Interesting Facts: ಸೂರ್ಯನ ಬಗ್ಗೆ ನಮಗೆ ಗೊತ್ತಿಲ್ಲದ, ತಿಳಿದುಕೊಳ್ಳಲೇ ಬೇಕಾದ ಆಕರ್ಷಕ ವಿಷಯಗಳು !

Interesting Facts: ಭೂಮಿಯಲ್ಲಿ ಇರುವ ಸಕಲ ಜೀವರಾಶಿಗಳಿಗೆ ಮತ್ತು ಮನುಷ್ಯರಿಗೆ ಬೆಳಕನ್ನು ಮತ್ತು ಶಕ್ತಿಯನ್ನು ಒದಗಿಸಿ ಕೊಡುವುದು ಸೂರ್ಯ (Sun). ಸೂರ್ಯನೇ ನಮ್ಮ ಹುಟ್ಟಿಗೆ ಮತ್ತು ಬದುಕಿಗೆ ಕಾರಣ ಎನ್ನಬಹುದು. ಸೂರ್ಯನನ್ನು ನಾವು ನಮ್ಮ ದೇವರು ಎಂದು ಕರೆದರೆ ಅದೇ ಹೆಚ್ಚು ಸೂಕ್ತವಾದೀತು. ಇಂತಹ ಸೂರ್ಯನ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆಯಿಂದ ಈ ಲೇಖನ.

