Alcohol: ಮದ್ಯ ಪ್ರಿಯರೇ.. ಸರ್ಕಾರ ಕೊಡ್ತು ನಿಮಗೊಂದು ಗುಡ್ ನ್ಯೂಸ್- ಇನ್ಮುಂದೆ ಇಲ್ಲೂ ಸಿಗಲಿದೆ ನಿಮ್ ನಿಮ್ಮ ಫೇವರೇಟ್ ಬ್ರಾಂಡ್

Karnataka news good news for alcholics alcohol sale at mall and supermarket across the state

Alcohol: ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಯ ಸಲುವಾಗಿ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದು, ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಈ ಪ್ರಯುಕ್ತ, ಆದಾಯ ಹೆಚ್ಚಳಕ್ಕಾಗಿ ಹಲವಾರು ನಿಯಮಗಳಲ್ಲಿ ಬದಲಾವಣೆ ತಂದಿವೆ. ಇದೀಗ ಸರ್ಕಾರದ ಆದಾಯದ ಕೊಂಡಿಯಾಗಿರುವ, ಅಬಕಾರಿ ಮೂಲದಿಂದ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿಯೂ ಮದ್ಯ (Alcohol) ಮಾರಾಟ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಲು ತಯಾರಿ ನಡೆಸಿದೆ.

 

ಹೌದು, ಅಬಕಾರಿ ಇಲಾಖೆ ಮೂಲಕ ಆದಾಯ ವೃದ್ಧಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಇಲಾಖಾ ಮಟ್ಟದಲ್ಲಿ ಈ ಕುರಿತಾಗಿ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ. ಅದಲ್ಲದೆ ಹೊಸ ಪಬ್ ಗಳಿಗೆ ಲೈಸೆನ್ಸ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಸದ್ಯ ಅಬಕಾರಿ ಇಲಾಖೆ ಮೂಲಕ ಆದಾಯ ವೃದ್ಧಿಗಾಗಿ ಹೊಸ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಮಾಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಮಾಡುವ ಮೂಲಕ 36,000 ಕೋಟಿ ಆದಾಯ ಸಂಗ್ರಹ ಗುರಿ ಹೊಂದಿದೆ. ಇನ್ನು ಹೆಚ್ಚುವರಿಯಾಗಿ 4,000 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: SSLC ಹಾಗೂ PUC ವಿದ್ಯಾರ್ಥಿಗಳೇ ಗಮನಿಸಿ- ಇನ್ಮುಂದೆ ನೀವು ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಬೇಕು !! ಅರೇ.. ಏನಿದು ಹೊಸ ವಿಚಾರ

Leave A Reply

Your email address will not be published.