Petrol diesel price :ಗಣೇಶ ಹಬ್ಬಕ್ಕೆ ದೀಪಾವಳಿ ಗಿಫ್ಟ್ ಕೊಟ್ಟ ಕೇಂದ್ರ- ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

National news petrol diesel rates update petrol diesel prices likely to be cut by RS 3.5 per litre

Petrol diesel price  : ಪೆಟ್ರೋಲ್ ಮತ್ತು ಡೀಸೆಲ್(Petrol-desel ) ಬೆಲೆಯ ಸತತ ಏರಿಕೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರವು ಇದೀಗ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಎರಡರ ಬೆಲೆ ಇಳಿಕೆಯ ಸುಳಿವು ನೀಡಿದೆ. ವಿಶೇಷ ಅಂದ್ರೆ ಗಣೇಶ ಹಬ್ಬಕ್ಕೂ ಮೊದಲೇ ಕೇಂದ್ರವು ದೀಪಾವಳಿಯ ಗಿಫ್ಟ್ ನೀಡಿದೆ. ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನ( Petrol diesel price ) ಲೀಟರ್ಗೆ 3-5 ರೂ.ಗಳಷ್ಟು ಕಡಿತಗೊಳಿಸಬಹುದು ಎಂದು ಜೆಎಂ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನಲ್ ಸೆಕ್ಯುರಿಟೀಸ್ ವರದಿಯಲ್ಲಿ ತಿಳಿಸಿದೆ.

ಹೌದು, ಕೇಂದ್ರ ಸರ್ಕಾರವು(central Government)ದೀಪಾವಳಿಹಬ್ಬಕ್ಕೂ ಮುನ್ನ ವಾಹನ ಸವಾರರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 3 ರೂ.ನಿಂದ 5 ರೂ.ವರೆಗೆ ಇಳಿಕೆ ಮಾಡುವ ಸಾಧ್ಯತೆ ಇದೆ. ಕಳೆದ ವಾರ, ಸರ್ಕಾರವು ಆಗಸ್ಟ್ 30 ರಿಂದ ಜಾರಿಗೆ ಬರುವಂತೆ ಎಲ್ಲಾ 330 ಮಿಲಿಯನ್ ಗ್ರಾಹಕರಿಗೆ ದೇಶೀಯ 14.2 ಕೆಜಿ ಎಲ್ಪಿಜಿ (LPG) ಸಿಲಿಂಡರ್ ಬೆಲೆಯನ್ನು 200 ರೂ.ಗಳಷ್ಟು ಕಡಿತಗೊಳಿಸಿತ್ತು. ಇದು ಆಗಸ್ಟ್ 30, 2023 ರಿಂದ ಜಾರಿಗೆ ಬಂದಿದೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ವಿಚಾರ ಜನರ ಕಿವಿಗೆ ಬೀಳುತ್ತಿದದಂತೆ ಎಲ್ಲರೂ ಸಂತಸಗೊಂಡಿದ್ದಾರೆ.

ಅಂದಹಾಗೆ ವರದಿಯ ಪ್ರಕಾರ, ಸರ್ಕಾರವು ದೇಶದಲ್ಲಿ ದೇಶೀಯ ಎಲ್ಪಿಜಿಯ ಬೆಲೆಗಳನ್ನು ಕಡಿಮೆ ಮಾಡಿರುವುದರಿಂದ ದೀಪಾವಳಿಯ ಸಮಯದಲ್ಲಿ ಭಾರತ ಸರ್ಕಾರವು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ. ನವೆಂಬರ್-ಡಿಸೆಂಬರ್ನಲ್ಲಿ ನಡೆಯಲಿರುವ ಪ್ರಮುಖ ರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿಯ ಸಮಯದಲ್ಲಿ ಸರ್ಕಾರವು ಪೆಟ್ರೋಲ್ / ಡೀಸೆಲ್ ಬೆಲೆಯನ್ನ ಪ್ರತಿ ಲೀಟರ್ಗೆ 3 ರಿಂದ 5 ರೂ.ಗಳಷ್ಟು ಕಡಿಮೆ ಮಾಡಬಹುದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೊಡ್ಡ ಪ್ರಮಾಣದಲ್ಲಿ ಸ್ಥಿರವಾಗಿವೆ, ಆದರೆ ಬೆಲೆಗಳ ಕಡಿತವು ಮುಂಬರುವ ಚುನಾವಣೆಗಳಲ್ಲಿಯೂ ಸರ್ಕಾರಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: PM Modi: ‘ಇಂಡಿಯಾ-ಭಾರತ’ ಮರುನಾಮಕರಣದ ಬಗ್ಗೆ ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ – ಭಾರೀ ಕುತೂಹಲ ಕೆರಳಿಸಿದ ಹೇಳಿಕೆ !!

Leave A Reply

Your email address will not be published.