Aditya L1 : ಬಾಹ್ಯಾಕಾಶದಲ್ಲಿ ಭೂಮಿ ಮತ್ತು ಚಂದ್ರನ ಸೆಲ್ಫಿ ಕ್ಲಿಕ್ಕಿಸಿದ ಸೂರ್ಯನ ಬೆನ್ನತ್ತಿರೋ ‘ಆದಿತ್ಯ’ – ವೈರಲ್ ಆಯ್ತು ಸುಂದರ ದೃಶ್ಯ !!
ISRO Aditya L1 update Suryayaan Aditya L1 takes selfieS of earth moon from space
Aditya L1: ಇಡಿ ವಿಶ್ವವನ್ನೇ ನಿಬ್ಬೆರಗಾಗಿಸಿದ್ದ ಭಾರತದ ಚಂದ್ರಯಾನ – 3(Chandrayana 3) ಯಶಸ್ಸಿನ ಬೆನ್ನಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮೊಟ್ಟ ಮೊದಲ ಬಾರಿಗೆ ಕೈಗೊಂಡಿದ್ದ ಸೂರ್ಯಯಾನ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಈ ನಡುವೆ ಸೂರ್ಯನ ಬೆನ್ನಟ್ಟಿರುವ ಆದಿತ್ಯ(Aditya L1) ಬ್ಯಾಹ್ಯಾಕಾಶದಿಂದ ಸುಂದರ ಚಿತ್ರವೊಂದನ್ನು ಕಳಿಸಿದೆ.
ಹೌದು, ಸೂರ್ಯನ ಕುರಿತ ಸಂಶೋಧನೆಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಕಳುಹಿಸಿದ್ದ ಆದಿತ್ಯ ಎಲ್1 (Aditya L1) ಈಗ ಮತ್ತೊಂದು ಮಹತ್ವದ ಕಾರಣಕ್ಕೆ ಸುದ್ದಿಯಾಗಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಿಂದ ಸೆಲ್ಫಿ ಹಂಚಿಕೊಂಡಿದೆ. ಇದರಲ್ಲಿ ಭೂಮಿ, ಚಂದ್ರನನ್ನು ಸೆರೆಹಿಡಿದಿದೆ. ಸದ್ಯ ಈ ಫೋಟೋವನ್ನು ಇಸ್ರೋ ಹಂಚಿಕೊಂಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಅಂದಹಾಗೆ ಟ್ವೀಟರ್ ನಲ್ಲಿ ಈ ಬಗ್ಗೆ ಇಸ್ರೋ ಮಾಹಿತಿ ಹಂಚಿಕೊಂಡಿದ್ದು, ಆದಿತ್ಯ ಎಲ್1 ತನ್ನ ಮೊದಲ ಸೆಲ್ಫಿಯನ್ನು ತೆಗೆದುಕೊಂಡಿದೆ ಎಂದು ಹೇಳಿದೆ. ಇದರಲ್ಲಿ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಲ್ಯಾಗ್ರೇಂಜ್ ಪಾಯಿಂಟ್ 1 ಗೆ ಪ್ರಯಾಣಿಸುವ ಮೊದಲು ಗ್ರಹದ ಸುತ್ತಲೂ ಸುತ್ತುತ್ತಿರುವಾಗ ತನ್ನದೇ ಆದ ಸೆಲ್ಫಿಯೊಂದಿಗೆ ಭೂಮಿ ಮತ್ತು ಚಂದ್ರನನ್ನು ಸೆರೆಹಿಡಿದಿದೆ.
ಇನ್ನು ಕಳೆದ ಸೆಪ್ಟೆಂಬರ್ 5 ರ ರಾತ್ರಿ 2.45 ಕ್ಕೆ ಆದಿತ್ಯ ಎಲ್ -1 ಭೂಮಿಯ ಎರಡನೇ ಕಕ್ಷೆಯನ್ನು ಪ್ರವೇಶಿಸಿತ್ತು. ಆದಿತ್ಯ L-1 ಸೆಪ್ಟೆಂಬರ್ 10 ರಂದು ರಾತ್ರಿ 2:30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸುತ್ತದೆ ಎಂದು ಇಸ್ರೋ ತಿಳಿಸಿದೆ. ಸೆಪ್ಟೆಂಬರ್ 3 ರಂದು, ಸೂರ್ಯ ಮಿಷನ್ ಆದಿತ್ಯ L-1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು. ಕಳೆದ ಭಾನುವಾರ ಇಸ್ರೋ ಬೆಳಿಗ್ಗೆ 11.45 ರ ಸುಮಾರಿಗೆ ಭೂಮಿಗೆ ಫೈರಿಂಗ್ ಮಾಡಿತು, ಅದರ ಸಹಾಯದಿಂದ ಆದಿತ್ಯ ಎಲ್ -1 ತನ್ನ ಕಕ್ಷೆಯನ್ನು ಬದಲಾಯಿಸಿತು.
Aditya-L1 Mission:
Onlooker!Aditya-L1,
destined for the Sun-Earth L1 point,
takes a selfie and
images of the Earth and the Moon.#AdityaL1 pic.twitter.com/54KxrfYSwy— ISRO (@isro) September 7, 2023
ventolin generic: Buy Ventolin inhaler online – ventolin over the counter
ventolin capsule
buy neurontin canada: 2000 mg neurontin – purchase neurontin
prednisone 7.5 mg: prednisone 1 mg tablet – prednisone 20 mg generic
lasix dosage: cheap lasix – lasix 100mg
canadapharmacyonline: Pharmacies in Canada that ship to the US – online canadian pharmacy reviews