94C ಅರ್ಜಿ ಸಲ್ಲಿಸಿದ 70ಕ್ಕೂ ಅಧಿಕ ಮಂದಿಗೆ ಸಿಗದ ಹಕ್ಕುಪತ್ರ : ತಹಶೀಲ್ದಾರ್ ಕಚೇರಿ ಮುಂದೆ ಮೌನ ಪ್ರತಿಭಟನೆ ಗೆ ಮುಂದಾದ ಗ್ರಾ.ಪಂ.ಉಪಾಧ್ಯಕ್ಷ
ಚಿಕ್ಕಮಗಳೂರು :94Cಯಲ್ಲಿ ಅರ್ಜಿ ಸಲ್ಲಿಸಿದ 70ಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ಸಿಗದ ಕಾರಣದಿಂದ ತಹಶೀಲ್ದಾರ್ ಕಚೇರಿ ಮುಂದೆ ಗ್ರಾ.ಪಂ.ಉಪಾಧ್ಯಕ್ಷರೊಬ್ಬರು ಮೌನ ಪ್ರತಿಭಟನೆಗೆ ಮುಂದಾದ ಘಟನೆ ಮೂಡಿಗೆರೆಯಿಂದ ವರದಿಯಾಗಿದೆ.
ಎರಡು ವರ್ಷಗಳಿಂದ ಮೂಡಿಗೆರೆ ತಾಲೂಕಿನ ನಿಡುವಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಕಲ್ ನಿಡುವಳೆ ಗ್ರಾಮದ 70ಕ್ಕೂ ಅಧಿಕ ಮಂದಿ ಗ್ರಾಮಸ್ಥರು 94 ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅದರಲ್ಲಿ 30 ಜನರು ಸರ್ಕಾರಕ್ಕೆ ಶುಲ್ಕ ಪಾವತಿಸಿದ್ದಾರೆ.ಆದರೆ ಮೂಡಿಗೆರೆ ತಹಸಿಲ್ದಾರ್ ಅವರು ಹಕ್ಕುಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸತ್ತು ಗ್ರಾಮಸ್ಥರ ಪರವಾಗಿ ನಿಡುವಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಹಾವಳಿ ಅವರು ಮೌನ ಪ್ರತಿಭಟನೆ ನಡೆಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾ. ಪಂ.ಉಪಾಧ್ಯಕ್ಷ ನವೀನ್ ಹಾವಳಿ ,ಮರ್ಕಲ್ ನಿಡುವಳೆ ಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸ ಮಾಡುತ್ತಿದ್ದಾರೆ.ಅವರು 94 ಸಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಹಕ್ಕುಪತ್ರ ನೀಡದೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.ಗ್ರಾಮಸ್ಥರು ಕಚೇರಿಗಳಿಗೆ ಅಲೆದು ಅಲೆದು ಸೋಡು ಹೋಗಿದ್ದು,ಇದರಿಂದಾಗಿ ಖುದ್ದಾಗಿ ನಾನೇ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಅದರಿಂದ ಬೇಸತ್ತು ಮೌನ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.