Ration Card: ಪಡಿತರ ಚೀಟಿ ತಿದ್ದುಪಡಿ-ಪರಿಷ್ಕೃತ ದಿನಾಂಕ ಪ್ರಕಟ : ಸೆ.12ರಿಂದ ಸೆ.14 ರವರೆಗೆ ಮಾತ್ರ ಅವಕಾಶ
Ration card update deadline for ration Card name changes 12th September to 14th September Only

Ration Card : ಪಡಿತರ ಚೀಟಿ (Ration Card) ತಿದ್ದುಪಡಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜಿಲ್ಲಾವಾರು ಬದಲಾವಣೆ ಮಾಡಿ ಆಹಾರ ಇಲಾಖೆ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಮೊದಲು ಸೆ 1ರಿಂದ ಸೆ. 10ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ನಿಗದಿಪಡಿಸಿದ್ದ ಆದೇಶವನ್ನು ಇಲಾಖೆ ಹಿಂಪಡೆದಿದೆ.
ಪಡಿತರ ಚೀಟಿ ತಿದ್ದುಪಡಿಗೆ ಭರಪೂರ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಆಹಾರ ಇಲಾಖೆಯ ಸರ್ವರ್ ನಲ್ಲಿಸಮಸ್ಯೆ ಕಾಣಿಸಿಕೊಂಡಿದೆ
1 ಗಂಟೆಯಲ್ಲಿ ಸುಮಾರು 500ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಜನರು ಪಡಿತರ ಚೀಟಿ ತಿದ್ದುಪಡಿಗೆ ವಿವಿಧ ಕೇಂದ್ರಗಳನ್ನು ಸಂಪರ್ಕಿಸಿದರೂ ತಿದ್ದುಪಡಿ ಆಗುತ್ತಿರಲಿಲ್ಲ.
ಈ ಸಮಸ್ಯೆಯನ್ನು ಗಮನಿಸಿದ ಆಹಾರ ಇಲಾಖೆ ಸರ್ವರ್ ನಿಭಾಯಿಸಲು ಇದೀಗ ಜಿಲ್ಲಾವಾರು ದಿನಾಂಕವನ್ನು ನಿಗದಿಪಡಿಸಿದೆ.
ಅದರಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಅವಕಾಶ ಮಾಡಲಾಗಿದೆ.
ಇದನ್ನೂ ಓದಿ: ಮಂಗಳೂರು : ಮೀನು ಕೃಷಿಕರಿಗೆ ಮೀನು ಸಾಕಾಣೆ ಘಟಕಗಳಿಗೆ ಒಂದು ದಿನದ ಶಿಕ್ಷಣ ಪ್ರವಾಸ ,ಹೆಸರು ನೊಂದಾಯಿಸಲು ಸೂಚನೆ