Bharta Mantap: ಭಾರೀ ಮಳೆಗೆ ವಿದೇಶಿ ಗಣ್ಯರಿದ್ದ G20 ‘ಭಾರತ್ ಮಂಟಪ’ ವೇದಿಕೆ ಜಲಾವೃತ – ವೈರಲ್ ಆಯ್ತು ವಿಡಿಯೋ !!
[3:34 PM, 9/10/2023] Rahul: Bharat mantap: ರಾಷ್ಟ್ರ ರಾಜಧಾನಿಯಲ್ಲಿ G20ಶೃಂಗಸಭೆಯ ಸಂಭ್ರಮ ಒಂದೆಡೆಯಾದರೆ ಭಾರೀ ಮಳೆಯ ಅವಾಂತರವೂ ಶುರುವಾಗಿದೆ. ಹೀಗಾಗಿ ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪವು(Bharat mantap) ಮಳೆಯಿಂದ ಜಲಾವೃತ್ತವಾಗಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯ ನಂತರ ಜಿ 20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದ ಜಲಾವೃತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಕಾಂಗ್ರೆಸ್ ಈ ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ಮೋದಿ ಸರ್ಕಾರವನ್ನು ಟೀಕಿಸಿ ಕಾಲೆಳೆದಿದೆ.
ಅಂದಹಾಗೆ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜನ ಖರ್ಗೆ ಅವರಿಗೆ ಶೃಂಗಸಭೆ ಔತಣಕೂಟಕ್ಕೆ ಆಹ್ವಾನ ನೀಡಿದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ಕಾಂಗ್ರೆಸ್ ಗೆ ಇದೊಂದು ಟೀಕಾಸ್ತ್ರವಾಗಿದೆ. ಮಳೆಯ ಅವಾಂತರದಿಂದ ಭಾರತ ಮಂಟಪ ಜಲಾವೃತ್ತದ ದೃಶ್ಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸುತ್ತಿದೆ.
ಇನ್ನು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ‘ಪ್ರಗತಿಯ ಪೊಳ್ಳು ಭರವಸೆಗಳು ಸ್ಪಷ್ಟವಾಗಿವೆ. ರೂ. 2,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವೇದಿಕೆ ಕೇವಲ ಒಂದು ದಿನದ ಮಳೆಗೆ ಜಲಾವೃತ್ತವಾಗಿದೆ ಎಂದು ಟೀಕಿಸಿದ್ದಾರೆ. ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿವಿ, ಕೇಂದ್ರದ ಭರವಸೆಗಳನ್ನು ಉಲ್ಲೇಖಿಸಿ ಅಭಿವೃದ್ಧಿ ಈಜುತ್ತಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
करोड़ों रुपये की लागत से G20 के सदस्यों की मेहमाननवाजी के लिए बनाए गए ‘भारत मंडपम’ की तस्वीरें।
विकास तैर रहा है…https://t.co/EcQBcM7o7E
— Srinivas BV (@srinivasiyc) September 10, 2023