  1. ಭೂಮಿ ಮತ್ತು ಸೂರ್ಯನ ನಡುವೆ ಇರುವ ದೂರ 150 ಮಿಲಿಯನ್ ಕಿಲೋಮೀಟರು. ಅಂದರೆ, 1500 ಲಕ್ಷ ಕಿ.ಮೀಟರ್.
  2. ಈಗ ನಾವು ಕಳಿಸುವ ಆದಿತ್ಯ L1 ನೌಕೆಯು ಸೂರ್ಯನಿಂದ 1.5 ಮಿಲಿಯನ್ ಕಿಲೋಮೀಟರು ದೂರದ ತನಕ ಮಾತ್ರ ಸಾಗುತ್ತದೆ
  3. ಸೂರ್ಯನ ದ್ರವ್ಯರಾಶಿ 1.9891 × 10 ರ 30 ಪಟ್ಟು ಕಿಲೋ ಮೀಟರ್ ಗಳು.
  4. ಸೂರ್ಯನು ಭೂಮಿಯ 333,000 ಪಟ್ಟು ಅಧಿಕ ದ್ರವ್ಯರಾಶಿ ಹೊಂದಿದ್ದಾನೆ.
  5. 13 ಲಕ್ಷ ಭೂಮಿಗಳನ್ನು ತೆಗೆದುಕೊಂಡು ಹೋಗಿ ಸೂರ್ಯನ ಒಳಗೆ ತುಂಬಿಸಬಹುದು, ಅಷ್ಟು ದೊಡ್ಡ ಗಾತ್ರದ ನಕ್ಷತ್ರ ಸೂರ್ಯ.
  6. ಭೂಮಿಗೆ ಹತ್ತಿರ ಇರುವ ನಕ್ಷತ್ರ ಸೂರ್ಯ
  7. ನಮ್ಮ ಸೌರಮಂಡಲದಲ್ಲಿ ಸೂರ್ಯನೇ ದೊಡ್ಡ ವಸ್ತು.
  8. ನಮ್ಮ ಸೌರಮಂಡಲ ಅಂದರೆ, ಭೂಮಿ ಸೇರಿದಂತೆ ಎಲ್ಲ ಗ್ರಹಗಳು, ಉಪಗ್ರಹಗಳು, ಚಂದ್ರನ ತರಹದ ಡಜನ್ ಗಟ್ಟಲೆ ಇತರ ಗ್ರಹಗಳ ಚಂದ್ರಂದಿರು, ಲಕ್ಷಾಂತರ ಆಕಾಶ ಕಾಯಗಳು, ಲೆಕ್ಕ ಮಾಡಲು ಸಾಧ್ಯ ಇಲ್ಲದಷ್ಟು ಇರುವ ಉಲ್ಕೆಗಳು ಸೇರಿದರೆ ನಮ್ಮ ಸೌರಮಂಡಲ. (Solar System)
  9. ಮೇಲಿನ ಎಲ್ಲಾ ಗ್ರಹ, ಉಪಗ್ರಹ ಮತ್ತಿತರ ಆಕಾಶಕಾಯಗಳು ಸೂರ್ಯನ ಗುರುತ್ವಾಕರ್ಷಣ ಶಕ್ತಿಯಿಂದ ಬಂಧಿಸಲ್ಪಟ್ಟಿವೆ.
  10. ನಮ್ಮ ಸೌರಮಂಡಲದಲ್ಲಿ ಸೂರ್ಯನೇ ದೊಡ್ಡ ವಸ್ತು. ಸೌರಮಂಡಲದ 99.99 ಭಾಗ ಸೂರ್ಯನೇ ಆಗಿದ್ದು, ಕೇವಲ 0.1 ಭಾಗ ಮಾತ್ರ ಭೂಮಿ ಸೇರಿದಂತೆ ಇತರ ಗ್ರಹ ಮತ್ತು ಆಕಾಶ ಕಾಯಗಳು ಅಂದರೆ ಕಲ್ಪಿಸಿಕೊಳ್ಳಿ ಸೂರ್ಯ ಎಷ್ಟು ದೊಡ್ಡದಾಗಿ ಇರಬಹುದೆಂದು.
  11. ಆದರೆ ಇತರ ಸೌರಮಂಡಲದ ನಕ್ಷತ್ರಗಳಿಗೆ ಹೋಲಿಸಿದರೆ ಸೂರ್ಯ ಚಿಕ್ಕ ನಕ್ಷತ್ರ !!!
  12. ಸೂರ್ಯನಲ್ಲಿಂದ ಭೂಮಿಗೆ ಬೆಳಕು ಬರಲು ತೆಗೆದುಕೊಳ್ಳುವ ಕಾಲ 8 ನಿಮಿಷಗಳು.
  13. ಈಗ ಸೂರ್ಯ ಶಿಕಾರಿಗೆ ಹೋರಾಟ ಆದಿತ್ಯ L1 ಕಳ್ಸಿಸುವ ಸಿಗ್ನಲ್ ನಮ್ಮನ್ನು ತಲುಪಲು ತೆಗೆದುಕೊಳ್ಳುವ ಸಮಯ 5 ಸೆಕುಂಡುಗಳು.
  14. ಸೂರ್ಯನಲ್ಲಿ 92 ಭಾಗ ಇರೋದು ಹೈಡ್ರೋಜೆನ್ ಮತ್ತು 8 ಪರ್ಸೆಂಟ್ ಹೀಲಿಯಮ್ ಅನಿಲ ಇದೆ. ಇಲ್ಲಿ ನಿರಂತರವಾಗಿ ಫಿಷನ್ ಮತ್ತು ಫ್ಯೂಷನ್ ರಿಯಾಕ್ಷನ್ ಆಗುತ್ತಾ ಇರುತ್ತದೆ.
  15. ಸೂರ್ಯನ ಹೊರಗಿನ ಉಷ್ಣಾಂಶ 5,505 °C
  16. ಸೂರ್ಯನ ಒಳಗೆ, ತಿರುಳಿನ ಭಾಗದಲ್ಲಿ ಇರುವ ಉಷ್ಣತೆ 15 ಮಿಲಿಯನ್ ಡಿಗ್ರಿ ಸೆಂಟಿಗ್ರೇಡ್ ಗಳು
  17. ಸೂರ್ಯ ಒಂದು ಅಣುಬಾಂಬ್ ತರಹ. ಫ್ಯೂಷನ್ ರಿಯಾಕ್ಷನ್ ನಿರಂತರ ಆಗುತ್ತಲೇ ಇರುತ್ತದೆ.
  18. ಸೂರ್ಯ ತನ್ನ ಸುತ್ತ ಸುತ್ತಲೂ ತೆಗೆದುಕೊಳ್ಳುವ ಕಾಲ ಭೂಮಿಯ 27 ದಿನಗಳು
  19. ನಮ್ಮ ಸೌರಮಂಡಲದಲ್ಲಿ8 ಗ್ರಹಗಳಿವೆ. ಗ್ರಹಗಳು ಮತ್ತುಇತರ ಆಕಾಶಕಾಯಗಳು ಭೂಮಿಯ ಸುತ್ತ ಸುತ್ತುತ್ತವೆ.
  20. ಸೂರ್ಯ ಹುಟ್ಟಿ 4.5 ಬಿಲಿಯನ್ ವರ್ಷ ಆಗಿದೆ.
  21. ಕೆಲವೊಮ್ಮೆ ಸೂರ್ಯನ ಮೇಲ್ಮೈಯಲ್ಲಿ ಅನಿಲಗಳು ಸ್ಫೋಟಗೊಳ್ಳುತ್ತವೆ ಮತ್ತು ಅವು ಆಗ ಬಾಹ್ಯಾಕಾಶಕ್ಕೆ ಹಾರುತ್ತವೆ. ಇವುಗಳನ್ನು ಸೌರ ಜ್ವಾಲೆ ಎಂದು ಕರೆಯಲಾಗುತ್ತದೆ. ಈ ಸೌರಜ್ವಾಲೆಗಳು ಉಪಗ್ರಹಗಳಿಗೆ ಅಡ್ಡಿಪಡಿಸುತ್ತವೆ. ಆಗ ಅಂದರೆ ನಮ್ಮ ಫೋನ್‌ಗಳು, ಸ್ಯಾಟೆಲೈಟ್ ಮತ್ತು ದೂರದರ್ಶನಗಳು ಕಾರ್ಯನಿರ್ವಹಿಸದೇ ಇರಬಹುದು.

Leave A Reply

Your email address will not be published.