ಗಾಢ ನಿದ್ದೆಯಲ್ಲಿದ್ದ ಕಂದಮ್ಮನ ಮೇಲೆ ಬಿದ್ದ ಬೆಡ್‌! ಮಗು ಸಾವು

ನಿದ್ದೆಯಲ್ಲಿದ್ದ ಬಾಲಕನ ಮೇಲೆ ಬೆಡ್‌ ಬಿದ್ದು ಸಾವಿಗೀಡಾದ ಘಟನೆಯೊಂದು ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದಿದೆ. ಸಂದೀಪ್‌ ಹಾಗೂ ಜಿನ್ಸಿ ದಂಪತಿಯ ಪುತ್ರ ಜೆಫಿನ್‌ ಸಂದೀಪ್‌ (2 ವರ್ಷ) ಎಂಬ ಮಗುವೇ ಈ ದುರಂತ ಸಾವು ಕಂಡಿದೆ. ಈ ದುರ್ಘಟನೆ ಗುರುವಾರ ಸಂಜೆ ಏಳು ಗಂಟೆಗೆ ನಡೆದಿದೆ.

 

ರ್ಯಾಕ್‌ನಲ್ಲಿಟ್ಟಿದ್ದ ಬೆಡ್‌ ಆತನ ಮೇಲೆ ಬಿದ್ದಿದ್ದು, ಬಾಲಕ ಈ ಸಂದರ್ಭದಲ್ಲಿ ಗಾಢ ನಿದ್ದೆಯಲ್ಲಿದ್ದ. ಬೆಡ್‌ ಬಿದ್ದ ಕೂಡಲೇ ಮಗುವನ್ನು ಆತನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ಆತನ ಜೀವ ಉಳಿಯಲಿಲ್ಲ. ಈ ಘಟನೆ ನಡೆದಾಗ ಮನೆಯಲ್ಲಿ ತಾಯಿ ಹಾಗೂ ಮಗು ಮಾತ್ರ ಇದ್ದರು ಎನ್ನಲಾಗಿದೆ. ಮಗುವಿನ ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಅವರು ಕೆಲಸ ನಿಮಿತ್ತ ಹೊರ ಹೋಗಿದ್ದರಿಂದ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

Leave A Reply

Your email address will not be published.