KSRTC: ಕೈಯಲ್ಲಿ ಕಾಸಿಲ್ಲದಿದ್ದರೂ ಪುರುಷರಿಗೂ KSRTC ಬಸ್‌ನಲ್ಲಿ ಪ್ರಯಾಣಿಸಬಹುದು

Nwkrtc has introduced upi based payment KSRTC exploring options for upi payments

KSRTC : ಕೈಯಲ್ಲಿ ಕಾಸಿಲ್ಲದಿದ್ದರೂ ಪುರುಷರಿಗೂ ಬಸ್ಸಿನಲ್ಲಿ  ಪ್ರಯಾಣಿಸಬಹುದು.ಹೌದು ಶೀಘ್ರವೇ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯುಪಿಐ ಪೇಮೆಂಟ್ ವ್ಯವಸ್ಥೆ ಜಾರಿಯಾಗಲಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಗೂಡಂಗಡಿಯಿಂದ ಹಿಡಿದು ಹೈಪರ್ ಮಾಲ್‌ನಲ್ಲೂ ಡಿಜಿಟಲ್ ಪೇಮೆಂಟ್ ಎಂಬುದು ಸಾಮಾನ್ಯವಾಗಿದೆ.ಇದೇ ರೀತಿ KSRTC ಬಸ್‌ನಲ್ಲೂ UPI Payment ವ್ಯವಸ್ಥೆ ಜಾರಿಗೊಳಿಸಲು ಸಿದ್ದತೆ ನಡೆದಿದೆ.

KSRTC ಬಸ್ ನಲ್ಲಿ ಪ್ರತಿದಿನ ನಿರ್ವಾಹಕ ಹಾಗೂ ಪ್ರಯಾಣಿಕರ ಮಧ್ಯೆ ಚಿಲ್ಲರೆಗಾಗಿ ಜಗಳ ಇದ್ದೇ ಇರುತ್ತದೆ. ಇದನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯುಪಿಐ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ನಿರ್ಧಾರ ಕೈಗೊಂಡಿದೆ.

ನಗದು ರಹಿತ ಪಾವತಿ ಮೂಲಕ ಗ್ರಾಹಕರು ಹಾಗೂ ಸಾರಿಗೆ ಸಿಬ್ಬಂದಿಗೆ ಅನುಕೂಲ ಕಲ್ಪಿಸುವುದು ಕೆಎಸ್‌ಆರ್‌ಟಿಸಿ ಉದ್ದೇಶವಾಗಿದ್ದು, ಇನ್ನು ಮುಂದೆ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಿ ಪ್ರಯಾಣಿಕರು ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ, ಟಿಕೆಟ್‌ ಪಡೆಯಬಹುದಾಗಿದೆ.

ಇದನ್ನೂ ಓದಿ: ಮಂಗಳೂರು : ಪ್ಲಾಟ್‌ಫಾರಂಗಳ ನಿರ್ಮಾಣ ಕಾಮಗಾರಿ ರೈಲು ಸಂಚಾರದಲ್ಲಿ ಬದಲಾವಣೆ ,ಕೆಲ ರೈಲುಗಳ ಸಂಚಾರ ರದ್ದು

Leave A Reply

Your email address will not be published.