Flight: ವಿಮಾನದಲ್ಲಿ ಹೊಸ ಪ್ರಯೋಗ; ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ!! ಏನಿದೆ? ಏನಿರಲ್ಲ?

International news airline launches only adult section for international flight

Flight: ವಯಸ್ಕರೇ ಈ ಮಾಹಿತಿ ನಿಮಗಾಗಿ, ವಿಮಾನದಲ್ಲಿ ಹೊಸ ಪ್ರಯೋಗವಾಗಿದೆ. ಇನ್ನು ಮುಂದೆ ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ. ಹೌದು, ವಿಮಾನದಲ್ಲೂ ವಯಸ್ಕರ ವಿಭಾಗವನ್ನು ಪ್ರಾರಂಭ ಮಾಡುವ ಮೂಲಕ ಏರ್​ಲೈನ್​ ಸಂಸ್ಥೆಯೊಂದು (Airline company) ಪ್ರಯಾಣಿಕರಿಗೆ ಹೊಸ ಆಫರ್​ (offer) ನೀಡುತ್ತಿದೆ. ಹಾಗಿದ್ರೆ ಏನಿದರ ಸಂಪೂರ್ಣ ವಿವರಣೆ? ಇಲ್ಲಿದೆ ನೋಡಿ.

ಏಕಾಂಗಿಯಾಗಿ ವಿಮಾನದಲ್ಲಿ (Flight) ಪ್ರಯಾಣಿಸುವ ವಯಸ್ಕರಿಗೆ ಮಕ್ಕಳು ಅಳುವ ಶಬ್ದ ಸೇರಿದಂತೆ ಇತರ ಕಿರಿಕಿರಿ, ಸಮಸ್ಯೆಗಳು ಉಂಟಾಗಬಾರದು. ಇಂತಹ ಅಡಚಣೆಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ವಯಸ್ಕರಿಗೆ ಮಾತ್ರ ಎಂಬ ಹೊಸ ವಿಭಾಗವನ್ನು ಏರ್​ಲೈನ್​ ಶುರು ಮಾಡಲು ಮುಂದಾಗಿದೆ.

ಟರ್ಕಿಶ್​-ಡಚ್​ ಲೀಷರ್​ ಕೊರೆಂಡನ್ ಏರ್‌ಲೈನ್ಸ್ ಈ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದು, ನವೆಂಬರ್​ ತಿಂಗಳಿನಿಂದ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆ್ಯಮ್​ಸ್ಟರ್​​ಡ್ಯಾಂ ಹಾಗೂ ಕುರಾಕೊ ನಡುವೆ ಸಂಚರಿಸುವ ವಿಮಾದಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ.

ಮಕ್ಕಳು ಮುಕ್ತ ವಾತಾವರಣವನ್ನು ಬಯಸುವ 16 ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಈ ಯೋಜನೆ ಅನ್ವಯವಾಗಲಿದೆ. ಈ ಯೋಜನೆಯ ಅಡಿಯಲ್ಲಿ ಕೊರೆಂಡನ್ ಏರ್​ಬಸ್​-350ಯಲ್ಲಿ ಕೆಲವು ಆಸನಗಳನ್ನು ಇದಕ್ಕಾಗಿ ಮೀಸಲಿಡಲಾಗುತ್ತಿದೆ. ಇನ್ನು ಇದಕ್ಕಾಗಿ ವಿಮಾನದಲ್ಲಿ ಪ್ರತ್ಯೇಕವಾದ ಜೋನ್​ ಒಂದನ್ನು ಸಿದ್ದಪಡಿಸಲಾಗುತ್ತಿದೆ. ಈ ಜೋನ್​ನಲ್ಲಿ ಪ್ರಯಾಣಿಸುವವರು ಹೆಚ್ಚುವರಿ ಶುಲ್ಕವನ್ನು ಭರಿಸಬೇಕು ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Job Alert: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ; ಕಂದಾಯ ಇಲಾಖೆಯಲ್ಲಿ 1,700 ‘ ಗ್ರಾಮಕರಣಿಕರ ‘ ಹುದ್ದೆ!

Leave A Reply

Your email address will not be published.