Jio Fiber Service:ಗಣೇಶ ಹಬ್ಬದ ಪ್ರಯುಕ್ತ ಜಿಯೋಯಿಂದ ಸಿಗ್ತಿದೆ ಭರ್ಜರಿ ಆಫರ್-ಅಧ್ಯಕ್ಷ ಮುಕೇಶ್‌ ಅಂಬಾನಿ ಕೊಟ್ರು ಸಖತ್ ಗುಡ್ ನ್ಯೂಸ್

Technology news jio fibre service air fibre service from jio for Ganesh chaturthi festival

Jio Fiber Service: ಟೆಲಿಕಾಮ್ ಕಂಪನಿಗಳಲ್ಲಿ(Telocom Company)ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ(Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿದೆ. ಇದೀಗ, ಗಣೇಶ ಚತುರ್ಥಿ(Ganesh chaturthi) ಹಬ್ಬದ ಸಲುವಾಗಿ ಮುಖೇಶ್ ಅಂಬಾನಿಯವರು ಜಿಯೋ ಗ್ರಾಹಕರಿಗೆ ಬೊಂಬಾಟ್ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ.ಗಣೇಶ ಚತುರ್ಥಿಯ ವೇಳೆ ಅಂದರೆ ಸೆಪ್ಟೆಂಬರ್ 19, 2023ರಂದು ದೇಶದಲ್ಲಿ ಜಿಯೋ ಏರ್‌ಫೈಬರ್‌ ಸೇವೆ (Jio Fiber Service) ಆರಂಭಿಸುವ ಕುರಿತು ಮುಖೇಶ್ ಅಂಬಾನಿಯವರು ಮಾಹಿತಿ ನೀಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯ ವೇಳೆ, ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ ಈ ಬಗ್ಗೆ ಮಾಹಿತಿ ನೀಡಿದ್ದು, “ನಮ್ಮ ಆಪ್ಟಿಕಲ್ ಫೈಬರ್ ಸೇವೆಯಾದ ಜಿಯೋ ಫೈಬರ್‌ 1 ಕೋಟಿಗೂ ಹೆಚ್ಚು ಸಂಪರ್ಕಗಳನ್ನೊಳಗೊಂಡಿದೆ. ಇನ್ನೂ ಲಕ್ಷಾಂತರ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ತಂತಿ ಮೂಲಕ ಸಂಪರ್ಕ ಕಲ್ಪಿಸುವುದು ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನ ಜಿಯೋ ಏರ್ ಫೈಬರ್ ನಿವಾರಿಸುತ್ತದೆ” ಎಂದು ತಿಳಿಸಿದ್ದಾರೆ.

ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಏರ್ ಫೈಬರ್ ಆರಂಭ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ. ಜಿಯೋ ಏರ್‌ಫೈಬರ್ 5ಜಿ ನೆಟ್ವರ್ಕ್ ಮತ್ತು ಅತ್ಯಾಧುನಿಕ ವೈರ್ಲೆಸ್ ತಂತ್ರಜ್ಞಾನವನ್ನು ಬಳಕೆ ಮಾಡಿ ಮನೆಗಳು ಮತ್ತು ಕಚೇರಿಗಳಿಗೆ ವೈರ್‌ಲೆಸ್‌ ಬ್ರಾಡ್‌ಬ್ಯಾಂಡ್‌ ಸೇವೆಯ ಸೌಲಭ್ಯ ನೀಡಲಿವೆ. ಈ ಮೂಲಕ ನಾವು 20 ಕೋಟಿ ಮನೆ ಮತ್ತು ಕಚೇರಿಗಳನ್ನು ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಜಿಯೋ ಏರ್ ಫೈಬರ್ ಪ್ರಾರಂಭ ಆಗುವ ಮೂಲಕ ಜಿಯೋ ವಲಯಕ್ಕೆ ಪ್ರತಿದಿನ 1.5 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲು ಅವಕಾಶ ದೊರೆಯಲಿದೆ,” ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ.ನ 46 ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿ ಅಧ್ಯಕ್ಷ ಮುಕೇಶ್‌ ಅಂಬಾನಿ ಜಿಯೋ ಫೈಬರ್ ಸರ್ವೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ

ಇದನ್ನೂ ಓದಿ: Mangaluru : ಕರಾವಳಿಗರೇ ನಿಮಗಿದೋ ಗುಡ್‌ನ್ಯೂಸ್‌: ಇನ್ನು ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ಹಾರಾಲಿವೆ ಹೆಚ್ಚು ವಿಮಾನ – ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

2 Comments
  1. […] ಇದನ್ನೂ ಓದಿ: Jio Fiber Service:ಗಣೇಶ ಹಬ್ಬದ ಪ್ರಯುಕ್ತ ಜಿಯೋಯಿಂದ ಸ… […]

Leave A Reply

Your email address will not be published.