Heart Attack: ಈ ಬ್ಲಡ್ ಗ್ರೂಪ್ ನವರಿಗೆ ಈ ರೋಗದ ಅಪಾಯ ಹೆಚ್ಚು! ನಿಮ್ಮ ಬ್ಲಡ್ ಗ್ರೂಪ್ ಇದೆನಾ?

Health news The risk of this disease is high for this blood group

Heart Attack: ಮನುಷ್ಯನ ದೇಹದಲ್ಲಿ ಹೃದಯವು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇನ್ನು ದೇಹದ ವಿವಿಧ ಭಾಗಗಳಲ್ಲಿ ಅಸ್ವಸ್ಥತೆ. ತೋಳುಗಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ನೋವು ಕಾಣುವುದು ಹೃದಯಾಘಾತವಾದಾಗ ಗಮನಿಸಬೇಕಾದ ಲಕ್ಷಣಗಳಾಗಿವೆ.

ಇತ್ತೀಚಿನ ಆಹಾರ ಕ್ರಮ, ಆಧುನಿಕ ಮಾದರಿ ಜೀವನಶೈಲಿ ಹಾಗೂ ಕೆಟ್ಟ ಅಭ್ಯಾಸ, ಆಲಸ್ಯ ಪ್ರವೃತ್ತಿಗಳಿಂದಾಗಿ ಇಂದು ಅನೇಕ ಖಾಯಿಲೆಗಳು ಮನುಷ್ಯರನ್ನು ಕಾಡುತ್ತವೆ. ಜೊತೆಗೆ ನಮ್ಮ ಸುತ್ತಲಿನ ಕಲುಷಿತ ವಾತಾವರಣವೂ ಇದಕ್ಕೆ ಕಾರಣವಾಗಿದೆ. ನಮ್ಮ ಜೀವನಕ್ರಮದಿಂದ ಹಾಗೂ ವಾತಾವರಣದಿಂದ ರೋಗ (Disease) ಹರಡುವುದು ಸಹಜ ಆಗಿದೆ. ಆದರೆ ರಕ್ತ (Blood) ದ ಗುಂಪಿಗೆ ಅನುಸಾರವಾಗಿಯೂ ರೋಗಗಳು ಆವರಿಸಿಕೊಳ್ಳುತ್ತವೆ ಎನ್ನುವುದು ಕೂಡ ಅಷ್ಟೇ ಸತ್ಯ.

ಮನುಷ್ಯನ ರಕ್ತ ದ ಗುಂಪು ವಿಭಿನ್ನ ಗುಂಪುಗಳು ಬೇರೆ ಬೇರೆ ಸ್ವಭಾವವನ್ನು ಕೂಡ ಹೊಂದಿರುತ್ತವೆ. ಇಂತಹ ರಕ್ತದ ಸ್ವಭಾವ (nature) ವೇ ಮನುಷ್ಯನ ದೇಹ ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನ ಬ್ಲಡ್ ಗ್ರೂಪ್ ಕಾರಣದಿಂದಲೇ ಎಷ್ಟೋ ರೋಗಗಳಿಗೆ ಬಲಿಯಾಗುತ್ತಾನೆ. ಇಂದು ನಾವು ಯಾವ ಯಾವ ಬ್ಲಡ್ ಗ್ರುಪ್ ಹೊಂದಿರುವ ಜನರು ಯಾವ ರೀತಿಯ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ನೋಡೋಣ.

ಹೃದಯಾಘಾತ (Heart Attack) ಮತ್ತು ಹೃದಯಕ್ಕೆ ಸಂಬಂಧಿಸಿದ ತೊಂದರೆ:

ಎ, ಬಿ ಮತ್ತು ಎಬಿ ಬ್ಲಡ್ ಗ್ರುಪ್ ಹೊಂದಿರುವ ಜನರಲ್ಲಿ ಎಬಿಓ ಜೀನ್ ಇರುತ್ತದೆ. ಈ ರಕ್ತದ ಗುಂಪನ್ನು ಹೊಂದಿರುವ ಜನರು ಕಲುಷಿತ ವಾತಾವರಣದಲ್ಲಿ ವಾಸ ಮಾಡಿದಾಗ ಅವರಿಗೆ ಉಳಿದ ರಕ್ತ ಗುಂಪುನವರಿಗಿಂತ ಹೆಚ್ಚು ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ರಕ್ತದ ಗುಂಪು A ಅಥವಾ B ಹೊಂದಿರುವ ಜನರು O ಗುಂಪಿನ ರಕ್ತಕ್ಕಿಂತ ಹೃದಯಾಘಾತದ ಶೇಕಡಾ 8ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಈ ರಕ್ತದ ಗುಂಪು ಹೃದಯಾಘಾತ ಮತ್ತು ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳಿಗೆ ಹೆಚ್ಚು ಒಳಗಾಗುತ್ತೆ. ಪೆರಿಫೆರಲ್ ಆರ್ಟರಿ ಡಿಸೀಸ್ ಎಂಬುದು ಪ್ಲೇಕ್ ನಿರ್ಮಾಣದಿಂದಾಗಿ ರಕ್ತನಾಳಗಳ ಕಿರಿದಾಗುವಿಕೆ ಅಥವಾ ತಡೆಗಟ್ಟುವಿಕೆಗೆ ಸಂಬಂಧಿಸಿದ ಒಂದು ಸ್ಥಿತಿಯಾಗಿದೆ. ಇದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಕ್ಲಾಡಿಕೇಶನ್ ಎಂಬ ಸ್ಥಿತಿಯನ್ನು ಉಂಟುಮಾಡಬಹುದು. ದೇಹದ ಕೆಳಭಾಗದಲ್ಲಿರುವ ರಕ್ತನಾಳಗಳು ಕಿರಿದಾದಾಗ ಅಥವಾ ರಕ್ತ ಹರಿವು ಸರಿಯಾಗಿ ಆಗದೇ ಹೋದಾಗ ಈ ಸ್ಥಿತಿ ನಿರ್ಮಾಣವಾಗುತ್ತದೆ.

