LPG ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಇಳಿಕೆ! BPL ಕಾರ್ಡ್ ದಾರರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ!
Puducherry news residents to get cooking gas subsidy of rupees 350 BPL consumer to get rupees 700 subsidy
LPG Gas Cylinder Price:ಸಾಮಾನ್ಯ ಜನತೆಗೆ ದಿನಂಪ್ರತಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಈ ನಡುವೆ ಜನರಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡುವ ಸುದ್ದಿ ಈಗಾಗಲೇ ಪ್ರಕಟವಾಗಿದೆ. ರಾಜ್ಯದಲ್ಲಿ LPG ಸಿಲಿಂಡರ್ ದರ ಭಾರಿ ಇಳಿಕೆ ಕಂಡಿದ್ದು, ಈ ನಡುವೆ ಪುದುಚೇರಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ(LPG Gas Cylinder Price)ಬೆಲೆ ಗಣನೀಯವಾಗಿ ಇಳಿಕೆ ಕಾಣಲಿದೆ.
ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದು, ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸಾಮಿ ಕೇಂದ್ರದ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕೇಂದ್ರವು(Central Government)ಎಲ್ಲಾ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ (LPG Cylinder)ಮೇಲೆ 200 ರೂ.ಗಳ ಸಬ್ಸಿಡಿಯನ್ನು ಘೋಷಣೆ ಮಾಡಿದ್ದು, ಇದರ ಜೊತೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ (PMUY)ಫಲಾನುಭವಿಗಳು ಈಗಾಗಲೇ 200 ರೂ. ಸಬ್ಸಿಡಿಯ ಪ್ರಯೋಜನ ಪಡೆಯುತ್ತಾರೆ. ಈಗ 200 ರೂ. ಹೆಚ್ಚುವರಿ ಸಬ್ಸಿಡಿ ಒಟ್ಟು 400 ರೂ. ಸಬ್ಸಿಡಿ ಪಡೆಯಲಿದ್ದಾರೆ. ಹೀಗಾಗಿ, ಪುದುಚೇರಿಯಲ್ಲಿ 1,115 ರೂಪಾಯಿಗಳ ಬೆಲೆಯ 14.2-ಕೆಜಿ ಎಲ್ಪಿಜಿ ಸಿಲಿಂಡರ್ ಈಗ ಹಳದಿ ಕಾರ್ಡ್ ಹೊಂದಿರುವವರಿಗೆ 765 ರೂ.ಗೆ ದೊರೆತರೆ ರೆಡ್ ಕಾರ್ಡ್ ಹೊಂದಿರುವವರಿಗೆ 415 ರೂ.ಗೆ ದೊರೆಯಲಿದೆ.
ಗೃಹ ಬಳಕೆ ಗ್ರಾಹಕರು ಪ್ರತಿ ಸಿಲಿಂಡರ್ಗೆ 350 ರೂ.ಗಳ ಸಬ್ಸಿಡಿಯನ್ನು ಪಡೆಯುವ ಸೌಕರ್ಯ ಹೊಂದಿದ್ದು, ಬಿಪಿಎಲ್(BPL)ಗ್ರಾಹಕರು 700 ರೂ.ಗಳ ಸಬ್ಸಿಡಿ (Subsidy)ಪಡೆಯಲು ಅನುವು ಮಾಡಿಕೊಡಲಾಗಿದೆ. ಪುದುಚೇರಿ ಸರ್ಕಾರ ವಾರ್ಷಿಕವಾಗಿ ಗರಿಷ್ಠ 12 ಸಿಲಿಂಡರ್ಗಳಿಗೆ ಸಬ್ಸಿಡಿಯನ್ನು ಬಿಡುಗಡೆ ಮಾಡಿದ್ದು, ಹಳದಿ ಪಡಿತರ ಚೀಟಿದಾರರಿಗೆ ಪ್ರತಿ ಸಿಲಿಂಡರ್ಗೆ ರೂ 150 ರೂ. ಮತ್ತು ಕೆಂಪು ಪಡಿತರ ಚೀಟಿ ಹೊಂದಿರುವವರ ಸಿಲಿಂಡರ್ಗೆ 300 ರೂಪಾಯಿಗೆ ದೊರೆಯಲಿದೆ.
ಇದನ್ನೂ ಓದಿ: School Dress Code: ಶಾಲೆಗಳಲ್ಲಿ ಅಬಯಾ ಡ್ರೆಸ್ ನಿಷೇಧ!