ಸೌಜನ್ಯ ಹೋರಾಟದ ಸ್ಥಳಕ್ಕೆ ‘ ತಾಂಟ್ರೆ, ಬಾ ನೀ ತಾಂಟ್ರೆ ‘ ಎಂದು ಬರುತ್ತಿರುವ ಮಹಿಳೆಯರು ! ಒಂದು ಹೋರಾಟದ ಜಾಗದಲ್ಲೇ ಯಾಕೆ ಬೇಕು ಪ್ರತಿ ಹೋರಾಟ ?!
Sowjanya Case: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ (Sowjanya case) ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹ ಕೇಳಿಬರುತ್ತಿದ್ದು, ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಅಂತೆಯೇ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಉಡುಪಿಯಲ್ಲಿ ಪ್ರತಿಭಟನೆ ನಡೆದಿದ್ದು, ಉಡುಪಿ ಕೃಷ್ಣ ಮಠದ ಮುಂಭಾಗದಿಂದ ಪ್ರತಿಭಟನೆ ಮೆರವಣಿಗೆ ಆರಂಭವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ಪ್ರತಿಭಟನಾ ಸಭೆ ನಡೆದಿದೆ.
Money Tips : ಮನೆಯ ಆರ್ಥಿಕ ಸಮಸ್ಯೆಗೆ ನಿಮ್ಮಲ್ಲಿರುವ ಈ ಅಭ್ಯಾಸಗಳೇ ಕಾರಣ !
ಆದರೆ, ಪ್ರತಿಭಟನೆ ವೇಳೆ ಕೆಲ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವವರ ಜತೆ ‘ ತಾಂಟ್ರೆ, ಬಾ ನೀ ತಾಂಟ್ರೇ ‘ ಎಂದು ತಾಂಟಲಿಕ್ಕೆ ಬರುತ್ತಿರುವುದು ಕಂಡುಬಂದಿದೆ. ಎಲ್ಲೆಲ್ಲಿ ಸೌಜನ್ಯ ಅಪರಾ ಪ್ರತಿಭಟನೆ ನಡೆಯುತ್ತದೋ ಅಲ್ಲಿಗೆ ಬರುವ ಧರ್ಮಸ್ಥಳದ ಪರವಾಗಿ ಜೈಕಾರ ಹಾಕುವ ಬಾಡಿಗೆ ಗುಂಪೊಂದು ಪ್ರತ್ಯಕ್ಷವಾಗುವ ವಿಚಾರ ಭಾರೀ ಸುದ್ದಿ ಆಗುತ್ತಿದೆ.
ಉಡುಪಿಯ ಪ್ರತಿಭಟನಾ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಒಟ್ಟಾಗಿದ್ದರು. ಈ ಪ್ರತಿಭಟನೆ ಮಧ್ಯೆ ಧರ್ಮಸ್ಥಳದ ಪರವಾಗಿ ನೂರಾರು ಮಹಿಳೆಯರು ಆಗಮಿಸಿ ಕ್ಷೇತ್ರದ ಪರವಾಗಿ ಜೈಕಾರ ಕೂಗಿದ್ದಾರೆ. ಸೌಜನ್ಯಾ ಪರ ಹೋರಾಟ ನಡೆಸುವವರ ಬಳಿ ವಿರೋಧಿ ಗುಂಪು ಬಂದು ಗದ್ದಲ ಎಬ್ಬಿಸಲು ಪ್ರಯತ್ನಿಸಿದ್ದು ಗೊತ್ತಾಗಿದೆ. ಕೊನೆಗೆ ಅಲ್ಲಿದ್ದ ಇನ್ಸ್ಪೆಕ್ಟರ್ ಜೋರಾಗಿ ದಬಾಯಿಸಿ ಅವರನ್ನು ಬದಿಗೆ ಸರಿಸಿದ್ದಾರೆ.
Peepapl Tree : ಅಶ್ವತ್ಥ ಮರವನ್ನು ಯಾವಾಗ ಪೂಜಿಸಿದ್ರೆ ಉತ್ತಮ?
