BPL Card Holders: ಹೊಸ ಬಿಪಿಎಲ್ ಕಾರ್ಡ್ ಇನ್ನೂ ಸಿಗೋದು ಡೌಟ್!! ಕಾರಣವೇನು ಗೊತ್ತಾ

Ration Card update government not to give permit to new ration card

Ration Card Holders: BPL ರೇಷನ್ ಕಾರ್ಡ್ (Ration Card)ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾರರಿಗೆ (Ration Card Holders) ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಬಡವರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರದಿಂದ ಪಡಿತರ ಚೀಟಿ (Ration Card)ವ್ಯವಸ್ಥೆ ಮಾಡಲಾಗಿದೆ. ಇದೀಗ, ಹೊಸದಾಗಿ ಬಿಪಿಎಲ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವ ನಿಟ್ಟಿನಲ್ಲಿ ಕೆಲವರು ನಕಲಿ ದಾಖಲೆಗಳನ್ನು ನೀಡಿ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ (BPL Card Application) ಸಲ್ಲಿಸುತ್ತಿದ್ದಾರೆ. ಈ ರೀತಿ ಮೋಸ ಮಾಡುವವರ ಪತ್ತೆಗಾಗಿ ಶೀಘ್ರದಲ್ಲೇ ಆಹಾರ ಇಲಾಖೆ ಹೊಸ ಮಾರ್ಗಸೂಚಿ (New Rules) ಬಿಡುಗಡೆ ಮಾಡಲಿದ್ದು, ಅಂಥವರ ಕಾರ್ಡನ್ನು ರದ್ದು ಮಾಡಲಾಗುತ್ತದೆ.

ರಾಜ್ಯದಲ್ಲಿ ಬಾಕಿ ಉಳಿದಿರುವ 2,95,986 ಅರ್ಜಿಗಳ ವಿಲೇವಾರಿ ಮಾಡಲು ಅನುಮತಿ ಕೋರಿ ಆಹಾರ ಇಲಾಖೆ ಸರ್ಕಾರಕ್ಕೆ ಪತ್ರ ಬರೆದು ಎರಡು ತಿಂಗಳಾದರು ಕೂಡ ಸರ್ಕಾರ ಈವರೆಗೆ ಅನುಮತಿ ನೀಡಿಲ್ಲ. ಮೇ ತಿಂಗಳಲ್ಲಿ ಚುನಾವಣಾ ನೀತಿಸಂಹಿತೆ ಕಾರಣ ಪಡಿತರ ಚೀಟಿ ವಿತರಣೆ, ಹೆಸರು ಸೇರ್ಪಡೆ, ತಿದ್ದುಪಡಿ ಸ್ಥಗಿತ ಮಾಡಲಾಗಿದೆ. ಈ ಹಿಂದೆ ಹೊಸ ರೇಷನ್ ಕಾರ್ಡ್, ಸೇರ್ಪಡೆ, ತಿದ್ದುಪಡಿಗೆ ಮನವಿ ಸಲ್ಲಿಸಿ ಇದುವರೆಗೆ ಇಲಾಖೆಗೆ ಸಲ್ಲಿಕೆಯಾದ ಒಟ್ಟು 39,04,798 ಅರ್ಜಿಗಳ ಪೈಕಿ 26,48,171 ಅರ್ಜಿಗಳು ಅನುಮೋದನೆಯಾಗಿದೆ. 9,60,641 ಅರ್ಜಿಗಳು ತಿರಸ್ಕೃತವಾಗಿದೆ.

