Price hike: ಬೆಲೆ ಏರಿಕೆಯಿಂದ ನಲುಗುತ್ತಿರೋ ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್ – ಇಂದಿನಿಂದ ಈ ಎಲ್ಲಾ ದಿನಸಿಗಳ ಬೆಲೆಯಲ್ಲಿ ಗಣನೀಯ ಏರಿಕೆ

Agriculture news Karnataka news rice daal price hike in Karnataka

Price Hike: ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೈರಾಣಾಗಿ ಹೋಗಿದ್ದು, ಈ ನಡುವೆ ಗಗನ ಕುಸುಮವಾಗಿದ್ದ ಟೊಮೇಟೊ ದರ ಇಳಿಕೆ ಕೊಂಚ ಮಟ್ಟಿಗೆ ರಿಲೀಫ್ ನೀಡಿದ್ದು, ಇದರ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ (Shocking News)ಹೊರ ಬಿದ್ದಿದ್ದು, ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ರಾಜ್ಯದಲ್ಲಿ ದಿನಸಿ ಪದಾರ್ಥಗಳ ಬೆಲೆ ಏರಿಕೆ(Price Hike)ಕಂಡಿದ್ದು, ಅಕ್ಕಿ, ಹೆಸರು, ಉದ್ದು ಒಳಗೊಂಡಂತೆ ಆಹಾರ ಧಾನ್ಯಗಳ ಬೆಲೆ ಏರಿಕೆ ಕಂಡಿದ್ದು, ಜನಸಾಮಾನ್ಯರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.ಮಳೆಯ ಕೊರತೆ ಉಂಟಾದ ಪರಿಣಾಮ ರೈತರು ಸಮಸ್ಯೆ ಎದುರಿಸುತ್ತಿದ್ದು, ಈ ಬಾರಿ ಉತ್ಪಾದನೆ ಕೂಡ ಕುಸಿತ ಕಾಣುವ ಸಂಭವ ಹೆಚ್ಚಿದೆ. ಇದರ ನಡುವೆ ಪರಿಸ್ಥಿತಿಯ ಲಾಭ ಗಿಟ್ಟಿಸಿ ಕೆಲವೆಡೆ ಕೃತಕ ಆಭಾವ ಸೃಷ್ಟಿಸುತ್ತಿರುವ ಗುಮಾನಿ ವ್ಯಕ್ತವಾಗಿದೆ.

ಆಹಾರ ಧಾನ್ಯಗಳ ಬೆಲೆ ಏರಿಕೆ ಕಂಡಿದ್ದು, ತೊಗರಿ ಬೇಳೆ ದರ ಕೆಜಿಗೆ 140 ರಿಂದ 180 ರೂ. ಹೆಚ್ಚಳವಾಗಿದೆ. ಹೆಸರುಬೇಳೆ 110 ರಿಂದ 120 ರೂ. ಏರಿಕೆ ಕಂಡಿದೆ. ಉದ್ದಿನ ಬೇಳೆ 115 ರೂಪಾಯಿ ಆಗಿದ್ದ ದರ 130 ರೂ.ಗೆ ಏರಿಕೆ ಕಂಡಿದೆ. ಕಡಲೆ 125 ರಿಂದ 132 ರೂ. ಆಗಿದ್ದು, ವಿವಿಧ ಅಕ್ಕಿದರ ಈಗ ಇರುವ ದರಕ್ಕಿಂತ 10 ರಿಂದ 20 ರೂ. ವರೆಗೆ ಏರಿಕೆಯಾಗಿದೆ ಬಹುತೇಕ ಎಲ್ಲಾ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ: B S Yediyurappa: BJP-JDS ಮೈತ್ರಿ ಬಗ್ಗೆ ಏಕಾಏಕಿ ಯೂಟರ್ನ್ ಹೊಡೆದ ಯಡಿಯೂರಪ್ಪ !! ಮೈತ್ರಿ ಅಧಿಕೃತ ಘೋಷಣೆ ಮಾಡಿದ BSY ಈಗ ಹೀಗೆ ಹೇಳಿದ್ಯಾಕೆ ??

Leave A Reply

Your email address will not be published.