂಕ್ ಪಾಸ್ ಬುಕ್ ನಕಲು, ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಬೇಕಾಗುತ್ತವೆ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಫಾರ್ಮ್ ಗೆ ಲಗತ್ತಿಸಬೇಕು.

ಅರ್ಜಿ ನಮೂನೆಯನ್ನು ಕರ್ನಾಟಕ ಗ್ರಾಮ ಪಂಚಾಯಿತಿ ಕೇಂದ್ರ ಅಥವಾ ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಮತ್ತು ಪೂರಕ ದಸ್ತಾವೇಜನ್ನು ಅಧಿಕಾರಿಗಳು ಪರಿಶೀಲನಾ ಕಾರ್ಯ ಮಾಡುತ್ತಾರೆ. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಗದು ಪ್ರೋತ್ಸಾಹಕ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ.

ಇದನ್ನೂ ಓದಿ: Jio ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್- ಅಂಬಾನಿ ಜನ್ಮದಿನಕ್ಕೆ ಉಚಿತ ರೀಚಾರ್ಜ್ ಘೋಷಣೆ- ಈ ಲಿಂಕ್ ಕ್ಲಿಕ್ ಮಾಡಿ, ಫ್ರೀ ರಿಚಾರ್ಜ್ ಮಾಡಿರಿ : ಏನಿದರ ಸತ್ಯಾಸತ್ಯತೆ!

Leave A Reply

Your email address will not be published.