Viral News: ಈ ಕುಟುಂಬ ನಾಲ್ಕು ಕಾಲಲ್ಲಿ ನಡೆಯುತ್ತೆ! ಅಚ್ಚರಿಯ ಘಟನೆಗೆ ವಿಜ್ಞಾನಿಗಳು ಶಾಕ್‌!!!

International news Turkish Ulas family walking on all fours has baffles scientists viral news

Viral News: ಮನುಷ್ಯನಿಗೆ ಎರಡು ಕೈ ಎರಡು ಕಾಲು ಇರೋದು ಇದು ಎಲ್ಲರಿಗೂ ತಿಳಿದಿರುವಂತದ್ದೆ. ನಾವು ಎಲ್ಲಿಗೆ ಹೋಗಬೇಕಾದರೂ ಕಾಲಿನಲ್ಲಿಯೇ ನಡೆದಾಡಿಕೊಂಡು ಹೋಗುತ್ತೇವೆ. ಆದರೆ, ನಿಮಗೊಂದು ಆಶ್ಚರ್ಯ ಸಂಗತಿ ಇಲ್ಲಿದೆ. ಈ ಕುಟುಂಬ ನಾಲ್ಕು ಕಾಲಲ್ಲಿ ನಡೆಯುತ್ತೆ (Viral News). ಅಚ್ಚರಿಯ ಘಟನೆಗೆ ವಿಜ್ಞಾನಿಗಳು (Scientist) ಶಾಕ್‌ ಆಗಿದ್ದಾರೆ.

ಹೌದು, ಟರ್ಕಿಯಲ್ಲೊಂದು ಕುಟುಂಬ ಇಂದಿಗೂ 2 ಕೈಗಳು ಮತ್ತು 2 ಕಾಲುಗಳನ್ನು ಬಳಸಿ ನಡೆಯುತ್ತಿದೆ. ಟರ್ಕಿಯ ಉಲಾಸ್ ಎಂಬ ಕುಟುಂಬದ ಎಲ್ಲರೂ ಬೆನ್ನು ಬಗ್ಗಿಸಿ, ಕೈಗಳನ್ನು ನೆಲಕ್ಕೆ ಊರಿಕೊಂಡೇ ನಡೆಯುತ್ತಾರೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿಕಸನೀಯ ಮನಶ್ಶಾಸ್ತ್ರಜ್ಞ ಪ್ರೊಫೆಸರ್ ನಿಕೋಲಸ್ ಹಂಫ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಕುಟುಂಬದ 18 ಮಕ್ಕಳಲ್ಲಿ 6 ಮಕ್ಕಳಿಗೆ ಹುಟ್ಟುವಾಗಲೇ ಒಂದೇ ರೀತಿಯ ನ್ಯೂನತೆ ಕಾಣಿಸಿಕೊಂಡಿದೆ. ಅವರಿಗೆ ನೇರವಾಗಿ ನಿಲ್ಲಲು ಸಾಧ್ಯವೇ ಆಗುವುದಿಲ್ಲ. ಅವರು ಕೈ ಕಾಲುಗಳನ್ನು ಬಳಸಿ ನೆಲದ ಮೇಲೆ ಬಗ್ಗಿಕೊಂಡೇ ನಡೆಯುತ್ತಾರೆ ಎಂದು ತಿಳಿಸಿದ್ದಾರೆ.

ಈ ರೀತಿ 2 ಕೈಗಳು ಮತ್ತು 2 ಕಾಲುಗಳ ಮೇಲೆ ನಡೆಯುವ ವ್ಯಕ್ತಿಗಳು ಸಣ್ಣ ಸೆರೆಬೆಲ್ಲಮ್ ಅನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಬಗ್ಗೆ ಲಿವರ್‌ಪೂಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, 4 ಕಾಲುಗಳ ಮೇಲೆ ನಡೆಯುವವರು ಸಾಮಾನ್ಯ ಮಾನವರಿಗಿಂತ ಕೋತಿಗಳಿಗೆ ಹೆಚ್ಚು ಹೋಲುವ ಅಸ್ಥಿಪಂಜರದ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಹಿದ್ದಾರೆ.

ಇನ್ನು ಟರ್ಕಿಯ ಉಲಾಸ್ ಕುಟುಂಬದ ಬಗ್ಗೆ ಡಾಕ್ಯುಮೆಂಟರಿ ಮಾಡಲಾಗಿದೆ. “ದಿ ಫ್ಯಾಮಿಲಿ ದಟ್ ವಾಕ್ಸ್ ಆನ್ ಆಲ್ ಫೋರ್ಸ್” ಎಂಬ ಈ ಸಾಕ್ಷ್ಯಚಿತ್ರದಲ್ಲಿ ಆ ಇಡೀ ಕುಟುಂಬದ ಕತೆ ಹಾಗೂ ಅವರ ಜೀವನವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: Udayanidhi Stalin : ಮಲೇರಿಯಾ, ಡೆಂಘಿ ಗೆ ಸನಾತನ ಧರ್ಮವನ್ನು ಹೋಲಿಸಿದ ಉದಯನಿಧಿ ಸ್ಟಾಲಿನ್‌ !!!

 

Leave A Reply

Your email address will not be published.