Interesting News: ಸೂರ್ಯಯಾನದ ಆದಿತ್ಯ L-1 ತಲುಪುವ ಪ್ರದೇಶದಲ್ಲಿ ಉಷ್ಣತೆ ಎಷ್ಟಿರುತ್ತದೆ ಗೊತ್ತಾ ?

Interesting News: ಆದಿತ್ಯ L 1 (Aditya L1) ಹೊರಡುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ನಾವು ಓದಿದ್ದೇವೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಗಳ ದೂರದಲ್ಲಿ ಲಾಂಗ್ರೆಜ್ ಒನ್ ಎಂಬ ಪ್ರದೇಶದಲ್ಲಿ ಹೋಗಿ ಈ ಸೌರ ನೌಕೆಯು ಕುಳಿತುಕೊಳ್ಳಲಿದ್ದು, ಅಲ್ಲಿಂದ ಸೂರ್ಯನ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲಿದೆ. ನಿಜಕ್ಕೂ ಆದಿತ್ಯ ಎಲ್ -ಒನ್ ಎನ್ನುವುದು ಅಲ್ಲಿ ಹೋಗಿ ಲ್ಯಾಂಡ್ ಆಗಲ್ಲ. ಅದು ಅಲ್ಲಿ ಒಂದು ಚಿಕ್ಕ ಕಕ್ಷೆಯಲ್ಲಿ ಸುತ್ತುತ್ತಾ ಸೂರ್ಯನ ಕಡೆಗೇ ಮುಖ ಮಾಡಿ ಅಧ್ಯಯನ ನಡೆಸಬೇಕು. ಹಾಗಾಗಲು ಇಸ್ರೋ ಪ್ಲಾನ್ ಮಾಡಿಕೊಂಡಿದೆ. (Soorya yaan)

ಇಲ್ಲಿ ಒಂದು ಕುತೂಹಲಕಾರಿ ಅಂಶ ಇದೆ. ಆದಿತ್ಯ L1 ಸೂರ್ಯನ ಕಡೆಗೆ ಕೈಚಾಚಿ ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಯಾಣಕ್ಕೆ ರೆಡಿಯಾಗುತ್ತಿದೆ. ಅಲ್ಲಿ ಲ್ಯಾಂಗ್ರೆಜ್ ಪಾಯಿಂಟ್ ಎಂಬ ಪ್ರದೇಶಕ್ಕೆ ಹೋದಾಗ ಅಲ್ಲಿ ಉಷ್ಣತೆ ಎಷ್ಟು ಇರಬಹುದು ಎಂಬ ಬಗ್ಗೆ ಸಹಜವಾಗಿ ಎಲ್ಲರಿಗೂ ಕುತೂಹಲವಿದೆ. ಲ್ಯಾಂಗ್ರೆಜ್ ಪಾಯಿಂಟ್ ನಲ್ಲಿ ಸಿಕ್ಕಾಪಟ್ಟೆ ಉಷ್ಣತೆ ಇದ್ದು ಅಲ್ಲಿ ನಾವು ಕಳಿಸಿದ ನೌಕೆ ಕಥೆ ಏನಾಗಬಹುದು ಎನ್ನುವ ಕಲ್ಪನೆ ಮತ್ತು ಆತಂಕ ಎಲ್ಲರಿಗೂ ಇರುವಂತದ್ದೇ. ಆದರೆ ಭೂಮಿಯಿಂದ ಹದಿನೈದು ಲಕ್ಷ ಕಿಲೋಮೀಟರ್ಗಳ ಆಚೆಗೆ ಇರುವ ಉಷ್ಣತೆ – 40° ಸೆಂಟಿಗ್ರೇಡ್. ಅಂದರೆ ಅಲ್ಲಿ ಅತ್ಯಂತ ಕಡಿಮೆ ಉಷ್ಣತೆ ಇರುತ್ತದೆ. ಆದರೆ ಕೆಲವೊಮ್ಮೆ ಅಲ್ಲಿನ ಉಷ್ಣತೆ 250 ಡಿಗ್ರಿ ಸೆಂಟಿಗ್ರೇಡ್ ತನಕ ಹೋಗುವ ಸನ್ನಿವೇಶ ಇದೆಯಂತೆ. ಈ ನೌಕೆಯನ್ನು ಇಂತಹ ಉಷ್ಣಾಂಶ ವೈಪರಿತ್ಯಗಳನ್ನು ಎದುರಿಸಿ ಕಾರ್ಯನಿರ್ವಹಿಸಬಲ್ಲ ರೀತಿಯಲ್ಲಿ ತಯಾರಿಸಲಾಗಿದೆ.
ಇತರ ಆಸಕ್ತಿಕರ ವಿಷಯಗಳು:

  1. ಆದಿತ್ಯ ಎಲ್ಒನ್ ಸೂರ್ಯನನ್ನು ತಲುಪಿಯಲು ಸುಮಾರು 4 ತಿಂಗಳ ಬೇಕಾಗುತ್ತದೆ. ಅಂದರೆ 120 ದಿನಗಳ
  2. ನಿರಂತರ ಪ್ರಯಾಣದ ಮೂಲಕ ಉದ್ದೇಶಿತ ಲ್ಯಾಂಗ್ವೇಜ್ ಪಾಯಿಂಟ್ ಅನ್ನು ಆದಿತ್ಯ ಎಲ್ L1 ನೌಕೆ
  3. ಪ್ರಮುಖ ಏಳು ಸಾಧನೆಗಳ ಜೊತೆ ಪಿಎಸ್ಎಲ್ ವಿ ಸಿ 57 ರಾಕೆಟ್ ಪ್ರಯಾಣ
  4. ಮೊದಲು ಉಡ್ಡಯನ ಈ ಹಿಂದಿನ ಎಲ್ಲಾ ರಾಕೆಟ್ ಉಡ್ಡಯನದ ಥರವೇ ಇರುತ್ತದೆ.
  5. ಆದಿತ್ಯ ಎಲ್ 1 ಆಯುಷ್ಯ 120 ದಿನಗಳು
  6. ಸೂರ್ಯಯಾನ ಪ್ರಾಜೆಕ್ಟ್ ಶುರು ಮಾಡಿ 8 ವರ್ಷಗಳು ಆಯಿತು, ಈಗ ಉಡ್ಡಯನ ಆಗುತ್ತಿದೆ.
  7. ಆದಿತ್ಯ ಉಪಗ್ರಹವೇ ಗಗನ ನೌಕೆಯಾ ? ಇದು ನೌಕೆಯಲ್ಲ ಆದಿತ್ಯ ಎಲ್ಒನ್ ಒಂದು ಉಪಗ್ರಹ ಅಂದರೆ ಹೆಚ್ಚು ಸೂಕ್ತ. ಒಂದು ರೀತಿಯಲ್ಲಿ ಇದು ಗಗನ ನೌಕೆ ಕೂಡ. ಯಾಕೆಂದರೆ ಗಗನಕ್ಕೆ ಚಿಮ್ಮಿ ಅಲ್ಲಿ ಒಂದು ಪ್ರದೇಶದಲ್ಲಿ ತಿರುಗುತ್ತಾ ಬೆಲೆ ನಿಂತು ಪ್ರಯೋಗ ಮಾಡುವ ಕಾರಣದಿಂದ ಇದು ಗಗನ ನೌಕೆಯು ಹೌದು.
  8. ವಿಜ್ಞಾನಿಗಳ ಪ್ರಕಾರ ಇದನ್ನು ‘ಕೃತಕ ಉಪಗ್ರಹ ಪ್ರಯೋಗಾಲಯ’ ಎನ್ನಬಹುದು ಎಂದಿದ್ದಾರೆ.
  9. ಆದಿತ್ಯ ಎಲ್ಒನ್ ಅಲ್ಲಿ ಯಾವ ಇಂಧನ ಬಳಸುತ್ತದೆ ? ಅಲ್ಲಿ ಕೇವಲ ಸೋಲಾರ್ ಪ್ಯಾನಲ್ ಗಳ ಮೂಲಕ ವಿದ್ಯುತ್ ಉತ್ಪಾದಿಸಿ ಕೆಲಸ ನಿರ್ವಹಿಸುತ್ತದೆ ಆದಿತ್ಯ ಎಲ್ 1 ನೌಕೆ.
Leave A Reply

Your email address will not be published.