Home Karnataka State Politics Updates Priyank kharge: ಉಸ್ತುವಾರಿ ಸಚಿವರೆಂದೂ ನೋಡದೆ ದುಬಾರಿ ದಂಡದ ಚೀಟಿ ಹರಿದ ಅಧಿಕಾರಿ: ಪ್ರಿಯಾಂಕಾ ಖರ್ಗೆ...

Priyank kharge: ಉಸ್ತುವಾರಿ ಸಚಿವರೆಂದೂ ನೋಡದೆ ದುಬಾರಿ ದಂಡದ ಚೀಟಿ ಹರಿದ ಅಧಿಕಾರಿ: ಪ್ರಿಯಾಂಕಾ ಖರ್ಗೆ ಏನ್ ಮಾಡಿದ್ರು ಅಂತ ತಪ್ಪು ?

Priyank kharge

Hindu neighbor gifts plot of land

Hindu neighbour gifts land to Muslim journalist

Priyank kharge : ಕಲಬುರಗಿ (Kalaburagi) ಜಿಲ್ಲಾ ಉಸ್ತುವಾರಿ ಸಚಿವರಿಗೇ ದಂಡದ ಚೀಟಿ ಹರಿಯಲಾಗಿದೆ. ಬ್ಯಾನರ್ (Banner) ಹಾಕಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ 5,000 ರೂ. ದಂಡ ವಿಧಿಸಲಾಗಿದೆ. ಅಷ್ಟಕ್ಕೂ ಈ ದಂಡ ವಿಧಿಸಿದ್ದು ಯಾರು ಗೊತ್ತಾ ?

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿದ್ದ ಸಂದರ್ಭದಲ್ಲಿ ಖರ್ಗೆ ಬೆಂಬಲಿಗರು ಕಲಬುರಗಿ ನಗರದ ಹೊರವಲಯದ ಬಂಗರಗಾ ಕಲ್ಯಾಣ ಮಂಟಪದಲ್ಲಿ ಖರ್ಗೆಗೆ ಸ್ವಾಗತ ಕೋರುವ ಹಿನ್ನೆಲೆಯಲ್ಲಿ ಬ್ಯಾನರ್ ಹಾಕಿದ್ದರು. ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಖರ್ಗೆಗೆ ದಂಡ ಹಾಕಲಾಗಿದೆ. ಪಾಲಿಕೆಯು ಸಚಿವರಿಗೆ 5,000 ರೂಪಾಯಿ ದಂಡ ವಿಧಿಸಿದ್ದು ಕುತೂಹಲದ ವಿಷಯವಾಗಿದೆ.

ತಮಗೆ ದಂಡ ಬಿದ್ದ ವಿಷಯವನ್ನು ಕಳಬುರುಗಿ ಉಸ್ತುವಾರಿ ಸಚಿವರು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಅವರು ಪಾಲಿಕೆಯ ಈ ನೇರ ಕ್ರಮವನ್ನು ಬೆಂಬಲಿಸಿದ್ದಾರೆ ಮತ್ತು ದಂಡದ ಮೊತ್ತವನ್ನು ಪಾವತಿಸಲು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಟರ್ಮಿನೇಟರ್ ಚಿತ್ರದಲ್ಲಿ ಕಾಣಿಸಿಕೊಂಡ ನರೇಂದ್ರ ಮೋದಿ – ವೈರಲ್ ಆಗಿದೆ ಬಿಜೆಪಿ ಪೋಸ್ಟರ್ !