Viral Video: ರೋಡಲ್ಲಿ ಪುಕ್ಸಟೆ ಫುಲ್ ಬಾಟ್ಲು ‘ಕ್ವಾಟ್ರು’ ಸಿಕ್ಕಿದ್ರೆ ಏನ್ ಏನ್ ಮಾಡಿದ್ರು ಗೊತ್ತಾ ನಮ್ ಜನ?! ಇಲ್ಲಿದೆ ನೋಡಿ ಒಳ್ಳೆ ಮಜವಾದ ವಿಡಿಯೋ !

Viral Video: ಮದ್ಯ (liquor) ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋ ಇಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ.

ಇದೀಗ ಕುಡುಕರ ಈ ಎಣ್ಣೆ ಮೇಲಿನ ವ್ಯಾಮೋಹವನ್ನೇ ಇರಿಸಿಕೊಂಡು ಯುವಕರ ತಂಡವೊಂದು ಸಾರ್ವಜನಿಕ ಸ್ಥಳದಲ್ಲಿ ಪ್ರಯೋಗಕ್ಕೆ ಮುಂದಾಗಿದೆ. ರೋಡಲ್ಲಿ ಪುಕ್ಸಟೆ ಫುಲ್ ಬಾಟ್ಲು ‘ಕ್ವಾಟ್ರು’ ಸಿಕ್ಕಿದ್ರೆ ಏನ್ ಏನ್ ಮಾಡಿದ್ರು ಗೊತ್ತಾ ನಮ್ ಜನ?! ಇಲ್ಲಿದೆ ನೋಡಿ ಒಳ್ಳೆ ಮಜವಾದ ವಿಡಿಯೋ (Viral Video) ! ನೀವಂತೂ ನಕ್ಕೂ ನಕ್ಕೂ ಸುಸ್ತಾಗೋದು ಪಕ್ಕಾ!!!.

ವೀಡಿಯೋದಲ್ಲಿ ಕಾಣಿಸುವಂತೆ ಫುಲ್ ಬಾಟಲ್ ಮದ್ಯಕ್ಕೆ ಬಳ್ಳಿಯೊಂದನ್ನು ಕಟ್ಟಲಾಗಿದೆ. ದಾರಿಯಲ್ಲಿ ನಡೆದು ಹೋಗುತ್ತಿರುವವರೆಲ್ಲಾ ಈ ರಸ್ತೆಯಲ್ಲಿ ಬಿದ್ದಿದ್ದ ಮದ್ಯದ ಬಾಟಲ್‌ನ್ನು ಮೇಲೆತ್ತಿಕೊಂಡು ಹೋಗಲು ಪ್ರಯತ್ನ ಮಾಡುತ್ತಾರೆ. ಫ್ರಿಯಾಗಿ ಸಿಕ್ಕ ಎಣ್ಣೆ ಬಾಟಲ್ ನೋಡಿದ ಯಾರೊಬ್ಬರೂ ಕೂಡ ಅದನ್ನು ತೆಗೆದುಕೊಳ್ಳದೇ ಮುಂದೆ ಹೋಗಲು ಸಿದ್ದರಿಲ್ಲ‌‌. ಒಬ್ಬರಾದ ಮೇಲೊಬ್ಬರಂತೆ ಹೆಲ್ಮೆಟ್ (Helmet) ಧರಿಸಿ ಬಂದು ಈ ಮದ್ಯದ ಬಾಟಲ್‌ನ್ನು ಹೊತ್ತೊಯ್ಯಲು ನೋಡಿ ಬೇಸ್ತು ಬಿದ್ದಿದ್ದಾರೆ.

ಹೀಗೆ ಬಂದವರು ಮದ್ಯದ ಬಾಟಲ್‌ಗೆ ಕೈ ಹಾಕುತ್ತಿದ್ದಂತೆ ದೂರದಲ್ಲೆಲ್ಲೋ ಈ ಬಾಟಲ್‌ಗೆ ಕಟ್ಟಿದ್ದ ಹಗ್ಗವನ್ನು ಹಿಡಿದು ನಿಂತವರು ಒಮ್ಮೆಲೆ ಅದನ್ನು ಬಗ್ಗಿದವರ ಕೈಗೆ ಸಿಗದಂತೆ ಎಳೆದು ಬಿಡುತ್ತಾರೆ. ಕೈಗೆ ಸಿಗದೇ ಹೋದ ಮದ್ಯ ಹಾಗೂ ತಾವು ಫೂಲ್ ಆಗಿದ್ದು ಕಂಡು ಜನರು ಪೆಚ್ಚು ಮೋರೆ ಹಾಕಿ ಹಿಂತಿರುಗುತ್ತಾರೆ.

ಸಾವಿರಾರು ಜನ ಈ ವೀಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಮದ್ಯದ ಬಾಟಲ್‌ಗೆ ಕೈ ಹಾಕಿದವರೆಲ್ಲರೂ ಅದು ಕೈ ಜಾರುತ್ತಿದ್ದಂತೆ ನಿರಾಸೆಯಿಂದ ನೋಡುತ್ತಿರುವ ದೃಶ್ಯಗಳು ನೋಡುಗರ ಮೊಗದಲ್ಲಿ ನಗೆಯುಕ್ಕಿಸುತ್ತಿದೆ. ವೀಡಿಯೋ ನೋಡಿದವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

https://www.instagram.com/reel/CwhHgJBsIKX/?igshid=MzRlODBiNWFlZA==

Leave A Reply

Your email address will not be published.