ಸೌಜನ್ಯ ಹೋರಾಟಗಾರರ ಅಂಗರಕ್ಷಕರ ಕಣ್ಣಲ್ಲಿ ನೀರು!! ಬಿಕ್ಕಿ ಬಿಕ್ಕಿ ಅಳುತ್ತಿರುವ ಪೊಲೀಸ್-ವಿಡಿಯೋ ವೈರಲ್
ಕಳೆದ ಒಂದೆರಡು ತಿಂಗಳುಗಳಿಂದ ಮತ್ತೆ ಭುಗಿಲೆದ್ದ ಸೌಜನ್ಯ ನ್ಯಾಯದ ಪರ ಹೋರಾಟ ದಿನೇ ದಿನೇ ಹಲವು ಆಯಾಮಗಳನ್ನು,ಹಲವಾರು ವಿಭಿನ್ನತೆಗಳನ್ನು ಕಾಣುವ ಮೂಲಕ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಈಗ, ನಿನ್ನೆಯ ಸೌಜನ್ಯ ಪ್ರತಿಭಟನೆಯ ಐತಿಹಾಸಿಕ ಮಹಾಸಾಗರದಂತಹಾ ಜನ ಸಮ್ಮೇಳನದಲ್ಲಿ ಭಾಗವಹಿಸಿದ ಗಣ್ಯರೊಬ್ಬರ ಅಂಗರಕ್ಷಕರೇ ಪುಣ್ಯಕೋಟಿ ಹಾಡಿನ ಧಾಟಿಯಲ್ಲಿ ಸೌಜನ್ಯ ಜೀವನ ಆಧಾರಿತ ಹಾಡಿಗೆ ಕಣ್ಣೀರು ಸುರಿಸಿದ ಘಟನೆ ನಡೆದಿದೆ.
ಪ್ರಾರಂಭದಿಂದಲೂ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳ ಹೆಡೆಮುರಿಕಟ್ಟಲು ಆಗ್ರಹಿಸಿ ಹೋರಾಟದ ಬೆನ್ನೆಲುಬಾಗಿ ನಿಂತಿರುವ ರಾಷ್ಟೀಯ ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ಮಹೇಶ್ ಶೆಟ್ಟಿ ತಿಮರೋಡಿಯವರೊಂದಿಗೆ ಇಂದು ರಾಜ್ಯದ ಪ್ರಜ್ಞಾವಂತ ನಾಗರಿಕರು,ಹೋರಾಟಗಾರರು, ಒಡನಾಡಿ ಸಂಸ್ಥೆ,ಕೆ ಆರ್ ಎಸ್ ಪಕ್ಷ,ತ್ರಿಶೂಲ್ ಸೇನೆ ಹಾಗೂ ಒಕ್ಕಲಿಗ ಗೌಡ ಸಂಘ ಜೊತೆಯಾಗಿದೆ.
ಈಗಾಗಲೇ ಜಿಲ್ಲೆಯ ಹಲವೆಡೆಗಳಲ್ಲಿ ಪ್ರತಿಭಟನಾ ಸಭೆಗಳು ನಡೆದಿದ್ದು,ಕುಂದಾಪುರ ದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರ ಸಾವಿರ ನಾಗರಿಕರು ಭಾಗವಹಿಸಿದ್ದರು.ಅಂತೆಯೇ ನಿನ್ನೆ ಸೆ.03 ರಂದು ಬೆಳ್ತಂಗಡಿಯಲ್ಲಿ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಬೃಹತ್ ಹೋರಾಟದಲ್ಲಿ ಮಹಿಳೆಯರು,ಮಕ್ಕಳ ಸಹಿತ ಸಾವಿರ ಸಾವಿರ ಮಂದಿ ಭಾಗವಹಿಸಿ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದರು.
ಹೋರಾಟದ ಸಭಾ ವೇದಿಕೆಯಲ್ಲಿ ಧರ್ಮಪಾಲನಾಥ ಶ್ರೀ, ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಮುತಾಲಿಕ್ ರಂತಹ ನಾಯಕರು ಭಾಗವಹಿಸಿದ್ದು ಈ ಸಂದರ್ಭದಲ್ಲಿ ಸೌಜನ್ಯ ಕುಟುಂಬಿಕರು ಹಾಡಿದ ಅದೊಂದು ಗೀತೆಗೆ ವೇದಿಕೇತರ ಗಣ್ಯರ ಸಹಿತ ನೆರೆದ ಸಭೆಯು ಕಣ್ಣಂಚಿನಲ್ಲಿ ನೀರು ತುಂಬಿತ್ತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುತಾಲಿಕ್ ಅಂಗರಕ್ಷಕ ಕಣ್ಣೀರು ತಡೆದುಕೊಳ್ಳಲು ಆಗದೆ ಕುಳಿತುಬಿಟ್ಟ ಘಟನೆ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಕಣ್ಣೀರು ತಡೆದುಕೊಳ್ಳಲು ಆಗದೆ ಆತ ಯಾರೂ ನೋಡಬಾರದೆಂದು ಕುಳಿತು ಕಣ್ಣೀರು ಒರೆಸಿಕೊಳ್ಳುವ ದೃಶ್ಯಗಳು (Police crying during Soujanya Protest) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆರಂಭಿಕ ತನಿಖೆಯ ವೈಫಲ್ಯದ ಆರೋಪ ಎದುರಿಸುತ್ತಿರುವ ಖಾಕಿಯೇ ಇಂದು ಕಣ್ಣೀರು ಹಾಕುತ್ತಿದೆ ಎಂದು ಸೌಜನ್ಯ ಪರ ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ಕಲ್ಲು ಹೃದಯವನ್ನೂ ಕರಗಿಸುವ ಆ ದೃಶ್ಯವನ್ನು ಹಂಚಿಕೊಂಡಿದೆ. ನಾವೆಲ್ಲ ಅಂದುಕೊಳ್ಳುವ ಕಟು ಮನಸ್ಸಿನ ವ್ಯಕ್ತಿಗಳೆನಿಸಿಕೊಳ್ಳುವ ಈ ಮಿಡಿಯುವ ಹೃದಯದ ಪೋಲೀಸ್ ಈಗ ವೈರಲ್ ಆಗುತ್ತಿದ್ದಾರೆ.