ಅರ್ಜಿಗಳ ಅರ್ಹತೆ ಮತ್ತು ಅನರ್ಹತೆ ಬಗ್ಗೆ ಪರಿಶೀಲಿಸಬೇಕು ಇದನ್ನು ಹೊರತುಪಡಿಸಿ ಹೊಸ ಕಾರ್ಡ್ನ್ನು ಮಂಜೂರು ಮಾಡಬಾರದು ಎಂದು ಹಿಂದಿನ ಸರ್ಕಾರ ಆದೇಶ ನೀಡಿತ್ತು.ಇದರ ಅನುಸಾರ,ಬಾಕಿ ಉಳಿದಿರುವ ಅರ್ಜಿಗಳನ್ನು ಮೇಲಿನ ನಿಯಮಗಳಂತೆ ಇಲಾಖೆ ಪರಿಶೀಲಿಸಿ ಮಂಜೂರಾತಿಗೆ ಸಿದ್ಧತೆ ಮಾಡಿಕೊಂಡಿದೆ.

ಅನುಮತಿ ಸಿಕ್ಕಿಲ್ಲರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅನುಸಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕು ಎಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಪ್ರಸ್ತುತ 3,92,54,052 ಫಲಾನುಭವಿಗಳಿಗೆ 1,16,98,551 ಬಿಪಿಎಲ್ ಕಾರ್ಡ್ಗಳನ್ನು ಒದಗಿಸಲಾಗಿದೆ. ನಿಗದಿ ಪಡಿಸಿದಕ್ಕಿಂತ ಹೆಚ್ಚುವರಿಯಾಗಿ 13,27,882 ಬಿಪಿಎಲ್ ಕಾರ್ಡ್(BPL Card)ನೀಡಲಾಗಿರುವ ಪರಿಣಾಮ ವರ್ಷದಿಂದ ವರ್ಷಕ್ಕೆ ಸರ್ಕಾರದ ಮೇಲೆ ಆರ್ಥಿಕ ಹೊಡೆತ ಬೀಳುತ್ತಿದ್ದು, ಹೀಗಾಗಿ, ಹೊಸ ಬಿಪಿಎಲ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ.

ಹೊಸ ಕಾರ್ಡ್ ವಿತರಣೆಗೆ ಸರ್ಕಾರ ಒಂದು ವೇಳೆ ಅನುಮತಿ ನೀಡಿದರು ಕೂಡ ‘ಅನರ್ಹರ ಪತ್ತೆ ಮಾಡಿ, ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಆ ಬಳಿಕ ಮಾಡುವ ಸಾಧ್ಯತೆ ಹೆಚ್ಚಿದೆ. ಬಾಕಿ ಅರ್ಜಿಗಳನ್ನು ನಿಗದಿಪಡಿಸಿದ ಮಾನದಂಡ ಆಧಾರದಲ್ಲಿ ಪರಿಶೀಲಿಸಬೇಕು. ಯಾವುದೇ ಅರ್ಜಿ ಅನರ್ಹ ಎಂದಾದರೆ ಅದನ್ನು ಎಪಿಎಲ್ಗೆ ಶಿಫಾರಸು ಮಾಡಬೇಕಾಗುತ್ತದೆ.ಪ್ರತಿ ಅರ್ಜಿ ಪರಿಶೀಲಿಸುವ ಸಂದರ್ಭ ಅರ್ಜಿದಾರರು ಜಂಟಿ ಕುಟುಂಬವೇ, ಜಂಟಿ ಕುಟುಂಬದಿಂದ ಪ್ರತ್ಯೇಕವಾಗಲು ಅರ್ಜಿ ಸಲ್ಲಿಸಿದ್ದಾರಾ ?ಎಪಿಎಲ್ ಚೀಟಿ ಹೊಂದಿರುವವರೇ ಇಲ್ಲವೇ ಯಾವುದಾದರೂ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೇ ಎಂದು ಪರಿಶೀಲನೆ ನಡೆಸಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: Actress Oviya : ನಟಿ ಓವಿಯಾ ಸಲಿಂಗಕಾಮಿ!!! ನಟಿಯಿಂದ ಬಂತು ಶಾಕಿಂಗ್‌ ರಿಪ್ಲೈ!

Leave A Reply

Your email address will not be published.