Karnataka government: ಬ್ಯಾಂಕ್ ನಲ್ಲಿ ವ್ಯವಹರಿಸೋ ಕನ್ನಡಿಗರಿಗೆಲ್ಲ ಬಂತು ಹೊಸ ರೂಲ್ಸ್- ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

karnataka news bank updates langauage spoken in bank new rule from government

Karnataka government: ಹೊರ ರಾಜ್ಯದ ಸಿಬ್ಬಂದಿಗಳಿಂದ ಕನ್ನಡಿಗರಿಗೆ ಈ ಬ್ಯಾಂಕ್(Bank) ಗಳಲ್ಲಿ ವ್ಯವಹರಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಕೂಡ ಗ್ರಾಮೀಣ ಭಾಗಗಳಲ್ಲಿ ಇದೊಂದು ದೊಡ್ಡ ತಲೆನೋವು. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೀಗ(State government)ಹೊಸ ರೂಲ್ಸ್ ಒಂದನ್ನು ಜಾರಿಗೊಳಿಸಿದೆ.

 

ಹೌದು, ಬ್ಯಾಂಕ್ ನಲ್ಲಿ ಭಾಷೆ ಬರದ ವಿಚಾರಕ್ಕೆ ತುಂಬಾ ಗಲಾಟೆಗಳು ನಡೆದದ್ದೂ ಉಂಟು. ಗ್ರಾಮೀಣಭಾಗದಲ್ಲಿ 90% ಜನಕ್ಕೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುವುದಿಲ್ಲ. ಹೀಗಾಗಿ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಇದರ ಪರಿಹಾರಕ್ಕಾಗಿ ಬ್ಯಾಂಕ್ ಸಿಬ್ಬಂದಿ ಇನ್ನು ಮುಂದೆ ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಈ ಸಂಬಂಧ ಇನ್ನೆರಡು ದಿನಗಳಲ್ಲಿ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಕಾರ್ಯದರ್ಶಿ ಸಂತೋಷ ಹಂಗಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂದಹಾಗೆ ಸ್ಥಳೀಯ ಭಾಷೆ ತಿಳಿದಿಲ್ಲದ ಬ್ಯಾಂಕ್ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಹಳ್ಳಿಯ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದು, ಬ್ಯಾಂಕ್‌ ಅಧಿಕಾರಿಗಳಿಗೆ ಕನ್ನಡ ಕಡ್ಡಾಯ ಮಾಡಬೇಕು ಎಂಬುದು ರಾಜ್ಯದ ಬಹು ಜನರ ಅಪೇಕ್ಷೆಯಾಗಿತ್ತು. ಈ ಬೇಡಿಕೆಗೆ ಮನ್ನಣೆ ನೀಡಲು ಹೊರಟಿರುವ ಸರ್ಕಾರ ಅಧಿಸೂಚನೆ ಹೊರಡಿಸಲು ಮುಂದಾಗಿದೆ.

ಏನಿದು ಹೊಸ ಮಸೂದೆ?
ನೂರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿರುವ ಬ್ಯಾಂಕ್‌ಗಳು ದೈನಂದಿನ ಕೆಲಸ ಕಾರ್ಯಗಳಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಕನ್ನಡ ಜ್ಞಾನವನ್ನು ಹೊಂದಿದ ಹಿರಿಯ ಉದ್ಯೋಗಿಗಳ ನೇತೃತ್ವದಲ್ಲಿ ‘ಕನ್ನಡ ಕೋಶ’ವನ್ನು ರಚಿಸಬೇಕು ಎಂದು ಮಸೂದೆ ಹೇಳಿದೆ. ಕನ್ನಡೇತರ ಉದ್ಯೋಗಿಗಳಿಗಾಗಿ ಬ್ಯಾಂಕ್‌ಗಳು ‘ಕನ್ನಡ ಕಲಿಕಾ ಘಟಕ’ (ಮೂಲ ಕನ್ನಡ ಬೋಧನಾ ಘಟಕ) ಸ್ಥಾಪಿಸಬೇಕು ಮತ್ತು ಸರ್ಕಾರವು ತಾನೇ ಅಗತ್ಯ ಬೋಧಕ ಸಿಬ್ಬಂದಿ ಮತ್ತು ಅಧ್ಯಯನ ಸಾಮಗ್ರಿಗಳನ್ನು ನೀಡುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.