PM Modi: ‘ಇಂಡಿಯಾ-ಭಾರತ’ ಮರುನಾಮಕರಣದ ಬಗ್ಗೆ ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ – ಭಾರೀ ಕುತೂಹಲ ಕೆರಳಿಸಿದ ಹೇಳಿಕೆ !!
Political news prime minister Narendra Modi reacts to sanatana Dharma row started by Udayanidhi Stalin and India Bharat name row
Prime minister Modi : ಸದ್ಯ ದೇಶದ ರಾಜಕೀಯದಲ್ಲಿ ಭಾರೀ ಸದ್ಧುಮಾಡುತ್ತಿರುವ ವಿಚಾರ ಅಂದ್ರೆ ‘ಇಂಡಿಯಾ'(India)ಮತ್ತು ‘ಭಾರತ'(Bharata). ಹೌದು, ಪ್ರಧಾನಿ ನರೇಂದ್ರ ಮೋದಿ(Narendra modi)ನೇತೃತ್ವದ ಬಿಜೆಪಿ ಸರ್ಕಾರವು ದೇಶದ ಹೆಸರನ್ನೇ ಬದಲಾಯಿಲು ಹೊರಟಿದೆ ಎಂದ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ. ಆದರೀಗ ಕೊನೆಗೂ ಈ ವಿಚಾರವಾಗಿ ಪ್ರಧಾನಿ ಮೋದಿ ಮೌನ ಮುರಿದಿದ್ದಾರೆ. ಜೊತೆಗೆ ಹಿಂದೂ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ಗೂ ಮಾತಿನಲ್ಲೇ ಚುರುಕು ಮುಟ್ಟಿಸಿದ್ದಾರೆ.
ಹೌದು, ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲಾಗುತ್ತದೆ, ವಿಶೇಷ ಅಧಿವೇಶನ ನಡೆಯುವುದು ಅದಕ್ಕಾಗಿಯೇ ಎಂಬ ವಿಚಾರ ಕೆಲವು ದಿನಗಳಿಂದ ಭಾರೀ ಸದ್ಧುಮಾಡುತ್ತಿದೆ. ಈ ವಿಚಾರವಾಗಿ ಆಡಳಿತ ಪಕ್ಷದ ಸಚಿವರು, ವಿರೋಧ ಪಕ್ಷದ ನಾಯಕರು ತಮ್ಮಿಚ್ಚೆಯಂತೆ ಮಾತನಾಡುತ್ತಿದ್ದಾರೆ. ಕೆಲವು ಸಚಿವರು ಇದು ಸುಳ್ಳು ಎಂದರೆ ಕೆಲವರು ಇದನ್ನು ಸಮರ್ಥಿಸುತ್ತಿದ್ದಾರೆ. ಒಟ್ಟಿನಲ್ಲಿ ದೇಶದ ಜನ ಗೊಂದಲದಲ್ಲಿ ಸಿಲುಕಿದ್ದಾರೆ. ಆದರೀಗ ಕೊನೆಗೂ ಪ್ರಧಾನಿ ಮೋದಿ(Prime minister Modi) ಈ ಕುರಿತು ಮೌನ ಮುರಿದಿದ್ದಾರೆ.
ಮರುನಾಮಕರಣದ ಕುರಿತು ಪ್ರಧಾನಿ ಹೇಳಿದ್ದೇನು?
ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಮುಂಚಿತವಾಗಿ ಮಂತ್ರಿಮಂಡಲದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಭಾರತ ಮತ್ತು ಇಂಡಿಯಾ ವಿವಾದದ ಬಗ್ಗೆ ಪ್ರತಿಕ್ರಿಯಿಸದಂತೆ ಸಚಿವರಿಗೆ ಸಲಹೆ ನೀಡಿದ್ದು, ಕೇಂದ್ರ ನಾಯಕರಿಗೆ ಭಾರತದ ಹೆಸರಿನ ಮೂಲವನ್ನು ಎಲ್ಲಿ ಹುಡುಕಬಾರದು ಎಂದು ತಿಳಿಸಿದ್ದಾರೆ. ಅಲ್ಲದೆ ಅಧಿಕೃತ ವ್ಯಕ್ತಿಗಳು ಮಾತ್ರವೇ ಈ ವಿಷಯದ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದ ಅವರು, ‘ಭಾರತ ಹೆಸರಿನ ಇತಿಹಾಸ ನೋಡಲು ಹೋಗಬೇಡಿ. ಸಂವಿಧಾನದ ಸತ್ಯಗಳಿಗೆ ಅಂಟಿಕೊಳ್ಳಿ. ಅಲ್ಲದೆ, ಈ ವಿಷಯದ ಸಮಕಾಲೀನ ಪರಿಸ್ಥಿತಿಯ ಬಗ್ಗೆ ಮಾತನಾಡಿ’ ಎಂದು ಹೇಳಿದರು.
ಉದಯ ನಿಧಿಗೆ ಏನಂದ್ರು ಪ್ರಧಾನಿ?
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಹೋಲಿಸುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು. ಚೆನ್ನೈನಲ್ಲಿ (ಸೆ.2) ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸನಾತನ ಧರ್ಮವನ್ನು ವಿರೋಧಿಸಬಾರದು. ನಾಶಪಡಿಸಬೇಕು’ ಎಂದು ಹೇಳಿದ್ದರು. ಅಲ್ಲದೆ ಈ ಕುರಿತಾಗಿ ಅನೇಕ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಅವರ ಹೇಳಿಕೆಗಳನ್ನು ಖಂಡಿಸುವಂತೆ ಬಿಜೆಪಿ, ಕಾಂಗ್ರೆಸ್ ಪಕ್ಷನ್ನು ಒತ್ತಾಯಿಸಿತು. ಆದರೆ ನಂತರ, ಸನಾತನ ಧರ್ಮದ ಅನುಯಾಯಿಗಳ ವಿರುದ್ಧ ಹಿಂಸಾಚಾರಕ್ಕೆ ತಾನು ಕರೆ ನೀಡಿಲ್ಲ ಎಂದು ಉದಯನಿಧಿ ಹೇಳಿಕೊಂಡಿದ್ದಾರೆ. ಸದ್ಯ ಪ್ರಧಾನಿ ಮಾತಿನಲ್ಲೇ ಉದಯನಿಧಿಗೆ ಚಾಟಿ ಬೀಸಿದ್ದಾರೆ.