Narendra Modi: ಟರ್ಮಿನೇಟರ್ ಚಿತ್ರದಲ್ಲಿ ಕಾಣಿಸಿಕೊಂಡ ನರೇಂದ್ರ ಮೋದಿ – ವೈರಲ್ ಆಗಿದೆ ಬಿಜೆಪಿ ಪೋಸ್ಟರ್ !

Political news BJP poster features PM as 'Terminator' ahead of Opposition meet

Share the Article

Narendra Modi: ಟರ್ಮಿನೇಟರ್ ಚಿತ್ರ ನೋಡದವರು ಯಾರು ? ಹಾಲಿವುಡ್ ಸೂಪರ್ ಡ್ಯೂಪರ್ ಕಾಲ್ಪನಿಕ ಸೈನ್ಸ್ ಚಿತ್ರದ ಪಾತ್ರದಲ್ಲಿ ಅರ್ನಾಲ್ಡ್ ಶ್ಚುಜ್ ನೆಂಗರ್ ಆಗಿ ಮುಂದಿನ ಬಾರಿ ನರೇಂದ್ರ ಮೋದಿಯವರು (Narendra Modi ) ನಟಿಸಲಿದ್ದಾರೆ. ಚಿತ್ರದ ಫಸ್ಟ್ ಟೀಸರ್ ಅನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಪಟ್ಟಿದೆ. ಇದೀಗ ಮೋದಿ ಅವರ ಟರ್ಮಿನೇಟರ್ ಲುಕ್ ದೊಡ್ಡ ಆಲೆಯನ್ನು ಸೃಷ್ಟಿಸುತ್ತಿದೆ.

2024 ಐ ವಿಲ್ ಬಿ ಬ್ಯಾಕ್, ದ ಟರ್ಮಿನೇಟರ್ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ನಿಜಕ್ಕೂ ಇದು ಟರ್ಮಿನೇಟರ್ ಚಿತ್ರದ ಸೀಕ್ವೆಲ್ ಅಲ್ಲ. ಬದಲಾಗಿ ಟರ್ಮಿನೇಟರ್ ಸ್ಟೈಲಿನಲ್ಲಿ ಮೋದಿ ಮತ್ತೆ 2024 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬರುತ್ತಾರೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ಪ್ರಯತ್ನವಾಗಿ ಬಿಜೆಪಿಯು ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

Opposition things PM Modi can be defeated. Dream on. The Terminator always wins. ‘ ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂದು ಪ್ರತಿಪಕ್ಷಗಳು ಭಾವಿಸುತ್ತಿವೆ. ಕನಸು ಕಾಣಿ ! ಟರ್ಮಿನೇಟರ್ ಯಾವಾಗಲೂ ಗೆಲ್ಲುತ್ತಾನೆ.’ ಎಂದು ಶೀರ್ಷಿಕೆ ಬರೆಯಲಾಗಿದೆ.

2024ರ ಲೋಕಸಭಾ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇರುವಂತೆಯೇ ರಾಜಕೀಯ ಚಟುವಟಿಕೆಗಳು ಎಲ್ಲಾ ಪಕ್ಷಗಳಲ್ಲೂ ಸಾಲಿಗೂ ಶುರುವಾಗಿದೆ ೋದಿ ನೇತೃತ್ವದ ಎನ್‌ಡಿಎಗೆ ಪರ್ಯಾಯವಾಗಿ ಕಾಂಗ್ರೆಸ್ ಮತ್ತು ಇತರ ಸಮಾನ ಮನಸ್ಕ ಪ್ರತಿಪಕ್ಷಗಳು ನಿರ್ಮಿಸಿರುವ ಇಂಡಿಯಾ ಬಣಗಳು ಇಂದು ಮತ್ತು ನಾಳೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈಯಲ್ಲಿ ಹೊಸ ಕಾರ್ಯತಂತ್ರ ಹೊಸೆಯಲು ಸಭೆ ಸೇರುತ್ತಿದ್ದು, ಅದನ್ನು ಗೇಲಿ ಮಾಡಲು ಬಿಜೆಪಿ ಟರ್ಮಿನೇಟರ್ ಪೋಸ್ಟರ್ ರಿಲೀಸ್ ಮಾಡಿದೆ.

ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಸೆಲೆಬ್ರಿಟಿಗಳು ! ಹೇಗೆ ಗೊತ್ತಾ, ನಿಮಗೂ ಅವಕಾಶ ಇದ್ಯಾ?

Leave A Reply