Shocking News: ಹೆಂಡತಿಗೆ ‘ಗಂಡ’ ನಾಗಿದ್ದವ 3 ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ‘ಅಣ್ಣ’ನಾದ !! ಅರೇ.. ಏನಿದು ವಿಚಿತ್ರ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್

Shocking News: ಪ್ರೀತಿ ಎಂಬ ನವಿರಾದ ಭಾವಕ್ಕೆ ನಂಬಿಕೆ (Trust )ಅತ್ಯವಶ್ಯಕ. ನೈಜ ಪ್ರೀತಿ( Love)ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿ ಸ್ವಚ್ಚಂದ ಹಕ್ಕಿಯಂತೆ ಪ್ರೇಮಿಸಿ ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆಯುವುದು ಸಹಜ. ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಅದೇ ರೀತಿ ಪ್ರೀತಿ ಪ್ರೇಮ ಪ್ರಣಯ ಎಂದು ನಾಲ್ಕು ದಿನ ಅಲೆದಾಡಿ ಮತ್ತೆ ಯಾರನ್ನೋ ಪ್ರೀತಿಸುವ ನಾಟಕವಾಡಿ ನಾನೊಂದು ತೀರ ನೀನೊಂದು ತೀರ ಎಂದು ವರ್ತಿಸುವವರು ಕೂಡ ಇದ್ದಾರೆ. ಆದ್ರೆ, ಇಲ್ಲೊಂದು ವಿಚಿತ್ರ ಘಟನೆಯೊಂದು ವರದಿಯಾಗಿದೆ.

 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂರು ವರ್ಷದ ಬಳಿಕ ಗಂಡ ಅಣ್ಣ ಎಂದು ಗೊತ್ತಾದರೆ ಹೇಗಿರಬಹುದು. ಅಚ್ಚರಿ ಆಗೋದು ಗ್ಯಾರಂಟಿ!! ಅಷ್ಟೇ ಏಕೆ ಡೈವೋರ್ಸ್ ಕೊಟ್ಟರು ಅಚ್ಚರಿಯಿಲ್ಲ. ಹೆಂಡತಿಗೆ ‘ಗಂಡ’ ನಾಗಿದ್ದವ 3 ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ‘ಅಣ್ಣ’ನಾದ !! ಅರೇ.. ಏನಿದು ವಿಚಿತ್ರ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್! ಅಮೆರಿಕ, ಉಠ್ಹಾದ ಟೈಲೀ ಮತ್ತು ನಿಕ್ ವಾಟರ್ಸ್ ದಂಪತಿಗೆ ಶಾಕಿಂಗ್ ಸುದ್ದಿ ಮೂರು ವರ್ಷದ ನಂತರ ಗೊತ್ತಾಗಿದೆ.

ಟಿಕ್ ಟಾಕ್ ನಲ್ಲಿ (Tick Tock)ಆಗಾಗ ವಿಡಿಯೋ(Video )ಶೇರ್ ಮಾಡುವ ಈ ದಂಪತಿ ಅಸಲಿಗೆ ಸೋದರ ಸಂಬಂಧಿಗಳು ಎಂದು ತಡವಾಗಿ ಅರಿವಾಗಿದೆ.ಇವರಿಬ್ಬರ ಸಂಬಂಧದ ಬಗ್ಗೆ ತಿಳಿದು ದಂಪತಿಯ ಫಾಲೋವರ್ಸ್ ಕೂಡ ಶಾಕ್ ಆಗಿದ್ದಾರೆ. ಇಬ್ಬರ ನಡುವಿನ ನಿಜವಾದ ಸಂಬಂಧದ ಬಗ್ಗೆ ತಿಳಿದ ಬಳಿಕ ದಾಂಪತ್ಯ ಜೀವನವನ್ನು ಕೊನೆಗೊಳಿಸುತ್ತಾರೇನೋ ಎಂದುಕೊಂಡವರಿಗೆ ಅಚ್ಚರಿಯ ಸಂಗತಿಯನ್ನೂ ದಂಪತಿ ರಿವೀಲ್ ಮಾಡಿದ್ದಾರೆ.

ತಾವು ಅಸಲಿಗೆ ಸೋದರ ಸಂಬಂಧಿಗಳು ಎಂದು ತಿಳಿದ ಬಳಿಕ ಟಿಕ್ಟಾಕ್ನಲ್ಲಿ ಈ ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ.ಈ ದಂಪತಿ ತಾವು ಯಾವ ರೀತಿಯಲ್ಲಿ ಸೋದರ ಸಂಬಂಧಿಗಳಾಗಬೇಕು ಎಂಬ ಸೀಕ್ರೆಟ್ ಅನ್ನು ಬಗ್ಗೆ ಹೇಳಿಕೊಂಡಿಲ್ಲ. ಇನ್ನೊಂದು ವಿಡಿಯೋ ಪೋಸ್ಟ್ ಮಾಡಿರುವ ಟೈಲಿ ಹಾಗೂ ನಿಕ್ ವಾಟರ್ಸ್ ದಂಪತಿ ನಾವು ಸೋದರ ಸಂಬಂಧ ಹೊಂದಿದ್ದರೂ ಕೂಡ ನಮ್ಮ ದಾಂಪತ್ಯ ಜೀವನ ಮುಂದುವರಿಸುವ ತೀರ್ಮಾನ ಮಾಡಿದ್ದು, ಡೈವೋರ್ಸ್ ರೇತಿಯ ನಿರ್ಧಾರಕ್ಕೆ ನಾವು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

Leave A Reply

Your email address will not be published.