ಧರ್ಮಸ್ಥಳ ದೇವಸ್ಥಾನದ ಪರ ಮಹಿಳೆಯರು ಜಮಾಯಿಸಿ ಅಪಪ್ರಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದು, ಪೊಲೀಸರು ಮಹಿಳೆಯರನ್ನು ಪ್ರತಿಭಟನಾ ಸ್ಥಳದಿಂದ ಹೊರಗೆ ಕಳುಹಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಎಬ್ಬಿಸಲು ಬಂದ ಗುಂಪಿಗೆ ಅಲ್ಲಿದ್ದ ಇನ್ಸ್ಪೆಕ್ಟರ್ ಜೋರಾಗಿ ಅವಾಜ್ ಹಾಕಿ ದಬಾಯಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಸೌಜನ್ಯ ಪರ ಹೋರಾಟ ನಡೆಯುವ ಸ್ಥಳಗಳಿಗೆ ಹೆಗ್ಗಡೆ ಬೆಂಬಲಿತ ಗುಂಪು ಹೋಗಿ ಅಲ್ಲಿ ಪ್ರತಿ ಹೋರಾಟ ನಡೆಸುತ್ತಿರುವುದು ಕಂಡು ಬರುತ್ತಿದೆ. ಮೊನ್ನೆ ವಿಹಿಪ ಭಜರಂಗದಳ ಪಾದಯಾತ್ರೆ ಸಂದರ್ಭ ಕೂಡಾ ಸೌಜನ್ಯ ಅಮ್ಮ ಕುಸುಮಾವತಿಯವರು ಅಣ್ಣಪ್ಪ ದೈವದ ಬಳಿ ಪ್ರಾರ್ಥನೆ ಸಲ್ಲಿಸುವ ಸಂದರ್ಭ ಕೂಡಾ ಧರ್ಮಸ್ಥಳದಲ್ಲಿ ಎದುರಿಗೆ ಹೆಗ್ಗಡೆ ಪರ ಒಂದು ಗುಂಪು ಜಮಾಯಿಸಿಬಿಟ್ಟಿತ್ತು. ಅಲ್ಲದೆ, ಅಂದು ಹಿಂದೂ ಕಾರ್ಯಕರ್ತರನ್ನೇ ಪೊಲೀಸರು ಒಳಗೆ ಬಿಟ್ಟಿರಲಿಲ್ಲ. ಧರ್ಮಸ್ಥಳದ ದ್ವಾರದ ಬಳಿ ಹಿಂದೂಗಳಿಗೆ ದಿಗ್ಬಂಧನ ಹಾಕಿ ಅಲ್ಲಿಂದಲೇ ಹೊರಕ್ಕೆ ಕಳಿಸಲಾಗಿತ್ತು. ಒಂದು ಗುಂಪು ಪ್ರತಿಭಟನೆ ನಡೆಸುವಾಗ, ಇನ್ನೊದು ಗುಂಪು ಅಲ್ಲೇ ಕೌಂಟರ್ ಪ್ರತಿಭಟನೆ ನಡೆಸೋದು ಎಷ್ಟು ಸರಿ ? ಬೇಕಿದ್ದರೆ ಇನ್ನೊಂದು ಕಡೆ ಮತ್ತೊಂದು ದಿನ ಪ್ರತಿಭಟನೆ ನಡೆಸಲಿ, ಅದು ಬಿಟ್ಟು ಕ್ಲಾಶ್ ಗೆ ಅವಕಾಶ ಆಗುವಂತೆ ಒಂದೇ ಕಡೆ 2 ಗುಂಪುಗಳ ಸಮಾವೇಶ ಒಳ್ಳೆಯದಲ್ಲ.
ಇಂಟೆರೆಸ್ಟಿಂಗ್ ಇತಿಹಾಸದ ಕಥೆಗಳು
ಸಂವಿಧಾನ ಎಲ್ಲರಿಗೂ ಸಮಾನವಾಗಿ ಪ್ರತಿಭಟನೆ ನಡೆಸಲು ಅಧಿಕಾರ ಕೊಟ್ಟಿದೆ. ಪ್ರತಿಭಟನೆ- ಪರ -ವಿರೋಧ- ಎಲ್ಲಾ ರೀತಿಯ ಹೋರಾಟಗಳು ನಡೆಯಲಿ. ಆದರೆ, ಒಂದು ಪ್ರತಿಭಟನೆ ನಡೆದ ಜಾಗಕ್ಕೆ ಇನ್ನೊಬ್ಬರು ಹೋಗಿ ಅಲ್ಲೇ ಘೋಷಣೆ ಕೂಗುವುದು ಎಷ್ಟು ಸರಿ? ನೇರ ಸಂತ್ರಸ್ತ ಕುಟುಂಬಗಳು ಅಂತಹ ಕೆಲಸ ಮಾಡಿದರೆ, ಅದಕ್ಕೆ ಒಂದು ಕಾರಣವಾದರೂ ಉಂಟು. ಅದು ಬಿಟ್ಟು ಮಹಿಳೆಯರನ್ನು ಕರೆತಂದು ಹೊಂಚು ಹಾಕಿ ಮಾಡಿಸುವ ಈ ಕೃತ್ಯದ ಬಗ್ಗೆ ಪೊಲೀಸರು ಎಚ್ಚರ ವಹಿಸಬೇಕಾಗಿದೆ.