ಧರ್ಮಸ್ಥಳದ ಬಗ್ಗೆ ಅವಮಾನಕರ ಹೇಳಿಕೆ ನೀಡದಂತೆ ತಿಮರೋಡಿಗೆ ಹೈಕೋರ್ಟ್ ತಾಕೀತು, ಏನಿರಲಿದೆ ತಿಮರೋಡಿ ಮುಂದಿನ ನಡೆ ?

ಬೆಂಗಳೂರು: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ (Soujanya Rape and Murder) ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕೋರ್ಟು ಆದೇಶ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದೆ.

ಇನ್ನು ಮುಂದಕ್ಕೂ ಇದಕ್ಕೆ ತಪ್ಪಿದಲ್ಲಿ ಡಿ.ಜಿ. ಮತ್ತು ಐ.ಜಿ., ಸರಕಾರದ ಮುಖ್ಯ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಪೋಲಿಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯ ಆದೇಶ ಹೊರಡಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಗ್ಗಡೆ ಕುಟುಂಬಸ್ಥರ ಪರವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಉದಯ ಹೊಳ್ಳ ಹಾಗೂ ರಾಜಶೇಖರ್ ಹಿಲ್ಯಾರು ವಾದಿಸಿದ್ದರು. ಕಳೆದ ವಾರವೇ ಹೆಗ್ಗಡೆ ಕುಟುಂಬ ಕೋರ್ಟ್ ಮೆಟ್ಟಲು ಹತ್ತಿತ್ತು. ಇದೀಗ ಮಹೇಶ್ ಶೆಟ್ಟಿಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ಆದೇಶ ನೀಡಿದೆ.

ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಅವರು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಇನ್ನಿಲ್ಲದ ಮೂಡಿದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ಮುಂದಿನ ನಡೆ ಏನಿರಬಹುದು ? ತಿಮರೋಡಿಯವರ ಮುಂದಿನ ಹೋರಾಟಗಳಲ್ಲಿ ಮತ್ತು ಭಾಷಣಗಳಲ್ಲಿ ಹೆಗ್ಗಡೆ ಕುಟುಂಬವನ್ನು ಅವರು ಪ್ರಸ್ತಾಪಿಸುತ್ತಾರಾ? ಎನ್ನುವ ಬಗ್ಗೆ ಜನರಲ್ಲಿ ತೀವ್ರ ಕುತೂಹಲ ಮೂಡಿದೆ. ಇನ್ನು ಮೂರು ದಿನಗಳಲ್ಲಿ ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಅದರತ್ತ ಎಲ್ಲರ ಚಿತ್ತ ನೆಟ್ಟಿದೆ.

Leave A Reply

Your email address will not be published.