ಕ್ಯಾನ್ಸರ್ (Cancer):

ಹಿಂದಿನ ಕಾಲದಲ್ಲಿ ತೀರ ಅಪರೂಪವಾಗಿದ್ದ ಕ್ಯಾನ್ಸರ್ ಖಾಯಿಲೆ ಈಗ ಎಲ್ಲೆಂದರಲ್ಲಿ ಕಾಣುತ್ತಿದೆ. ಉಳಿದ ರಕ್ತದ ಗುಂಪಿನವರಿಗಿಂತ ಎ ರಕ್ತದ ಗುಂಪಿನವರಿಗೆ ಹೊಟ್ಟೆಯ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಂತ ಎ ರಕ್ತ ಗುಂಪಿನವರಿಗೆ ಮಾತ್ರ ಕ್ಯಾನ್ಸರ್ ಆಗುತ್ತೆ ಎಂದೇನಿಲ್ಲ ಇದರ ಹೊರತಾಗಿ ಇನ್ನೂ ಅನೇಕ ಕಾರಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ.

ಮೆದುಳಿನ ಕಾರ್ಯ ಮತ್ತು ನೆನಪಿನ ಶಕ್ತಿಯ ಸಮಸ್ಯೆ:

ಎ, ಬಿ ಮತ್ತು ಎಬಿ ಬ್ಲಡ್ ಗ್ರುಪ್ ನವರಿಗೆ ಸ್ಟ್ರೋಕ್ ಅಪಾಯವೂ ಅಧಿಕವಾಗಿರುತ್ತದೆ. ಮೆದುಳು ಚೆನ್ನಾಗಿ ಕೆಲಸ ಮಾಡಿದಾಗ ನೆನಪಿನ ಶಕ್ತಿ ಕೂಡ ಚೆನ್ನಾಗಿರುತ್ತದೆ. ಓ ರಕ್ತದ ಗುಂಪಿಗೆ ಹೋಲಿಸಿದರೆ ಎ, ಬಿ ಮತ್ತು ಎಬಿ ರಕ್ತದ ಗುಂಪಿನ ಜನರಿಗೆ ನೆನಪಿನ ಶಕ್ತಿಯ ಕೊರತೆ ಮತ್ತು ಮೆದುಳಿಗೆ ಸಂಬಂಧಪಟ್ಟ ತೊಂದರೆಗಳು ಹೆಚ್ಚಿರುತ್ತವೆ.

ಒತ್ತಡ (Stress):

ಚಿಕ್ಕ ಚಿಕ್ಕ ವಿಷಯಕ್ಕೂ ಹೆಚ್ಚು ಟೆನ್ಶನ್ ಒತ್ತಡ ಉಂಟಾಗಲು ಅವರ ರಕ್ತದ ಗುಂಪು ಕಾರಣವಾಗಿದೆ. ಎ ಮಾದರಿಯ ರಕ್ತದ ಗುಂಪನ್ನು ಹೊಂದಿದವರಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಿರುತ್ತದೆ. ಕಾರ್ಟಿಸೋಲ್ ಒತ್ತಡ ಉಂಟುಮಾಡುವ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಎ ಬ್ಲಡ್ ಗ್ರುಪ್ ಹೊಂದಿದವರಲ್ಲಿ ಹೆಚ್ಚಿನ ಒತ್ತಡ ಇರುತ್ತದೆ. ಅಂತಹ ಒತ್ತಡದಿಂದ ಹೊರಬರುವುದೂ ಅವರಿಗೆ ಕಷ್ಟವಾಗುತ್ತದೆ.

ಇದನ್ನೂ ಓದಿ: ರೋಡಿಗಿಳಿಯಲಿದೆ 2024 ರಂದು 4 ಪ್ರೀಮಿಯಂ ಬೈಕ್!!! ಯಾವುದೆಲ್ಲ, ಬಜೆಟ್ ಫ್ರೆಂಡ್ಲಿ ವಾಹನ ಖರೀದಿಗೆ ತಯಾರಾಗಿ!!!

Leave A Reply

Your email address will not be published.